ಆತ್ಮಹತ್ಯೆ, ಫೇಸ್ ಬುಕ್ ಲೈವ್ ನಲ್ಲಿ ಸಾವು; ಇನ್ಮುಂದೆ ಫೇಸ್ ಬುಕ್ ನಿಂದ ಕಡಿವಾಣ
ಜೀವ ಉಳಿಸುವುದಕ್ಕೆ ಮುಂದಾದ ಫೇಸ್‌ಬುಕ್
Team Udayavani, Sep 12, 2019, 7:40 PM IST
ಫೇಸ್‌ಬುಕ್ ಅಂತ ಹೇಳಿದಾಕ್ಷಣ ಹಲವರಿಗೆ ನಾನಾ ಅಭಿಪ್ರಾಯಗಳು ಹುಟ್ಟಿಕೊಳ್ಳುತ್ತೇವೆ. ಇದರಿಂದ ಎಷ್ಟು ಉಪಯೋಗವಾಗುತ್ತದೆಯೋ ಅಷ್ಟೇ ದುರುಪಯೋಗ ಇದೆ ಎಂಬುದು ಕೆಲವರ ಅಭಿಪ್ರಾಯವಾಗಿದ್ದರೆ, ಅದನ್ನು ಹೇಗೆ ಉಪಯುಕ್ತ ಮಾಡಿಕೊಳ್ಳುತ್ತೇವೆ ಎಂಬುದು ನಮ್ಮ ಇಚ್ಚಾಶಕ್ತಿಗೆ ಬಿಟ್ಟಿದ್ದು ಎಂಬ ವಾದ ಹಲವರದ್ದಾಗಿದೆ.
ಆದರೆ ಪ್ರತಿನಿತ್ಯ ನೂತನ ಪ್ರಯೋಗಗಳಿಂದ ಅಪಾರ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಎಂದಿಗೂ ನನ್ನನ್ನು ಕೆಟ್ಟ ಉದ್ದೇಶಗಳಿಗೆ ಬಳಸಿ ಎಂದು ಹೇಳಿಲ್ಲ. ಸಾಮಾಜಿಕ ತಾಣವಾಗಿ ಹುಟ್ಟಿಕೊಂಡ ಈ ವೇದಿಕೆ ಇಂದು ಹಲವಾರು ವಿಷಯಗಳನ್ನು ಹಂಚಿಕೊಳ್ಳುವಲ್ಲಿ ಕಾರ್ಯನಿರತವಾಗಿದೆ.
ಮತ್ತೊಂದು ಸಮಾಜಮುಖಿ ಕಾರ್ಯಕ್ಕೆ ಮುನ್ನುಡಿ
ಹೌದು ಇದೀಗ ಆತ್ಮಹತ್ಯೆಯಂತಹ ಪ್ರಕರಣಗಳನ್ನು ನಿಯಂತ್ರಿಸಲು ಫೇಸ್‌ಬುಕ್ ಒಂದು ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಕಳೆದ ಕೆಲ ವರ್ಷಗಳಿಂದ ಹೆಚ್ಚಿನ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಪ್ರಾಣ ಕಳೆದುಕೊಂಡವರ ಸಂಖ್ಯೆ ಏರುತ್ತಲೇ ಇದೆ. ಈ ಅಂಶವನ್ನು ಗಮನಿಸಿರುವ ಫೇಸ್‌ಬುಕ್ ಸಂಸ್ಥೆ ಆತ್ಮಹತ್ಯೆ ಅಥವಾ ಸ್ವಯಂ ಪ್ರೇರಿತ ಕೃತ್ಯಗಳನ್ನು ಪ್ರೇರೇಪಿಸುವಂತಹ ಚಿತ್ರಣಗಳನ್ನು, ಗ್ರಾಫಿಕ್ಸ್ ಗಳ ಬಳಕೆ ನಿಷೇಧಿಸುವ ಮೂಲಕ ಆತ್ಮ ಹತ್ಯೆ ಪ್ರಕರಣಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.
ಶೈಕ್ಷಣಿಕ ಸಂಶೋಧನೆ ಮೂಲಕ ಅರಿವು
ಆತ್ಮಹತ್ಯೆ ತಡೆ ಕುರಿತು ಅರಿವು ಮೂಡಿಸಲು ಮುಂದಾಗಿರುವ ಫೇಸ್ ಬುಕ್, ಆತ್ಮಹತ್ಯೆಗೆ ಕಾರಣಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಶೈಕ್ಷಣಿಕ ಸಂಶೋಧನೆಯನ್ನು ನಡೆಸುವ ಯೋಜನೆ ಹಾಕಿಕೊಂಡಿದೆ. ಜತೆಗೆ ಈ ವರದಿಯನ್ನು ದಿನಪತ್ರಿಕೆ ಹಾಗೂ ಚಾನೆಲ್‌ಗಳೊಂದಿಗೆ ಹಂಚಿಕೊಳ್ಳುವ ಮೂಲಕ ಆತ್ಮಹತ್ಯೆ ಕೃತ್ಯಗಳ ಕುರಿತು ಅರಿವು ಮೂಡಿಸಲಿದೆ.
ಮನೋಸ್ಥರ್ಯದ ಬೆಂಬಲ
ಹಿಂದಿನ ವರದಿಗಳಲ್ಲಿ ಮಾನಸಿಕ ಒತ್ತಡಗಳಿಂದ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಾಬೀತಾಗಿದ್ದು, ಈ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ತಜ್ಞರನ್ನು ನಿಯೋಜಿಸಿಕೊಳ್ಳುತ್ತಿದ್ದು, ಒತ್ತಡದಂತಹ ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ಮನೋ ಬೆಂಬಲವನ್ನು ನೀಡುವ ಅಭಿಲಾಷೆ ಫೇಸ್ ಬುಕ್ ಇಟ್ಟಿಕೊಂಡಿದೆ.
ಸಾಫ್ಟ್ ವೇರ್ ಅಳವಡಿಕೆ
ಸ್ವಯಂ ಹಾನಿಗೆ ಅಥವಾ ಆತ್ಮಹತ್ಯೆ ಸಂಬಂಧಿತ ಪೋಸ್ಟ್‌ಗಳನ್ನು ಹುಡುಕಲು ಫೇಸ್ ಬುಕ್ ನೂತನ ಸಾಫ್ಟ್ ವೇರ್ ಅನ್ನು ಕಂಡು ಹಿಡಿದಿದ್ದು, ಆತ್ಮಹತ್ಯೆ ಅನ್ನು ತಡೆಗಟ್ಟುವುದರೊಂದಿಗೆ ಭಯೋತ್ಪಾದನೆ ಅಶ್ಲೀಲತೆಯನ್ನು ಉತ್ತೇಜಿಸುವ ಪೋಸ್ಟ್‌ಗಳನ್ನು ಇದು ಪತ್ತೆ ಹಚ್ಚಲಿದೆ.
1.5 ಮಿಲಿಯನ್ ಪ್ರಕರಣಗಳು ಪತ್ತೆ
ಏಪ್ರಿಲ್ ಮತ್ತು ಜೂನ್ ನಡುವೆ ಸುಮಾರು 1.5 ಮಿಲಿಯನ್‌ಗಿಂತಲೂ ಹೆಚ್ಚು ಆತ್ಮಹತ್ಯೆ ಹಾಗೂ ಸ್ವಯಂ ಹಾನಿ ಮಾಡಿಕೊಳ್ಳುವಂತಹ ಪ್ರಕರಣಗಳು ದಾಖಲಾಗಿದ್ದು, ಶೇ 95 ರಷ್ಟು ಇದಕ್ಕೂ ಮುನ್ನ ಚಿತ್ರಣಗಳನ್ನು ಫೇಸ್‌ಬುಕ್‌ನಿಂದ ಡಿಲಿಟ್ ಮಾಡಲಾಗಿದೆ. ಇದರೊಂದಿಗೆ ಇನ್ ಸ್ಟಾಗ್ರಾಮ್ ನಲ್ಲಿಯೂ 800,000 ಕ್ಕೂ ಹೆಚ್ಚು ಈ ಸಂಬಂಧಿ ವಿಷಯಗಳನ್ನು ಪತ್ತೆ ಹಚ್ಚಲಾಗಿದೆ.
ವಿಡಿಯೋ ಕಂಡರೆ ಸೂಕ್ತ ಕ್ರಮ
ಫೇಸ್‌ಬುಕ್ ಬಳಕೆ ಮಾಡಿಕೊಂಡು ಲೈವ್ ಆಗಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಇತ್ತೀಚೆಗೆ ಜಾಸ್ತಿಯಾಗಿದೆ. ಸೆಲ್ಫಿà ವಿಡಿಯೋ ಮಾಡುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದವರನ್ನು ಕೂಡಲೇ ಪತ್ತೆ ಹಚ್ಚಿ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯಲಾಗುತ್ತಿದೆ. ಜತೆಗೆ ಇಂತಹ ವಿಡಿಯೋಗಳನ್ನು ವೈರಲ್ ಮಾಡದಂತೆ ಸೂಕ್ತ ಕ್ರಮಗಳನ್ನು ತೆಗೆದು ಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.