ವಿಪತ್ತು ನಿರ್ವಹಣೆಗೆ ಸರಕಾರದ ಜತೆ ಕೈಜೋಡಿಸಿದ ಫೇಸ್‌ಬುಕ್
Team Udayavani, Nov 10, 2017, 6:05 AM IST
ಹೊಸದಿಲ್ಲಿ: ಭಾರತದಲ್ಲಿ ಮನೋರಂಜನೆ, ಮಾಹಿತಿ ವಿನಿಯಮಕ್ಕೆ ಮಾತ್ರ ಸೀಮಿತವಾಗಿದ್ದ ಜನಪ್ರಿಯ ಜಾಲತಾಣ “ಫೇಸ್‌ಬುಕ್’ ಇದೀಗ ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲೂ ಕೈ ಜೋಡಿಸುವ ಮೂಲಕ ಸಾಮಾಜಿಕ ಕಳಕಳಿಯೊಂದಕ್ಕೆ ಶ್ರೀಕಾರ ಹಾಕಿದೆ.
ಇದೇ ವರ್ಷ ಜಾಗತಿಕ ಮಟ್ಟದಲ್ಲಿ ತಾನು ಪರಿಚಯಿಸಿದ್ದ “ಡಿಸಾಸ್ಟರ್ ಮ್ಯಾಪ್ಸ್’ ಸೇವೆಯನ್ನು ಇದೀಗ ಭಾರತಕ್ಕೂ ಪರಿಚಯಿಸಿರುವ ಫೇಸ್‌ಬುಕ್, ಈ ಮೂಲಕ ವಿಕೋಪ ಬಾಧೆಗೆ ಒಳಗಾದ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳು ವ್ಯವಸ್ಥಿತ ರೀತಿಯಲ್ಲಿ ನಡೆಯಲು ಬೇಕಾದ ಮಾಹಿತಿ ರವಾನಿಸುವು ದಲ್ಲದೆ, ವಿಕೋಪದ ಅನಂತರ ಆಗಬೇಕಾದ ಕೆಲಸಗಳ ಬಗ್ಗೆಯೂ ಸರಕಾರ ಮಾಹಿತಿ ನೀಡಲಿದೆ. ಇದಕ್ಕಾಗಿ, ಭಾರತದ ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ), ಸಮರ್ಥ ಪರಿಸರ ಮತ್ತು ಪರಿಸರ ಅಭಿವೃದ್ಧಿ ಸೊಸೈಟಿ (ಸೀಡ್ಸ್) ಜತೆಗೆ ಫೇಸ್‌ಬುಕ್ ಕೈ ಜೋಡಿಸಿದೆ.
ಕಾರ್ಯ ವೈಖರಿ ಹೇಗೆ?: ಈ ಯೋಜನೆಯಡಿ, ಪ್ರಾಕೃತಿಕ ವಿಕೋಪ ಉಂಟಾದ ಪ್ರದೇಶಗಳಿಗೆ ಸಂಬಂಧಪಟ್ಟಂತೆ, “ಲೊಕೇಷನ್ ಡೆನ್ಸಿಟಿ ಮ್ಯಾಪ್’, “ಮೂವ್‌ಮೆಂಟ್ ಮ್ಯಾಪ್’, “ಸೇಫ್ಟಿ ಚೆಕ್ ಮ್ಯಾಪ್’ ಎಂಬ 3 ಬಗೆಯ ಭೂಪಟಗಳ ಸೇವೆ ನೀಡುವ ಮೂಲಕ ಪರಿಹಾರ ಕಾರ್ಯಗಳಿಗೆ ಸಹಾಯ ಮಾಡ ಲಿದೆ ಫೇಸ್‌ಬುಕ್. “ಲೊಕೇಷನ್ ಮ್ಯಾಪ್’ ಸಹಾಯ ದಿಂದ ವಿಕೋಪಕ್ಕೆ ತುತ್ತಾದ ಸ್ಥಳದ ಮುಂಚಿನ, ವಿಕೋಪದ ಸಂದರ್ಭದ, ವಿಕೋಪದ ಅನಂತರದ ಸ್ಥಿತಿಗಳ ಮಾಹಿತಿ ರವಾನೆಯಾದರೆ, “ಮೂವ್‌ಮೆಂಟ್ ಮ್ಯಾಪ್’ ಸಹಾಯದಿಂದ ವಿಕೋಪ ತುತ್ತಾದ ಘಳಿಗೆಯ ಅನಂತರದ ಕೆಲವಾರು ಗಂಟೆಗಳಲ್ಲಿ ಅಲ್ಲಿನ ಜನರು ಸಾಗಿಹೋಗಿರುವ ಅಥವಾ ಸಿಲುಕಿ ಹಾಕಿ ಕೊಂಡಿರುವ ಸ್ಥಳಗಳ ಮಾಹಿತಿ ಸಿಗುತ್ತದೆ. ಇನ್ನು “ಸೇಫ್ಟಿ ಮ್ಯಾಪ್’ ಮೂಲಕ ಸಾರ್ವಜನಿಕರು ವಿಕೋಪಕ್ಕೆ ತುತ್ತಾದ ಸ್ಥಳಗಳಲ್ಲಿರಬಹುದಾದ ತಮ್ಮ ಸಂಬಂಧಿಕರು, ಸ್ನೇಹಿತರ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.
ಸಜ್ಜಾಗುತ್ತಿದ್ದಾರೆ ಸ್ವಯಂ ಸೇವಕರು
ಸೀಡ್ಸ್ ಸಹಭಾಗಿತ್ವದಲ್ಲಿ ಫೇಸ್‌ಬುಕ್‌ನಲ್ಲಿ ನೊಂದಾಯಿತ ಸ್ವಯಂ ಸೇವಕರಿಗೆ ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕ್ರಮ ಕೈಗೊಳ್ಳುವ ಬಗ್ಗೆ ತರಬೇತಿ ನೀಡಲಾಗುತ್ತಿದ್ದು, ಇವರು ಈ ವಿಕೋಪದ ಸಂದರ್ಭಗಳಲ್ಲಿ ಮ್ಯಾಪ್ ವ್ಯವಸ್ಥೆಗೆ ನೈಜ ಮಾಹಿತಿ ರವಾನಿಸುವ ಕೆಲಸ ಮಾಡಲಿದ್ದಾರೆ. ಸದ್ಯ ಅಸ್ಸಾಂ ಮತ್ತು ಉತ್ತರಾಖಂಡ ಗಳಲ್ಲಿ ಈ ಸ್ವಯಂ ಸೇವಕರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಫೇಸ್‌ಬುಕ್ ಸಂಸ್ಥೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.