ವರ್ಚುವಲ್ ಐಡಿ ಜತೆಗೆ ಮುಖ ಗುರುತು ವ್ಯವಸ್ಥೆ
Team Udayavani, Jan 16, 2018, 6:10 AM IST
ಹೊಸದಿಲ್ಲಿ: ಇನ್ನು ಮುಂದೆ ಆಧಾರ್ ದೃಢೀಕರಣಕ್ಕೆ ಮುಖವನ್ನೂ ಬಳಕೆ ಮಾಡಲಾಗುತ್ತದೆ. ಹೀಗೆಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಸೋಮವಾರ ತಿಳಿಸಿದೆ. ಈಗಿರುವ ಬೆರಳಚ್ಚು ಗುರುತು ಮತ್ತು ಕಣ್ಣುಗಳ ಮಾಹಿತಿ ಜತೆಗೆ ಅದನ್ನೂ ಸೇರಿಸಿಕೊಳ್ಳಲಾಗುತ್ತದೆ. ಜುಲೈನಿಂದ ಹೊಸ ವ್ಯವಸ್ಥೆ ಜಾರಿಯಾಗಲಿದೆ ಎಂದು ಪ್ರಾಧಿಕಾರ ಹೇಳಿದೆ. ಸದ್ಯ ಇರುವ ಬಯೋಮೆಟ್ರಿಕ್ ವ್ಯವಸ್ಥೆ ಮೂಲಕ ನೋಂದಣಿಗೆ ಸಮಸ್ಯೆ ಎದುರಿಸುವಂಥ ವೃದ್ಧರು ಮತ್ತು ಇತರರಿಗೆ ಇದು ನೆರವಾಗಲಿದೆ.
ಕೈಗುರುತು, ಕಣ್ಣುಗಳ ಮಾಹಿತಿ ದಾಖಲೀಕರಣ ಅಥವಾ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಮೂಲಕ ಅದನ್ನು ದಾಖಲಿಸಲಾಗುತ್ತದೆ. ಅದಕ್ಕಾಗಿ ಯಾವುದೇ ಹೊಸ ರೀತಿಯ ದಾಖಲೆಗಳನ್ನು ನೀಡಬೇಕಾದ ಅಗತ್ಯವಿಲ್ಲ. ಏಕೆಂದರೆ ಅವರ ಪ್ರಾಥಮಿಕ ಮಾಹಿತಿಗಳೆಲ್ಲ ಆಧಾರ್ ಪ್ರಾಧಿಕಾರದ ಬಳಿ ದಾಖಲಾಗಿಯೇ ಇರುತ್ತದೆ. ಹಾಲಿ ಇರುವ ಬಯೋಮೆಟ್ರಿಕ್ ವ್ಯವಸ್ಥೆಗಳ ಮೂಲಕ ದೃಢೀಕರಣ ನಡೆಸುವುದಕ್ಕೆ ಕಷ್ಟವಾಗುತ್ತಿದೆ ಎಂಬ ಹಲವು ದೂರುಗಳ ಹಿನ್ನೆಲೆಯಲ್ಲಿ ಯುಐಡಿಎಐ ಈ ಕ್ರಮ ಕೈಗೊಂಡಿದೆ.
ಮೇಲ್ದರ್ಜೆಗೆ ಏರಿಕೆ: ಹೊಸ ನಿರ್ಧಾರದ ಹಿನ್ನೆಲೆಯಲ್ಲಿ ಆಧಾರ್ ಪ್ರಾಧಿಕಾರ ಬಯೋಮೆಟ್ರಿಕ್ ಡಿವೈಸ್‌ಗಳನ್ನು ಪೂರೈಕೆ ಮಾಡುವ ಸಂಸ್ಥೆಗಳ ಜತೆಗೆ ಮುಖವನ್ನು ಗುರುತಿಸುವಂಥ ವ್ಯವಸ್ಥೆಯನ್ನು ನೀಡುವಂತೆ ಮನವಿ ಮಾಡಿಕೊಳ್ಳಲಿದೆ. ಅದಕ್ಕೆ ಪೂರಕವಾಗಿ ಸಾಫ್ಟ್ ವೇರ್ ಸಿದ್ಧಪಡಿಸಬೇಕಾಗಿದ್ದು, ಸರಿಯಾಗಿ ಮುಖದ ಚಿತ್ರ ಸೆರೆ ಹಿಡಿಯುವಂಥ ವ್ಯವಸ್ಥೆ, ಡಿಜಿಟಲ್ ಮಾದರಿಯಲ್ಲಿ ಸಹಿ ಮಾಡಿ, ಗೂಢ ಲಿಪಿ(ಎನ್‌ಕ್ರಿಪ್ಶನ್) ಮೂಲಕ ಅದನ್ನು ದೃಢೀಕರಿ ಸು ವಂಥ ವ್ಯವಸ್ಥೆ ಜಾರಿ ಮಾಡಬೇಕಾಗಿದೆ. ಆಧಾರ್‌ನಲ್ಲಿರುವ ಖಾಸಗಿ ಮಾಹಿತಿ ಸೋರಿಕೆಯಾಗುತ್ತದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಪ್ರಾಧಿಕಾರ ಮಾರ್ಚ್‌ನಿಂದ ವಚ್ಯುìವಲ್ ಐಡಿ ಜಾರಿಗೆ ತರುವ ಬಗ್ಗೆ ವಾರದ ಹಿಂದೆ ಘೋಷಣೆ ಮಾಡಿತ್ತು.
ನೀವು ಮತ್ತೂಮ್ಮೆ ಹೋಗಬೇಕಾಗಿಲ್ಲ
ಆಧಾರ್ ದೃಢೀಕರಣಕ್ಕೆ ಮುಖಚಹರೆಯನ್ನೂ ಬಳಸಬಹುದು ಎಂದು ಪ್ರಾಧಿಕಾರ ಘೋಷಿಸಿದೆಯೆಂದು ಆಧಾರ್ ಕಾರ್ಡ್ ಮಾಡಿಸಿಕೊಂಡವರು ಮತ್ತೂಮ್ಮೆ ದೃಢೀಕರಣ ಮಾಡಿಸಿಕೊಳ್ಳಲು ಹೋಗಬೇಕಾಗಿಲ್ಲ. ವೃದ್ಧಾಪ್ಯದಿಂದಾಗಿ ದೃಢೀಕರಣ ಸಾಧ್ಯವಾಗದವರು, ಕೈ ಬೆರಳಚ್ಚು ಸಮಸ್ಯೆ, ಕಣ್ಣಿನ ಸಮಸ್ಯೆಯಿರುವ ಕಾರಣ ಆಧಾರ್ ಮಾಡಿಸಿಕೊಳ್ಳಲು ಆಗದವರು ಮಾತ್ರ ತಮ್ಮ ಮುಖ ಚಹರೆಯನ್ನು ದೃಢೀಕರಿಸಿಕೊಂಡು ಆಧಾರ್ ಕಾರ್ಡ್ ಪಡೆಯಬಹುದು. ಇದು ಇಂಥವರಿಗೆ ಇರುವಂಥ ಹೆಚ್ಚುವರಿ ಅವಕಾಶವಾಗಿದೆ ಎಂದು ಆಧಾರ್ ಪ್ರಾಧಿಕಾರ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.