![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 29, 2020, 11:10 PM IST
ದಿಲ್ಲಿ: ಸಾಮಾಜಿಕ ಮಾಧ್ಯಮಗಳಿಗೆ ಪಾಕಿಸ್ಥಾನ ಸರ್ಕಾರ ಅನುಮೋದಿಸಿರುವ ಹೊಸ ನಿಬಂಧನೆಗಳು (ಸೆನ್ಸಾರ್)ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಅಲ್ಲಿನ ಜನರಲ್ಲಿ ಮುಕ್ತ ಬಳಕೆಗೆ ಇದು ತಡೆಯೊಡ್ಡುತ್ತಿದೆ ಎಂಬ ಕೂಗು ಕೇಳಿಬಂದಿದೆ. ಈ ನಡುವೆ ದೈತ್ಯ ಸಾಮಾಜಿಕ ಜಾಲತಾಣ ಸಂಸ್ಥೆಯಾದ ಫೇಸ್‌ಬುಕ್, ಟ್ವಿಟ್ಟರ್ ಪಾಕ್‌ಗೆ ಎಚ್ಚರಿಕೆಯನ್ನೂ ನೀಡಿದೆ. ಇದಕ್ಕೆ ಗೂಗಲ್ ಧ್ವನಿಗೂಡಿಸಿದೆ.
ಪಾಕಿಸ್ಥಾನದಲ್ಲಿನ ಪರಿಸ್ಥಿತಿಯನ್ನು ಬಹಳ ಸೂಚ್ಯವಾಗಿ ಪರಿಗಣಿಸಿರುವ ಈ ಸಂಸ್ಥೆಗಳು ಹಲವು ದಿನಗಳಿಂದ ಅಲ್ಲಿನ ಬೆಳವಣಿಗೆಗಳನ್ನು ಗಮನಿಸುತ್ತಿದೆ. ಈ ಸಂಬಂಧ ಪಾಕ್‌ಗೆ ಎಚ್ಚರಿಕೆ ನೀಡಿರುವ ಈ ಅಗ್ರ ಸಂಸ್ಥೆಗಳು ವಿರೋಧದ ಜತೆಗೆ ತಮ್ಮ ಸೇವೆಯನ್ನು ಸ್ಥಗಿತಗೊಳಿಸುತ್ತೇವೆ ಎಂದಿದೆ. ಈ ಸಂಬಂಧ ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ಪತ್ರವನ್ನೂ ಈ ದಿಗ್ಗಜರು ಬರೆದಿದ್ದಾರೆ.
ಪಾಕ್‌ನ ಹೊಸ ನಿಯಮದ ಪ್ರಕಾರ ಸಾಮಾಜಿಕ ಮಾಧ್ಯಮ ಕಂಪನಿಗಳು ಇಸ್ಲಾಮಾಬಾದ್‌ನಲ್ಲಿ ಕಡ್ಡಾಯವಾಗಿ ಕಚೇರಿ ತೆರೆಯಬೇಕು. ಮಾತ್ರವಲ್ಲದೇ ಮಾಹಿತಿ ಸಂಗ್ರಹಕ್ಕೆ ಡೇಟಾ ಸರ್ವರ್ ಸಿದ್ಧಪಡಿಸಬೇಕು ಎಂದು ಹೇಳಿದೆ. ಸರಕಾರ ಸೂಚಿಸುವ ಅಂಶಗಳನ್ನು ತೆಗೆದು ಹಾಕಬೇಕು. ಸರ್ಕಾರದ ಈ ನಿಯಮಗಳನ್ವಯ ಕಾರ್ಯಾಚರಿಸದಿದ್ದರೆ ಹೆಚ್ಚಿನ ಮೊತ್ತದ ದಂಡ ತೆರೆಬೇಕಾಗುತ್ತದೆ ಎಂದು ಸರಕಾರ ಹೇಳಿತ್ತು. ಸಾಮಾಜಿಕ ಮಾಧ್ಯಮಗಳ ಕುರಿತ ಹೊಸ ನಿಯಮಗಳು ಮತ್ತು ನಿಬಂಧನೆಗಳನ್ನು ಪರಿಷ್ಕೃತಗೊಳಿಸುವಂತೆ ಏಷ್ಯಾದ ಇಂಟರ್ನೆಟ್ ಮೈತ್ರಿ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪತ್ರವನ್ನೂ ಬರೆದು ವಿಜ್ಞಾವಿಸಿತ್ತು. ನೂತನ ಕಾನೂನಿನ ಪ್ರಕಾರ ಸಂಶಯಾಸ್ಪದ ಚಟುವಟಿಕೆಗಳಲ್ಲಿ ಭಾಗಿಯಾದ ಖಾತೆಗಳಿಗೆ ದಂಡವಿಧಿಸಬಹುದಾಗಿದೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.