ಎಫ್-16 ಹೊಡೆದುರುಳಿಸಿದ್ದು ಹೌದು
Team Udayavani, Apr 6, 2019, 6:00 AM IST
ವಾಷಿಂಗ್ಟನ್/ಹೊಸದಿಲ್ಲಿ : ಪುಲ್ವಾಮಾ ದಾಳಿ ಬಳಿಕ ಭಾರತ ಮತ್ತು ಪಾಕಿಸ್ಥಾನ ಉದ್ವಿಗ್ನತೆ ಸಂದರ್ಭದಲ್ಲಿ ದೇಶದ ವಾಯುಪ್ರದೇಶ ಪ್ರವೇಶಿಸಿದ ಪಾಕಿಸ್ಥಾನದ ಎಫ್-16 ಯುದ್ಧ ವಿಮಾನ ಹೊಡೆದು ಉರುಳಿಸಿದ್ದು ಸತ್ಯ. ಈ ಬಗ್ಗೆ ದಾಖಲೆಗಳು ಇವೆ ಎಂದು ಭಾರತೀಯ ವಾಯುಪಡೆ (ಐಎಎಫ್) ಶುಕ್ರವಾರ ತಿಳಿಸಿದೆ.
“ಫಾರಿನ್ ಪಾಲಿಸಿ’ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಅಂಶಗಳನ್ನು ತಿರಸ್ಕರಿಸುತ್ತೇವೆ ಎಂದು ಐಎಎಫ್ ಹೇಳಿದೆ. ಪಾಕಿಸ್ಥಾನ ಹೊಂದಿರುವ ಎಫ್-16 ಯುದ್ಧ ವಿಮಾನದ ಪೈಲಟ್‌ನ ವೈರ್‌ಲೆಸ್ ಸಂದೇಶದ ಮಾಹಿತಿ, ಸಿಗ್ನಲ್ ಮತ್ತು ಇತರ ಗ್ರಾಫಿಕ್ ಅಂಶಗಳನ್ನು ಪಡೆದುಕೊಂಡಿದ್ದೇವೆ. ಜತೆಗೆ ಹೊಡೆದು ಉರುಳಿಸಲಾಗಿದ್ದ ವಿಮಾನಕ್ಕೆ ನೀಡಿದ್ದ ಎಚ್ಚರಿಕೆಗಳು ದಾಖಲಾಗಿವೆ ಎಂದು ಐಎಎಎಫ್ ಹೇಳಿಕೆಯಲ್ಲಿ ತಿಳಿಸಿದೆ. ಫೆ.27ರಂದು ಐಎಎಫ್ನ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಮಿಗ್-21 ಬೈಸನ್ ವಿಮಾನದ ಮೂಲಕ ಅದನ್ನು ಹೊಡೆದು ಉರುಳಿಸಿದ ಬಳಿಕ ಪಾಕಿಸ್ಥಾನ ದಲ್ಲಿ ಸೆರೆಯಾಗಿದ್ದರು. ಎಸ್‌ಯು30- ಎಂಕೆಐ, ಮಿರಾಜ್ 2000 ಮತ್ತು ಮಿಗ್ 21 ಬೈಸನ್ ಫೈಟರ್ ವಿಮಾನಗಳ ಮೂಲಕ ಪಾಕಿಸ್ಥಾನ ದ ಎಫ್-16 ವಿಮಾನ ವನ್ನು ಸುತ್ತುವರಿಯಲಾಗಿತ್ತು ಎಂದು ಸ್ಪಷ್ಟನೆ ನೀಡಿದೆ. ಅದಕ್ಕೆ ಪೂರಕವಾಗಿ ಫೆ.28ರಂದು ವಿಮಾನದ ಅವಶೇಷಗಳನ್ನೂ ಪ್ರದರ್ಶಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.