ಸರಕಾರಿ ನೌಕರರ ಭತ್ಯೆಗೆ ಕತ್ತರಿ
Team Udayavani, Jul 11, 2017, 10:23 AM IST
ಹೊಸದಿಲ್ಲಿ: ಕೇಂದ್ರ ಸರಕಾರಿ ಉದ್ಯೋಗಿಗಳಿಗೆ ನೀಡುತ್ತಿದ್ದ ಕುಟುಂಬ ಯೋಜನೆ ಭತ್ಯೆ ಮತ್ತು ಸಂಪುಟ ಕಾರ್ಯದರ್ಶಿಗಳಿಗೆ ನೀಡಲಾಗುತ್ತಿದ್ದ ಮಾಸಿಕ ಮನರಂಜನಾ ಭತ್ತೆಯನ್ನು ಕೇಂದ್ರ ಸರಕಾರ ರದ್ದುಪಡಿಸಿದೆ. ಇದರೊಂದಿಗೆ ಕೆಲ ಆಯ್ದ ವಿಭಾಗಗಳ ಉದ್ಯೋಗಿಗಳಿಗೆ ನೀಡಲಾಗುತ್ತಿದ್ದ ಸಾಬೂನು, ಹೇರ್ಕಟ್ಟಿಂಗ್, ಆಹಾರ ಇನ್ನಿತರ ಭತ್ತೆಗಳನ್ನೂ ತಡೆಹಿಡಿಯಲಾಗಿದೆ.
ಇತ್ತೀಚೆಗೆ ಹಣಕಾಸು ಕಾರ್ಯದರ್ಶಿ ಅಶೋಕ್ ಲಾವಾಸಾ ನೇತೃತ್ವದ ಭತ್ತೆ ಕುರಿತ ಸಮಿತಿ (ಸಿಒಎ) ವಿವಿಧ ಸರಕಾರಿ ಅಧಿಕಾರಿ ಗಳಿಗೆ ನೀಡುತ್ತಿದ್ದ ಭತ್ತೆ ರದ್ದುಗೊಳಿಸುವುದು ಮತ್ತು ಪರಿಷ್ಕರಣೆಗೆ ಸೂಚಿಸಿದ್ದು, ಅದರಂತೆ ಸರಕಾರ ಕ್ರಮ ಕೈಗೊಂಡಿದೆ ಎಂದು ಹೇಳ ಲಾಗಿದೆ. ಇದೇ ಸಂದರ್ಭ ಅಂತ್ಯಕ್ರಿಯೆ ಮತ್ತು ಸೈಕಲ್ ಭತ್ತೆಗಳನ್ನು ಮುಂದುವರಿಸ ಲಾಗಿದ್ದು, ಪರಿಷ್ಕರಿ ಸಲಾಗಿದೆ.
ಕೆಲವೊಂದು ಭತ್ತೆಗಳ ಪರಿಷ್ಕರಣೆ ಕುರಿತಂತೆ ಕಳೆದ ಜೂ.28ರಂದು ಪ್ರಧಾನಿ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಬಗ್ಗೆ ಜು.6ರಂದು ಆದೇಶ ಹೊರಡಿಸಲಾಗಿತ್ತು.
ಎ. 27ರಂದು ಸಿಎಒ ಭತ್ತೆಗಳ ಕುರಿತ ವರದಿ ನೀಡಿತ್ತು. ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಉಲ್ಲೇಖೀಸಿದ ವರದಿ ಉದ್ಯೋಗಿಗಳಿಗೆ ನೀಡಲಾ ಗಿದ್ದ 196 ವಿವಿಧ ರೀತಿಯ ಭತ್ತೆಗಳ ಪೈಕಿ ಕೆಲವನ್ನು ಕೈಬಿಟ್ಟು 34 ಶಿಫಾರಸುಗಳನ್ನು ಮಾಡಿತ್ತು. ಹಿರಿತನಕ್ಕೆ ಪೂರಕವಾಗಿ ವಿವಿಧ ಅಧಿಕಾರಿಗಳಿಗೆ 210 ರೂ.ಗಳಿಂದ 1 ಸಾವಿರ ರೂ.ವರೆಗೆ ಮಾಸಿಕ ಕುಟುಂಬ ಯೋಜನೆ ನೀಡಲಾಗುತ್ತಿತ್ತು. ಜನ ಸಂಖ್ಯಾ ನಿಯಂತ್ರಣಕ್ಕೆ ಪ್ರತ್ಯೇಕ ಭತ್ತೆ ಇದ್ದು ದರಿಂದ ಕುಟುಂಬ ಯೋ ಜನೆ ಭತ್ತೆ ಕೈಬಿಡುವ ಬಗ್ಗೆ ವರದಿ ನೀಡಲಾಗಿದೆ ಎಂದಿದೆ ಸಮಿತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್ಶೂಟರ್ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.