ಇನ್ನು ಕನ್ನಡದಲ್ಲೂ ಎಫ್ ಬಿ ಫ್ಯಾಕ್ಟ್ ಚೆಕಿಂಗ್ ವ್ಯವಸ್ಥೆ
Team Udayavani, Jul 27, 2022, 6:50 AM IST
ನವದೆಹಲಿ: ಫೇಸ್‌ಬುಕ್‌ನಲ್ಲಿ ಇನ್ನು ಕನ್ನಡದಲ್ಲೂ ಮಾಹಿತಿ ದೃಢೀಕರಿಸುವ (ಫ್ಯಾಕ್ಟ್ ಚೆಕಿಂಗ್) ವ್ಯವಸ್ಥೆ ಬರಲಿದೆ. ಈ ಮೂಲಕ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳಾದ ಮಲಯಾಳಂ, ತೆಲುಗು, ತಮಿಳು ಭಾಷೆ ಯಲ್ಲೂ ಈ ವ್ಯವಸ್ಥೆ ಬರಲಿದೆ. ಅದಕ್ಕಾಗಿ ಫೇಸ್‌ಬುಕ್ ಮಾಲೀಕ ಸಂಸ್ಥೆಯಾಗಿರುವ ಮೆಟಾ ಮುಂದಾಗಿದೆ. ನ್ಯೂಸ್‌ಮೀಟರ್ ಹೆಸರಿನ ಫ್ಯಾಕ್ಟ್ ಚೆಕರ್ ಸಂಸ್ಥೆಯೊಂದಿಗೆ ಕೈ ಜೋಡಿಸಿರುವುದಾಗಿ ತಿಳಿಸಿದೆ.
ಫೇಸ್‌ಬುಕ್‌ನಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿ ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಬರುವ ನಕಲಿ ಸುದ್ದಿಗಳನ್ನು ಫ್ಯಾಕ್ಟ್ ಚೆಕರ್ ಸಂಸ್ಥೆಯು ಪರಿಶೀಲಿಸಿ ಅದಕ್ಕೆ ರೇಟಿಂಗ್ ಕೊಡುತ್ತದೆ. ಅಂತಹ ಪೋಸ್ಟ್ ಗಳನ್ನು ಫೇಸ್‌ಬುಕ್ ಹೆಚ್ಚು ಜನರಿಗೆ ತಲುಪದಂತೆ ತಡೆಹಿಡಿಯುತ್ತದೆ. ಹಾಗೆಯೇ ಅದನ್ನು ಶೇರ್ ಮಾಡುವವರಿಗೆ ಎಚ್ಚರಿಕೆಯನ್ನೂ ಕೊಡುತ್ತದೆ.
ಮೆಟಾ ಸಂಸ್ಥೆಯು ಈಗಾಗಲೇ ವಿಶ್ವಾದ್ಯಂತ ಒಟ್ಟು 60 ಭಾಷೆಗಳಲ್ಲಿ ಫ್ಯಾಕ್ಟ್ ಚೆಕ್ಕಿಂಗ್‌ಗೆ 80 ಸಂಸ್ಥೆಗಳನ್ನು ಕೈ ಜೋಡಿಸಿಕೊಂಡಿದೆ. ಅದರಲ್ಲಿ ಭಾರತದಲ್ಲಿಯೇ 11 ಸಂಸ್ಥೆಗಳೊಂದಿಗೆ ಕೈ ಜೋಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್ನಲ್ಲಿ 7.1 ತೀವ್ರತೆ ಭೂಕಂಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.