ಫ್ಯಾಕ್ಟ್ ಚೆಕ್: ಪತಂಜಲಿ ʼಬೀಫ್ ಬಿರಿಯಾನಿʼ ಉತ್ಪನ್ನ ಫೋಟೋ ವೈರಲ್:ಹಿಂದಿನ ಅಸಲಿಯತ್ತೇನು?
ಬಾಬಾ ರಾಮ್ ದೇವ್ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ ಒತ್ತಾಯಿಸಿದ್ದರು.
Team Udayavani, Sep 21, 2022, 5:30 PM IST
ವೈರಲ್ ಆದ ಫೋಟೋ
ನವದೆಹಲಿ: ಭಾರತದಲ್ಲಿ ಗೋವಿಗೆ ಪವಿತ್ರ ಸ್ಥಾನ ನೀಡಲಾಗಿದೆ. ಅಲ್ಲದೇ ಧಾರ್ಮಿಕ ನಂಬಿಕೆ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಯಾಗಿದೆ. ಏತನ್ಮಧ್ಯೆ ಪತಂಜಲಿಯ ಬೀಫ್ ಬಿರಿಯಾನಿ ಎಂಬ ಉತ್ಪನ್ನವೊಂದು ವೈರಲ್ ಆಗುತ್ತಿದೆ.
ಇಂದು ಆನ್ಲೈನ್ ನಲ್ಲಿ ಯಾವ ಆಹಾರವನ್ನು, ಅದಕ್ಕೆ ಸಂಬಂಧಪಟ್ಟ ಮಸಾಲೆಯನ್ನು ಕ್ಷಣ ಮಾತ್ರದಲ್ಲಿ ಆರ್ಡರ್ ಮಾಡಬಹುದು. ಯೋಗ ಗುರು ರಾಮದೇವ್ ಅವರ ಪತಂಜಲಿ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಸಸ್ಯಹಾರಿ, ಗೋವಿನ ತುಪ್ಟ, ಪತಂಜಲಿ ಪೇಸ್ಟ್, ಸೇರಿದಂತೆ ಹಲವಾರು ಉತ್ಪನ್ನಗಳನ್ನು ಪತಂಜಲಿ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಕಳೆದ ಕೆಲ ದಿನಗಳಿಂದ ʼಬೀಫ್ ಬಿರಿಯಾನಿʼ ಎನ್ನುವ ಮಸಾಲೆ ಉತ್ಪನ್ನದ ಫೋಟೋವೊಂದು ಫಾರ್ವಡ್ ಆಗುತ್ತಿದೆ. ಇದರ ಮೇಲೆ ರಾಮ್ ದೇವ್ ಅವರ ಪತಂಜಲಿ ಪ್ರಾಡಕ್ಟ್ ಎಂದು ಉಲ್ಲೇಖಿಸಲಾಗಿದೆ.
ಕಳೆದ ವರ್ಷ ಬಾಬಾ ರಾಮ್ ದೇವ್ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ ಒತ್ತಾಯಿಸಿದ್ದರು. ಕೆಲವರು ʼಬೀಫ್ ಬಿರಿಯಾನಿʼ ಉತ್ಪನ್ನದ ಫೋಟೋವನ್ನು ನೋಡಿ ರಾಮ್ ದೇವ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟೀಕಿಸುತ್ತಿದ್ದಾರೆ.
ಫ್ಯಾಕ್ಟ್ ಚೆಕ್ ನಲ್ಲಿ ಬಯಲಾಯಿತು ಅಸಲಿಯತ್ತು:
ಟ್ವಿಟರ್ ಹಾಗೂ ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ರಾಮ್ ದೇವ್ ಬ್ರ್ಯಾಂಡ್ ನೇಮ್ ನೊಂದಿಗೆ ಪತಂಜಲಿ ಅವರ ʼಬೀಫ್ ಬಿರಿಯಾನಿʼ ಮಸಾಲೆ ಮಿಶ್ರಿತ ಪ್ರಾಡಕ್ಟ್ ನ ಅಸಲಿಯತ್ತನ್ನು ಪರಿಶೀಲಿಸಲು ಹೊರಟ ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ತಂಡ ʼಬೀಫ್ ಬಿರಿಯಾನಿʼ ಯ ಅಸಲಿ ಕಹಾನಿಯನ್ನು ಬಯಲು ಮಾಡಿದೆ.
ಮೊದಲಿಗೆ ಬಾಕ್ಸ್ ನ ಬ್ರ್ಯಾಂಡಿಂಗ್ ಬಾಕ್ಸ್ ನ ಬದಿ ಮುಂದಿನ ಭಾಗದಿಂದ ಭಿನ್ನವಾಗಿ ಇರುವುದು ಗೊತ್ತಾಗಿದೆ. ಗೂಗಲ್ ಲೆನ್ಸ್ ಮೂಲಕ ಫೋಟೋವನ್ನು ಸ್ಕ್ಯಾನ್ ಮಾಡಿ ನೋಡಿದಾಗ, ಅದೇ ರೀತಿಯ ಫೋಟೋ ಬಂದಿದೆ. ಅಮೆಜಾನ್ ಆನ್ಲೈನ್ ಆರ್ಡರ್ ಮಾಡುವ ಸೈಟ್ ನಲ್ಲಿ ಬಂದಿರುವ ಹಲವು ಫೋಟೋಗಳಲ್ಲಿ ಎಲ್ಲೂ ಕೂಡ ರಾಮ್ ದೇವ್ ಹೆಸರುಳ್ಳ ʼಬೀಫ್ ಬಿರಿಯಾನಿʼ ಎಂಬ ಉತ್ಪನ್ನ ಕಂಡಿಲ್ಲ. ಕಂಡದ್ದು ನ್ಯಾಷನಲ್ ಫುಡ್ ಕಂಪೆನಿಯ ಬೀಫ್ ಬಿರಿಯಾನಿಯ ಪ್ರಾಡಕ್ಟ್ ಗಳು. ಬಳಿಕ ನ್ಯಾಷನಲ್ ಫುಡ್ ಕಂಪೆನಿಯ ಸೈಟ್ ನಲ್ಲಿ ನೋಡಿದಾಗ ಅಲ್ಲಿದ್ದ ಬೀಫ್ ಬಿರಿಯಾನಿ ಬ್ರ್ಯಾಂಡಿಂಗ್ ಫೋಟೋಗಳು ಹಾಗೂ ಇಂಟರ್ ನೆಟ್ ನಲ್ಲಿ ಶೇರ್ ಆದ ಫೋಟೋ ಕೂಲಂಕಷವಾಗಿ ಹೋಲಿಕೆ ಮಾಡಿ ನೋಡಿದಾಗ ಫ್ಯಾಕ್ಟ್ ಚೆಕ್ ತಂಡಕ್ಕೆ, ನ್ಯಾಷನಲ್ ಫುಡ್ ಕಂಪೆನಿ ಉತ್ಪನ್ನಕ್ಕೆ ರಾಮ್ ದೇವ್ ಹಾಗೂ ಪತಂಜಲಿ ಹೆಸರನ್ನು ಎಡಿಟ್ ಮಾಡಿ ಹಾಕಿರುವುದು ಬೆಳಕಿಗೆ ಬಂದಿದೆ.
ನ್ಯಾಷನಲ್ ಫುಡ್ ಕಂಪೆನಿಯ ಹಿನ್ನೆಲೆಯನ್ನು ನೋಡಿದಾಗ ಇದು ಪಾಕಿಸ್ತಾನದ ಮೂಲದ ಕಂಪೆನಿಯೆಂದು ತಿಳಿದು ಬಂದಿದೆ. 1970 ರಲ್ಲಿ ಆರಂಭವಾದ ಈ ಕಂಪೆನಿ ಇಂದು 13 ರಾಷ್ಟ್ರಗಳಿಗೆ ಆಹಾರ ಉತ್ಪನ್ನ ಸರಬರಾಜು ಮಾಡುವ ಕಂಪೆನಿಯಾಗಿ ಬೆಳೆದಿದೆ.
ಪತಂಜಲಿ ಉತ್ಪನ್ನವನ್ನು ನೋಡಿದ ಫ್ಯಾಕ್ಟ್ ಚೆಕ್ ತಂಡಕ್ಕೆ ಅಲ್ಲಿ ಪೌಡರ್ ಮಿಶ್ರಿತ ಉತ್ಪನ್ನಗಳು ಕಂಡು ಬಂದಿತ್ತೇ ವಿನಃ ಈ ರೀತಿಯ ಯಾವುದೇ ಪ್ರಾಡಕ್ಟ್ ಸಿಕ್ಕಿಲ್ಲ. ಈ ಫೋಟೋವನ್ನು ಯಾರೋ ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ ಎನ್ನುವುದು ಫ್ಯಾಕ್ಟ್ ಚೆಕ್ ಮೂಲಕ ತಿಳಿದು ಬಂದಿದೆ.
#FactCheck: Many people on social media are sharing a photo of a packaged beef biryani spice mix, which has the name of Yoga guru Ramdev as part of the branding. #AFWACheck has found that the image is digitally morphed. (@riddhish9234)https://t.co/KzRFcPogUL
— India Today Fact Check (@AFWACheck) September 21, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.