IMF projection; ಮೋದಿಯಂತಹ ವ್ಯಕ್ತಿ ದೇಶವನ್ನು ಮುನ್ನಡೆಸಿದ ಫಲಿತಾಂಶ: ಅಮಿತ್ ಶಾ
ಒಬ್ಬ ಅರ್ಥಶಾಸ್ತ್ರಜ್ಞ ಪ್ರಧಾನಿ ಸಾಧಿಸಲಾಗಲಿಲ್ಲ... ಕಾಂಗ್ರೆಸ್ ಗೆ ಟಾಂಗ್
Team Udayavani, Oct 11, 2023, 4:21 PM IST
ಹೊಸದಿಲ್ಲಿ:ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF) ಭಾರತಕ್ಕೆ ದೃಢವಾದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆ ನೀಡಿರುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಪ್ರತಿಕ್ರಿಯಿಸಿದ್ದು” ಪ್ರಧಾನಮಂತ್ರಿ ನರೇಂದ್ರ ಮೋದಿಯವರಂತಹ ಸಂವೇದನಾಶೀಲ, ಶ್ರಮಶೀಲ ಮತ್ತು ಸಮರ್ಪಿತ ನಾಯಕನಿಂದ ದೇಶವನ್ನು ಮುನ್ನಡೆಸಿದಾಗ, ಅಸಾಧಾರಣ ಫಲಿತಾಂಶಗಳು ಅನಿವಾರ್ಯವಾಗಿ ಬರುತ್ತವೆ” ಎಂದು ಹೇಳಿದ್ದಾರೆ.
“ನಾಯಕತ್ವ ಮುಖ್ಯ. ಸಂವೇದನಾಶೀಲ, ಶ್ರಮಶೀಲ ಮತ್ತು ಸಮರ್ಪಿತ ನಾಯಕನಿಂದ ರಾಷ್ಟ್ರವನ್ನು ಮುನ್ನಡೆಸಿದಾಗ, ಅಸಾಧಾರಣ ಫಲಿತಾಂಶಗಳು ಅನಿವಾರ್ಯವಾಗುತ್ತವೆ. ಪ್ರಧಾನಿ ನರೇಂದ್ರ ಮೋದಿ ಜಿಯವರ ದೂರದೃಷ್ಟಿಯ ನಾಯಕತ್ವದಿಂದಾಗಿ ನಮ್ಮ ರಾಷ್ಟ್ರ ಇಂದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. ಜನರಿಗೆ ಸಮರ್ಪಿತ ನಾಯಕ ಸಾಧಿಸಿದ್ದನ್ನು ಒಬ್ಬ ಅರ್ಥಶಾಸ್ತ್ರಜ್ಞ ಪ್ರಧಾನಿ ಸಾಧಿಸಲಾಗಲಿಲ್ಲ. ನಮ್ಮ ಭಾರತವನ್ನು ವಿಶ್ವದ ಅಗ್ರಗಣ್ಯ ರಾಷ್ಟ್ರವನ್ನಾಗಿ ಮಾಡುವ ಹಾದಿಯಲ್ಲಿ ಮೋದಿ ಜೀ ನಿಮಗೆ ಹೆಚ್ಚಿನ ಶಕ್ತಿ ಸಿಗಲಿ” ಎಂದು ಶಾ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Leadership matters. When the nation is led by a sensitive, hardworking and dedicated leader, then extraordinary results become imperative.
On account of the visionary leadership of PM @narendramodi Ji our nation is growing at a rate faster than that of developed nations today.… pic.twitter.com/NAsaLnGlK8— Amit Shah (@AmitShah) October 11, 2023
IMF ಜಾಗತಿಕ ಬೆಳವಣಿಗೆಯ ಮುನ್ಸೂಚನೆಯನ್ನು 2023 ರಲ್ಲಿ ಮೂರು ಪ್ರತಿಶತದಿಂದ 2024 ರಲ್ಲಿ ಶೇಕಡಾ 2.9 ಕ್ಕೆ ಕಡಿತಗೊಳಿಸಿದ ಹೊರತಾಗಿಯೂ IMF ಭಾರತದ ಜಿಡಿಪಿ ಪ್ರಕ್ಷೇಪಣವನ್ನು ಶೇಕಡಾ 0.2 ರಿಂದ ಶೇಕಡಾ 6.3 ಕ್ಕೆ ಏರಿಸಿತು.
2023 ಮತ್ತು 2024 ಎರಡರಲ್ಲೂ ಭಾರತದ ಬೆಳವಣಿಗೆಯು ಶೇಕಡಾ 6.3 ರಷ್ಟಿದೆ ಎಂದು IMF ನ ‘ವರ್ಲ್ಡ್ ಎಕನಾಮಿಕ್ ಔಟ್‌ಲುಕ್’ ಗಮನಿಸಿದೆ. 2023 ಕ್ಕೆ 0.2 ಶೇಕಡಾವಾರು ಪಾಯಿಂಟ್‌ನ ಮೇಲ್ಮುಖ ಪರಿಷ್ಕರಣೆಯೊಂದಿಗೆ, ಏಪ್ರಿಲ್-ಜೂನ್ ಅವಧಿಯಲ್ಲಿ ನಿರೀಕ್ಷೆಗಿಂತ ಏರಿಕೆ ಸೂಚಿಸಿದೆ.
ಭಾರತದ ಬೆಳವಣಿಗೆಯು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾದ ಚೀನಾಕ್ಕಿಂತ ಹೆಚ್ಚಾಗಿರುತ್ತದೆ ಎಂದು ಅಂದಾಜಿಸಲಾಗಿದೆ. 2024 ರಲ್ಲಿ ಯುನೈಟೆಡ್ ಸ್ಟೇಟ್ಸ್‌ಗೆ IMF ನ ಪ್ರಕ್ಷೇಪಣವು 2023 ರಲ್ಲಿ 2.1 ರ ವಿರುದ್ಧ 1.5 ಆಗಿದೆ, ಜರ್ಮನಿಗೆ -0.5 ವಿರುದ್ಧ 0.9, ಯುಕೆ 0.6 ವಿರುದ್ಧ 0.5 ಮತ್ತು ಕೆನಡಾದ 1.6 ವಿರುದ್ಧ 1.3. ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.