ಇಬ್ಬರು ಪುತ್ರಿಯರನ್ನು ಗುಂಡಿಕ್ಕಿ ಕೊಂದು ಆತ್ಮಹತ್ಯೆಗೆ ಶರಣಾದ ರೈತ
Team Udayavani, Jan 6, 2017, 7:52 PM IST
ಮುಜಫರನಗರ : ಮುಜಫರನಗರ ಜಿಲ್ಲೆ ಮಾಥೇರಿ ಗ್ರಾಮದಲ್ಲಿ 42 ವರ್ಷ ಪ್ರಾಯದ ರೈತನೊಬ್ಬ ಖಿನ್ನತೆಯ ಪರಿಣಾಮವಾಗಿ ತನ್ನ ಇಬ್ಬರು ಅಪ್ತಾಪ್ತ ವಯಸ್ಸಿನ ಪುತ್ರಿಯರನ್ನು ಗುಂಡಿಕ್ಕಿ ಕೊಂದು, ಪತ್ನಿಯನ್ನು ಗಂಭೀರವಾಗಿ ಗಾಯಗೊಳಿಸಿ, ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡ ಅತ್ಯಂತ ದಾರುಣ ಘಟನೆ ನಡೆದಿದೆ.
ರೈತ ಜೈವೀರ್ ಸಿಂಗ್ ಯಾವುದೋ ಕೆಲವು ವಿಷಯಗಳಿಗೆ ಸಂಬಂಧಿಸಿ ಕೆಲ ಕಾಲದಿಂದ ಒತ್ತಡಕ್ಕೆ ಗುರಿಯಾಗಿ ಖನ್ನತೆಯಿಂದ ಬಳಲುತ್ತಿದ್ದ. ಇಂದು ತನ್ನ ಹೊಲದಿಂದ ಮರಳಿದವನೇ ಇದ್ದಕ್ಕಿದ್ದಂತೆಯೇ ತನ್ನ ಪುತ್ರಿಯರಾದ ಸುವೇತಾ (16) ಮತ್ತು ಪ್ರಿಯಾಂಶಿ (9) ಇವರನ್ನು ಗುಂಡಿಕ್ಕಿ ಸಾಯಿಸಿದ. ಬಳಿಕ ಪತ್ನಿ ಮೀನೂ ಅವರನ್ನೂ ಗುಂಡೆಸೆದು ಗಾಯಗೊಳಿಸಿದ. ಆ ಬಳಿಕ ತನಗೆ ತಾನೇ ಗುಂಡೆಸೆದುಕೊಂಡು ಆತ್ಮಹತ್ಯೆ ಮಾಡಿಕೊಂಡ.
ಈ ಘಟನೆ ನಡೆದಾಗ ಆತನ 10 ವರ್ಷ ಪ್ರಾಯದ ಪುತ್ರ ಕೃಷನ್ ಮನೆಯಿಂದ ಸ್ವಲ್ಪ ದೂರದಲ್ಲಿ ಆಟವಾಡುತ್ತಿದ್ದ. ಹಾಗಾಗಿ ಆತ ಬದುಕುಳಿದ.
ಗಂಭೀರವಾಗಿ ಗಾಯಗೊಂಡಿರುವ ಜೈವೀರ್ ಸಿಂಗ್ ನ ಪತ್ನಿ ಮೀನೂ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸುದ್ದಿ ತಿಳಿದೊಡನೆಯೇ ಸ್ಥಳಕ್ಕೆ ಧಾವಿಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸ್ ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.