ಲಾಕ್‌ಡೌನ್ ಸಂದರ್ಭ ಹೆಚ್ಚಾಗುತ್ತಿರುವ ಕೌಟುಂಬಿಕ ವಿವಾದಗಳು
ಪುಣೆಯಲ್ಲಿ ಒಂದೂವರೆ ವರ್ಷದಲ್ಲಿ 1,535 ಪುರುಷರಿಂದ ಪೊಲೀಸರಿಗೆ ದೂರು
Team Udayavani, Jun 10, 2021, 10:31 PM IST
ಪುಣೆ: ಕೋವಿಡ್ ಸೋಂಕಿನಿಂದ ಅನೇಕ ಮಂದಿ ಮನೆಯಿಂದಲೇ ಕೆಲಸ ಮಾಡುತ್ತಿದ್ದು, ಈ ಮಧ್ಯೆ ಮನೆಯಲ್ಲಿ ಕೌಟುಂಬಿಕ ವಿವಾದಗಳು ಹೆಚ್ಚಾಗುತ್ತಿವೆ. ಕುಟುಂಬ ಜಗಳಗಳು ಪುರುಷರ ಮೇಲೂ ಪರಿಣಾಮ ಬೀರುತ್ತಿದ್ದು, ಪುಣೆಯಲ್ಲಿ ಕಳೆದ ಒಂದೂವರೆ ವರ್ಷಗಳಲ್ಲಿ 1,535 ಪುರುಷರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪುಣೆ ಪೊಲೀಸರ ಟ್ರಸ್ಟ್ ರೂಮ್‌ಗೆ ನೀಡಿದ ದೂರಿನಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಕೊರೊನಾ ಅವಧಿಯಿಂದ ಒಟ್ಟು 3,000 ದೂರುಗಳು ದಾಖಲಾಗಿವೆ. ಗಂಡನ ವಿರುದ್ಧ ಮಹಿಳೆಯರು ಸಲ್ಲಿಸಿರುವ ದೂರುಗಳ ಸಂಖ್ಯೆ 1,540ರಷ್ಟಿದೆ. ಇದರರ್ಥ ಪುರುಷರು ಮಹಿಳೆಯರಂತೆಯೇ ಕಿರುಕುಳವನ್ನು ಎದುರಿಸಬೇಕಾಗುತ್ತದೆ ಎಂದು ವರದಿಯೊಂದು ಹೇಳಿದೆ.
ಈ ದೂರುಗಳಲ್ಲಿ 2,394 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ದಂಪತಿಗಳ ನಡುವಿನ ವಿವಾದಗಳು ಸೌಹಾರ್ದಯುತವಾಗಿ ಇತ್ಯರ್ಥಗೊಂಡಿವೆ. ಕೊರೊನಾ ಕಾಯಿಲೆ ಬಗ್ಗೆ ದಂಪತಿಗಳ ನಡುವೆ ವಿವಾದಗಳು ಹೆಚ್ಚುತ್ತಿವೆ. ಪುಣೆ ಪೊಲೀಸ್ ಟ್ರಸ್ಟ್‌ನಿಂದ ಕೌನ್ಸೆಲಿಂಗ್ ನೀಡಲಾಗುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ದಂಪತಿಗಳನ್ನು ಪೊಲೀಸ್ ಠಾಣೆಗಳಿಗೆ ಕರೆಯಲಾಗುತ್ತಿದೆ. ಪತಿ ಮತ್ತು ಪತ್ನಿ ನಡುವಿನ ಜಗಳಗಳು ಹೆಚ್ಚಾಗಿದ್ದರೂ ಸಣ್ಣ ವಿಷಯಗಳಲ್ಲೇ ಭಿನ್ನಾಭಿಪ್ರಾಯ ಹೊಂದಿದ್ದಾರೆ.
ವಾದದಿಂದಾಗಿ ಇಬ್ಬರು ಪರಸ್ಪರ ಕಿರುಕುಳ ನೀಡಿಕೊಂಡಿದ್ದಲ್ಲದೆ, ಕಳೆದ ಒಂದೂವರೆ ವರ್ಷದಲ್ಲಿ ಪತ್ನಿಯರ ವಿರುದ್ಧ ಪುರುಷರಿಂದ ದಾಖಲಾಗುವ ದೂರುಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷ 1,283 ಪುರುಷರು ಪುಣೆ ಪೊಲೀಸ್ ಟ್ರಸ್ಟ್‌ಗೆ ಕುಟುಂಬ ಜಗಳಗಳ ಬಗ್ಗೆ ದೂರು ನೀಡಿದ್ದರು. ಒಟ್ಟು 791 ದೂರುಗಳನ್ನು ಮಹಿಳೆಯರು ದಾಖಲಿಸಿದ್ದಾರೆ. ಈ ವರ್ಷದ ಮೇ ಅಂತ್ಯದವರೆಗೆ 252 ಪುರುಷರು ಮತ್ತು 749 ಮಹಿಳೆಯರು ದೂರು ದಾಖಲಿಸಿದ್ದಾರೆ.
ವಿವಾದ ಪರಿಹರಿಸಲು ಯತ್ನ :
ಟ್ರಸ್ಟ್ ಕೇಂದ್ರಕ್ಕೆ ಪುರುಷರಿಂದ ದಾಖಲಾಗುವ ದೂರುಗಳ ಸಂಖ್ಯೆ ಹೆಚ್ಚಿವೆ. ಸಣ್ಣ ವಿವಾದದಿಂದಾಗಿ ಪತ್ನಿ ಮನೆಗೆ ಬರುವುದಿಲ್ಲ ಅಥವಾ ಪತ್ನಿ ಕಿರುಕುಳ ನೀಡುತ್ತಿದ್ದಾಳೆ ಎಂಬ ದೂರುಗಳ ಸಂಖ್ಯೆ ಹೆಚ್ಚಾಗಿದೆ. ವೈವಾಹಿಕ ವಿವಾದಗಳು ಕುಟುಂಬದೊಳಗೆ ಬಗೆಹರಿಯುವುದಿಲ್ಲ. ಪೊಲೀಸರು ದಂಪತಿಗಳ ನಡುವಿನ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ.– ಸುಜಾತಾ ಶನ್ಮೆಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್, ಟ್ರಸ್ಟ್ ರೂಮ್ ಪುಣೆ ಪೊಲೀಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.