ತಂದೆಯ ಮಾತು ಕೇಳದೆ ಸತ್ತ ಉಗ್ರ
Team Udayavani, Jan 10, 2018, 6:50 AM IST
ಶ್ರೀನಗರ: ಉಗ್ರ ಸಂಘಟನೆ ಸೇರಿದ ಪುತ್ರನನ್ನು ಮನೆಗೆ ಬಾ ಎಂದು ಮನಮಿಡಿಯುವಂತೆ ತಂದೆ ಕರೆದಿದ್ದಷ್ಟೇ… ಆ ಕರೆ ಪುತ್ರನಿಗೆ ಕೇಳಿತೋ ಇಲ್ಲವೋ ಗೊತ್ತಿಲ್ಲ. ಆತ ಮನೆಗೆ ಬಂದಿದ್ದು ಜೀವಂತವಾಗಿ ಅಲ್ಲ. ಹೆಣವಾಗಿ! ಇದು ಕಾಶ್ಮೀರದಲ್ಲಿ ಉಗ್ರ ಸಂಘಟನೆ ಸೇರಿ ಪೊಲೀಸರ ಗುಂಡಿಗೆ ಬಲಿಯಾದ ಯುವಕನ ದುರಂತ ಕಥೆ. ಕುಲ್ಗಾಂವ್‌ನ ಖುದ್ವಾನಿ ಗ್ರಾಮದ ಫರ್ಹಾನ್ ವಾನಿ(18) ಕಳೆದ ವರ್ಷ ಮನೆಯಿಂದ ನಾಪತ್ತೆಯಾಗಿದ್ದ. ಪುತ್ರ ಉಗ್ರ ಸಂಘಟನೆ ಸೇರಿದ್ದ ಎಂಬುದು ತಿಳಿದ ನಂತರ ಆತನ ತಂದೆ ಗುಲಾಮ್ ಮೊಹಮ್ಮದ್ ವಾನಿ ಫೇಸ್‌ಬುಕ್‌ನಲ್ಲಿ ಮನಮಿಡಿ ಯು ವಂತೆ ಪೋಸ್ಟ್ ಹಾಕಿ, ಮನೆಗೆ ವಾಪಸಾಗು ಎಂದು ಕರೆದಿದ್ದರು.
ಆದರೆ ಮಂಗಳವಾರ ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಪೊಲೀಸರೊಂದಿಗಿನ ಕದನದಲ್ಲಿ ಫರ್ಹಾನ್ ಸಾವನ್ನಪ್ಪಿದ್ದಾನೆ. ಈ ಹಿಂದೆ ಅನಂತ್‌ನಾಗ್‌ನಲ್ಲಿ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆ ಸೇರಿದ್ದ ಫುಟ್‌ಬಾಲ್ ಆಟಗಾರ ಮಜೀದ್ ಖಾನ್ ತಾಯಿ ವಿಡಿಯೋ ಬಿಡುಗಡೆ ಮಾಡಿ, ಪುತ್ರನನ್ನು ಕರೆದಿದ್ದು ಮತ್ತು ತಾಯಿಯ ಕರೆಯಿಂದ ಮನಸು ಬದಲಿಸಿ ಉಗ್ರ ಸಂಘಟನೆ ತೊರೆದು ವಾಪಸಾಗಿದ್ದ ಘಟನೆ ಗುಲಾಮ್ ಮೊಹಮ್ಮದ್‌ರವರನ್ನು ಪ್ರೇರೇಪಿಸಿತ್ತು ಎನ್ನಲಾಗಿದೆ. ಆದರೆ, ಇಲ್ಲಿ ಮಾತ್ರ ಫರ್ಹಾನ್ ವಾನಿ ತನ್ನ ತಂದೆಯ ಮನವಿಗೆ ಓಗೊಡಲಿಲ್ಲ. ಈ ಎನ್‌ಕೌಂಟರ್‌ನಲ್ಲಿ ವಾನಿ ಸೇರಿದಂತೆ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹತ್ಯೆಗೈದಿದೆ.
ಮನಾನ್ ಹಿಜ್ಬುಲ್ ಸೇರಿದ್ದು ನಿಜ: ಅಲಿಗ ಮುಸ್ಲಿಂ ವಿವಿಯ ವಿದ್ಯಾರ್ಥಿ ಮನಾನ್ ವಾನಿ ಹಿಜ್ಬುಲ್ ಮುಜಾಹಿದೀನ್ ಸೇರಿದ್ದು ಇದೀಗ ಖಚಿತಪಟ್ಟಿದೆ. ಹಿಜ್ಬುಲ್ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಈ ಬಗ್ಗೆ ಸ್ಥಳೀಯ ಮಾಧ್ಯ ಮ ಗಳಿಗೆ ಖಚಿತಪಡಿಸಿದ್ದಾನೆ. ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಟಿಕಿಪೋರಾ ಪ್ರಾಂತ್ಯದ ವಾನಿ ಕಳೆದ ವಾರ ನಾಪತ್ತೆಯಾಗಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
MUST WATCH
ಹೊಸ ಸೇರ್ಪಡೆ
Kundapura: ಶಾಸ್ತ್ರಿ ಸರ್ಕಲ್ ಬಳಿ ವ್ಯಕ್ತಿಯ ಶವ ಪತ್ತೆ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.