ಸಿಗಲಿದೆ ಫ್ಯಾಮಿಲಿ ಐಡಿ ಕಾರ್ಡ್!
Team Udayavani, Jun 4, 2021, 6:50 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಆಧಾರ್ ಕಾರ್ಡ್ ಮಾದರಿ ಯಲ್ಲೇ ದೇಶದ ಪ್ರತೀ ಕುಟುಂಬಕ್ಕೂ ಕುಟುಂಬ ಕಾರ್ಡೊಂದನ್ನು ನೀಡುವ ಹೊಸ ಚಿಂತನೆಗೆ ಮೋದಿ ಸರಕಾರ ಕೈ ಹಾಕಿದೆ. ಈ ಕಾರ್ಡ್ನಲ್ಲಿಯೂ ಆಧಾರ್ ಕಾರ್ಡ್ನಲ್ಲಿರುವಂತೆಯೇ ಒಂದು ವಿಶಿಷ್ಟ ಸಂಖ್ಯೆಯಿರಲಿದ್ದು, ಆ ಸಂಖ್ಯೆಯ ಮೂಲಕ ಆ ಕುಟುಂಬವನ್ನು ಗುರುತಿಸಬಹುದಾಗಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಎಂಇಐಟಿವೈ) ಅಧಿಕಾರಿಗಳು, ನ್ಯಾಶನಲ್ ಇನ್ಫೊರ್ಮ್ಯಾಟಿಕ್ ಸೆಂಟರ್ (ಎನ್ಐಸಿ) ಹಾಗೂ ನ್ಯಾಶನಲ್ ಇನ್ಫೊರ್ಮ್ಯಾಟಿಕ್ ಸೆಂಟರ್ ಸರ್ವೀಸಸ್ ಇಂಕ್ (ಎನ್ಐಸಿಎಸ್ಐ) ಅಧಿಕಾರಿಗಳು ಸೇರಿಕೊಂಡು ಈ ಯೋಜನೆ ಜಾರಿಗೊಳಿ ಸಲು ವಿವಿಧ ಸಚಿವಾಲಯಗಳಿಗೆ ಪತ್ರ ಬರೆದು ಸಲಹೆ ಕೇಳಿದ್ದಾರೆ. ಇದರ ಜತೆಗೆ ಎಪ್ರಿಲ್ನಲ್ಲಿ ಒಂದು ಹಂತದ ಚರ್ಚೆ ನಡೆದಿತ್ತು. ಮಾಹಿತಿ ಹಂಚಿಕೆ ಮತ್ತು ಇತರ ಅಂಶಗಳಿಗಾಗಿ ಶೀಘ್ರವೇ ನೋಡಲ್ ಅಧಿಕಾರಿ ನೇಮಕಗೊಳಿ ಸುವಂತೆ ಸಚಿವಾಲಯಗಳಿಗೆ ಮನವಿ ಮಾಡಲಾಗಿದೆ. ಜತೆಗೆ ಶೀಘ್ರದಲ್ಲಿಯೇ ಸಲಹಾ ಸಭೆಗಳನ್ನು ನಡೆಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು “ದ ಪ್ರಿಂಟ್’ಗೆ ತಿಳಿಸಿದ್ದಾರೆ.
ಉದ್ದೇಶವೇನು?: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಲಾಭ ವನ್ನು ಪ್ರತೀ ಕುಟುಂಬಕ್ಕೂ ಸಿಗುವಂತೆ ಮಾಡುವ ಉದ್ದೇಶದಿಂದ ಈ ಕುಟುಂಬ ಕಾರ್ಡ್ ಪರಿಕಲ್ಪನೆಗೆ ಮೂಲ ಕಾರಣ ಎಂದು ಕೇಂದ್ರದ ಕೆಲವು ಅಧಿಕಾರಿಗಳು ತಿಳಿಸಿದ್ದಾರೆ.
ಹರಿಯಾಣ ಮಾದರಿ: 2019ರ ಜುಲೈಯಲ್ಲಿ ಇಂಥ ಕಾರ್ಡ್ ಹರಿಯಾಣ ದಲ್ಲಿ ಜಾರಿಯಾಗಿದೆ. ಅದಕ್ಕೆ “ಪರಿವಾರ್ ಪೆಹಚಾನ್ ಪತ್ರ’ ಎಂದು ಹೆಸರು ಇರಿಸಲಾಗಿದೆ. ಕುಟುಂಬದಲ್ಲಿನ ಎಲ್ಲ ಸದಸ್ಯರನ್ನು ಒಳಗೊಂಡಂತೆ ಇರುವ ಒಂದು ಕಾರ್ಡ್. ಅದಕ್ಕಾಗಿ ರಾಜ್ಯ ಸರಕಾರದ ಯಾವುದಾದರೂ ಒಂದು ಯೋಜನೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವುದು ಅಗತ್ಯ. ಕುಟುಂಬ ಸದಸ್ಯರ ಅನುಮತಿ ಪಡೆದುಕೊಂಡೇ ಅವರ ಪ್ರಾಥಮಿಕ ವಿವರಗಳನ್ನು ಅಲ್ಲಿ ಸಂಗ್ರಹಿಸಲಾಗುತ್ತಿದೆ.
ಕಾರ್ಡ್ನ ಪ್ರಯೋಜನ :
ಪ್ರತಿಯೊಂದು ಕುಟುಂಬಕ್ಕೂ ಕಾರ್ಡ್ ವಿತರಣೆ.
ಪ್ರತೀ ಕಾರ್ಡ್ನಲ್ಲಿಯೂ ಒಂದು ವಿಶಿಷ್ಟ ಗುರುತಿನ ಸಂಖ್ಯೆ.
ಕುಟುಂಬದ ಎಲ್ಲ ಸದಸ್ಯ ರಿಗೂ ಇದೇ ಸಂಖ್ಯೆ ಅನ್ವಯ.
ಈ ಮೂಲಕ ಪ್ರತೀ ಕುಟುಂಬವನ್ನೂ ರಾಷ್ಟ್ರೀಯ ಕುಟುಂಬ ಯೋಜನೆಗಳ ಜಾಲದಲ್ಲಿ ನೋಂದಣಿ.
ಇದರಿಂದ ಕುಟುಂಬ ಆಧಾರಿತ ಯೋಜನೆಗಳ ಫಲಾನುಭವಿಗಳನ್ನು ಗುರು ತಿಸಲು ನೆರವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.