Ooty ತೀವ್ರ ಚಳಿ: ಶೂನ್ಯದತ್ತ ಕನಿಷ್ಠ ತಾಪಮಾನ
Team Udayavani, Jan 19, 2024, 5:55 AM IST
ನೀಲಗಿರಿ: ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ತೀವ್ರ ಚಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಚಳಿಯು ಕೃಷಿ ಮೇಲೆ ಕೂಡ ಪರಿಣಾಮ ಬೀರಿದೆ.
ಹಚ್ಚ ಹಸಿರಿನ ಹುಲ್ಲುಹಾಸು ಹಿಮದಿಂದ ಆವೃತವಾಗಿವೆ ಮತ್ತು ದಟ್ಟ ಮಂಜು ಗೋಚರತೆಯ ಮೇಲೆ ಪರಿಣಾಮ ಬೀರಿದೆ. ತೀವ್ರ ಚಳಿಯು ಸ್ಥಳೀಯರಲ್ಲಿ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತಿದೆ.
ಊಟಿಯಲ್ಲಿ ಬುಧವಾರ 2 ಡಿ.ಸೆ. ತಾಪಮಾನ ದಾಖಲಾಗಿದೆ. ಅದೇ ರೀತಿ ಕಾಂತಾಲ್ ಮತ್ತು ತಲೈಕುಂಠದಲ್ಲಿ 1 ಡಿ.ಸೆ. ಹಾಗೂ ಸ್ಯಾಂಡಿನಲ್ಲಾದಲ್ಲಿ 3 ಡಿ.ಸೆ. ದಾಖಲಾಗಿದೆ. ಚಳಿಯಿಂದ ರಕ್ಷಿಸಿಕೊಳ್ಳಲು ಅಲ್ಲಲ್ಲಿ ಬೆಂಕಿ ಹಚ್ಚಿ, ಚಳಿ ಕಾಯಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.
“ಇದು ಅಕಾಲಿಕವಾದ ಚಳಿಯಾಗಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಎಲ್-ನಿನೊ ಪರಿಣಾಮದಿಂದ ಈ ಬದಲಾವಣೆಯಾಗಿದೆ. ಚಹಾ ತೋಟ, ತರಕಾರಿಗಳು ಮುಖ್ಯವಾಗಿ ಎಲೆಕೋಸು ಬೆಳೆಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಿದೆ. ಅಲ್ಲದೇ ಸ್ಥಳೀಯರಲ್ಲಿ ಜ್ವರ, ತೀವ್ರ ತಲೆನೋವು ಮತ್ತು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಿದೆ’ ಎಂದು ನೀಲಗಿರಿ ಪರಿಸರ ಸಾಮಾಜಿಕ ಟ್ರಸ್ಟ್‌ನ ವಿ.ಶಿವದಾಸ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.