ಈ ವರ್ಷ ಜುಲೈ 1ರಿಂದ ಆಧಾರ್ ದೃಢೀಕರಣಕ್ಕೆ ಮುಖದ ಬಿಂಬ
Team Udayavani, Jan 15, 2018, 4:02 PM IST
ಹೊಸದಿಲ್ಲಿ : ಮುಖದ ಬಿಂಬ ಆಧಾರಿತ ಆಧಾರ್ ದೃಢೀಕರಣ ಕ್ರಮವನ್ನು ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಪ್ರಕಟಿಸಿದೆ. ಆಧಾರ್ ಮಾಹಿತಿಗಳಿಗೆ ಹೊರಗಿನವರು ಕನ್ನ ಹಾಕುವುದನ್ನು ತಪ್ಪಿಸಲು ಈ ಹೆಚ್ಚುವರಿ ಭದ್ರತಾ ಸ್ತರವನ್ನು ಅಳವಡಿಸಲಾಗಿದೆ ಎಂದು ಅದು ತಿಳಿಸಿದೆ.
ಆಧಾರ್ ಬಳಕೆದಾರರ ಈ ಹೊಸ ಗುರುತು ದೃಢೀಕರಣ ಕ್ರಮ ಇದೇ ವರ್ಷ ಜುಲೈ 1ರಿಂದ ಜಾರಿಗೆ ಬರುವುದೆಂದು ಯುಐಡಿಎಐ ಸಿಇಓ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.
ಈ ಹೊಸ ಕ್ರಮದಿಂದಾಗಿ ಕೈಬೆರಳ ಅಚ್ಚಿನ ಮೂಲಕ ಗುರುತು ದೃಢೀಕರಿಸುವಲ್ಲಿ ಹಿರಿಯ ವಯಸ್ಸಿನವರು ಅನುಭವಿಸುವ ತೊಂದರೆಗಳಿಗೆ ತೆರೆ ಬೀಳಲಿದೆ ಎಂದವರು ಹೇಳಿದ್ದಾರೆ.
ಪ್ರಕೃತ ಆಧಾರ್ ಬಳಕೆದಾರರ ಗುರುತು ದೃಢೀಕರಣಕ್ಕೆ ಕೈ ಬೆರಳ ಅಚ್ಚು ಅಥವಾ ಕಣ್ಣಿನ ಬೊಂಬೆಯನ್ನು ಅಥವಾ ಓಟಿಪಿಯನ್ನು ಬಳಸಲಾಗುತ್ತಿದೆ. ಇನ್ನು ಮುಂದೆ ಮುಖದ ಬಿಂಬವು ಸುಲಭದ ಗುರುತು ದೃಢೀಕರಣ ಕ್ರಮವಾಗಲಿದೆ ಎಂದು ಯುಐಡಿಎಐ ಹೇಳಿದೆ.
ಕಳೆದ ವಾರವಷ್ಟೇ ಯುಐಡಿಎಐ, ಆಧಾರ್ ಬಳಕೆದಾರರು ತಮ್ಮ 13 ಅಂಕಿಗಳ ಆಧಾರ್ ಕಾರ್ಡ್ ಬಳಸುವುದನ್ನು ತಪ್ಪಿಸಲು ಅದರ ಛಾಯಾ ಕಾರ್ಡನ್ನು (ವರ್ಚುವಲ್ ರಿಯಾಲಿಟಿ) ವೆಬ್‌ಸೈಟ್ ಮೂಲಕವೇ ಪಡೆದುಕೊಳ್ಳುವ ವಿಶಿಷ್ಟ ಭದ್ರತಾ ಕ್ರಮವನ್ನು ಪ್ರಕಟಿಸಿತ್ತು.
ಬಳಕೆದಾರರು ಒಂದು ಬಾರಿ ಪಡೆದುಕೊಳ್ಳುವ ವರ್ಚುವಲ್ ರಿಯಾಲಿಟಿ ಕಾರ್ಡ್ ಅನಂತರದಲ್ಲಿ ಇನ್ನೊಂದು ಬಾರಿ ಪಡೆದುಕೊಳ್ಳುವ ವರೆಗೂ ಮೊದಲನೇಯದು ಊರ್ಜಿತದಲ್ಲಿರುತ್ತದೆ ಎಂದು ಯುಐಡಿಎಐ ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Divorce: 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಎ.ಆರ್.ರೆಹಮಾನ್
ಮಣಿಪುರವನ್ನು ರಕ್ಷಿಸಿ: ರಾಷ್ಟ್ರಪತಿಗೆ ಖರ್ಗೆ ಪತ್ರ
Chennai: ಕೃಷ್ಣಗೆ ಎಂ.ಎಸ್.ಸುಬ್ಬುಲಕ್ಷ್ಮಿಪ್ರಶಸ್ತಿ ನೀಡಿಕೆಗೆ ಮದ್ರಾಸ್ ಹೈಕೋರ್ಟ್ ತಡೆ
Savarkar defamation case:: ಡಿ.2ರಂದು ಖುದ್ದು ಹಾಜರಾಗಲು ರಾಹುಲ್‌ಗೆ ಆದೇಶ
Flight: ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.