ಆಘಾತ ತಂದ ಬಾಲಕಿ ಪಯಣ
ಹೇಳದೆ ಬಂದ ಗೆಳತಿಯ ಕಂಡು ಬಾಲಕನಿಗೆ ಆಘಾತ
Team Udayavani, Aug 29, 2019, 5:31 AM IST
ಭೋಪಾಲ: ಬೆಂಗಳೂರಿನ ಹತ್ತನೇ ತರಗತಿಯ ಬಾಲಕಿಯೊಬ್ಬಳು ತನ್ನ ಫೇಸ್ಬುಕ್ ಗೆಳೆಯನಿಗೆ ಅಚ್ಚರಿ ನೀಡಲು ಭೋಪಾಲಕ್ಕೆ ತೆರಳಿದ್ದ ಘಟನೆ ಭಾನುವಾರ ನಡೆದಿದೆ. ಗೆಳತಿ ಹೇಳದೇ ಕೇಳದೆ ಬಂದು ಮನೆ ಬಾಗಿಲು ಬಡಿಯುತ್ತಿದ್ದಂತೆಯೇ ಕಂಗಾಲಾದ ಬಾಲಕ ಆಕೆಯನ್ನು ಮನೆಯಲ್ಲಿ ಉಳಿಸಿಕೊಳ್ಳಲು ನಿರಾಕರಿಸಿದ್ದಾನೆ. ಬದಲಿಗೆ, ಆಕೆಗೆ ಹೊಟೇಲ್ ರೂಮ್ ಬುಕ್ ಮಾಡಿಕೊಟ್ಟಿದ್ದಾನೆ. ಆದರೆ ಹೋಟೆಲ್ ರೂಮ್ನಲ್ಲಿ ಇರಲು ಇಷ್ಟವಿಲ್ಲದ ಬಾಲಕಿ ಭೋಪಾಲದಲ್ಲಿ ಮನಬಂದಂತೆ ತಿರುಗಾಡುತ್ತಿದ್ದಳು, ಅನಂತರ ಅಳುತ್ತಿದ್ದ ಈಕೆಯನ್ನು ಗಸ್ತು ಪೊಲೀಸರು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ತನ್ನ ಫೇಸ್ಬುಕ್ ಗೆಳೆಯನ ಗುಣವನ್ನು ಪರಿಶೀಲಿಸಬೇಕೆಂದು ಭೋಪಾಲಕ್ಕೆ ಬಂದಿದ್ದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಈಕೆ ಬೆಂಗಳೂರಿನಲ್ಲಿ ಕಾಲ್ ಸೆಂಟರ್ ಒಂದರಲ್ಲಿ ಕೆಲಸವನ್ನೂ ಮಾಡುತ್ತಿದ್ದು, ತಂದೆಯೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ತೆರಳಿದ್ದಳು, ಸಂಬಂಧಿಯ ಮನೆಗೆ ತೆರಳುತ್ತಿದ್ದೇನೆ ಎಂದು ಹೇಳಿ ಭೋಪಾಲಕ್ಕೆ ಬಂದಿದ್ದಳು. ಪೊಲೀಸರು ಆಕೆಗೆ ಕೌನ್ಸೆಲಿಂಗ್ ಮಾಡಿದ್ದು, ಮನೆಯಿಂದ ಓಡಿಬರುವುದು ಉತ್ತಮವಾದ್ದಲ್ಲ ಎಂದು ಸೂಚಿಸಿದ್ದಾರೆ. ಅಲ್ಲದೆ, ಬೆಂಗಳೂರಿನಿಂದ ಆಕೆಯ ತಂದೆಯನ್ನು ಕರೆಸಿ ಮಗಳನ್ನು ಕಳುಹಿಸಿಕೊಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.