ಪತ್ನಿಯ Facebookನಲ್ಲಿ ಅಶ್ಲೀಲ ಕಮೆಂಟ್;ಯುವಕನ ಥಳಿಸಿದ IAS ಅಧಿಕಾರಿ
Team Udayavani, Jan 7, 2019, 5:48 AM IST
ಕೋಲ್ಕತ : ತನ್ನ ಪತ್ನಿಯ ಫೇಸ್ ಬುಕ್ ಪ್ರೊಫೈಲ್ ನಲ್ಲಿ ಅಶ್ಲೀಲ ಕಮೆಂಟ್ ಬರೆದ ಕಾರಣಕ್ಕೆ ಯುವಕನೊಬ್ಬನನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡು ಠಾಣೆಯ ಪ್ರಭಾರ ಇನ್ಸ್‌ಪೆಕ್ಟರ್ ಸಮ್ಮುಖದಲ್ಲೇ 2011ರ ಪಶ್ಚಿಮ ಬಂಗಾಲ ಕೇಡರ್‌ನ ಐಎಎಸ್ ಅಧಿಕಾರಿ ನಿಖೀಲ್ ನಿರ್ಮಲ್ (ಮೂಲತಃ ಕೇರಳದವರು) ಮತ್ತು ಅವರ ಪತ್ನಿ, ಯುವಕನನನ್ನು ಹಿಗ್ಗಾ ಮುಗ್ಗಾ ಹೊಡೆದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆಯಲು ಮುಂದಾದ ಸುದ್ದಿಗಾರರಿಗೆ ಐಎಎಸ್ ಅಧಿಕಾರಿಯಾಗಿರುವ ಅಲಿಪುರ್‌ದೋರ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್, ನಿಖೀಲ್ ನಿರ್ಮಲ್ ಅವರಾಗಲೀ, ಫಲಕಾತಾ ಪೊಲೀಸ್ ಠಾಣೆಯ ಪ್ರಭಾರ ಇನ್ಸ್‌ಪೆಕ್ಟರ್ ಸೌಮ್ಯಜಿತ್ ರಾಯ್ ಆಗಲೀ ಪತ್ರಕರ್ತರ ಫೋನ್ ಕರೆಗಳನ್ನು ಉತ್ತರಿಸುತ್ತಿಲ್ಲ.
ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಕೇಸು ದಾಖಲಿಸದೆ, ಆರೋಪಿ ಯುವಕನನ್ನು ಠಾಣೆಗೆ ಕರೆಸಿಕೊಂಡು ಆತನ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿದ ನಿಖೀಲ್ ನಿರ್ಮಲ್ ಅವರು “ನಿನ್ನನ್ನು ನಾನು ಬಿಡೋದಿಲ್ಲ; ನಿನ್ನಂಥವರು ನನ್ನ ಜಿಲ್ಲೆಯಲ್ಲೇ ಇರಕೂಡದು; ನಿನ್ನ ಮನೆಗೇ ಬಂದು ನಿನ್ನನ್ನು ಕೊಂದು ಹಾಕುತ್ತೇನೆ’ ಎಂಬ ಬೆದರಿಕೆ ಹಾಕಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಹಾಗೆಯೇ ಆತನ ಪತ್ನಿ ಯುವಕನನ್ನು ಹೊಡೆಯುತ್ತಾ, “ಹೇಳು, ಯಾರ ಕುಮ್ಮಕ್ಕಿನಿಂದ ನೀನು ಈ ಕೆಟ್ಟ ಕೆಲ್ಸ ಮಾಡಿದ್ದೀಯ ಹೇಳು’ ಎಂದು ಕೂಗುತ್ತಿದ್ದುದು ವಿಡಿಯೋದಲ್ಲಿ ಕಂಡು ಬಂದಿದೆ.
ಘಟನೆಯು ಪಶ್ಚಿಮ ಬಂಗಾಲದ ಅಧಿಕಾರಿಗಳ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.