ಶ್ವಾನದ ಹೆಸರಿಗೆ ಆಸ್ತಿ ಬರೆದ ಮಧ್ಯಪ್ರದೇಶ ರೈತ; ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಯಾವುದೇ ಒತ್ತಡದಿಂದ ಅಲ್ಲ. ಸ್ವಯಂ ನಿರ್ಧಾರಿಂದಲೇ ಈ ರೀತಿ ಮಾಡಿದ್ದೇನೆ' ಎಂದು ವರ್ಮಾ ಹೇಳಿದ್ದಾನೆ.
Team Udayavani, Jan 2, 2021, 10:25 AM IST
ಛಿಂದ್ವಾರಾ: ಮಧ್ಯಪ್ರದೇಶದ ಛಿಂದ್ಪಾರಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಕುಟುಂಬ ಸದಸ್ಯರ ವಿರುದ್ಧ ಸಿಟ್ಟಿಗೆದ್ದಿರುವ ವ್ಯಕ್ತಿ ಅರ್ಧ ಆಸ್ತಿಯನ್ನು ನಾಯಿಯ ಹೆಸರಿಗೆ
ಬರೆದಿದ್ದಾನೆ. ಹೀಗಾಗಿ ಅದು “ಕೋಟಿಪತಿ ಶ್ವಾನ’ವಾಗಿದೆ. ಆಸ್ತಿಯ ಇನ್ನರ್ಧವನ್ನು ಎರಡನೇ ಪತ್ನಿಯ ಹೆಸರಿಗೆ ಬರೆದು ವಿಲ್ ಮಾಡಿದ್ದಾನೆ.
ಜಿಲ್ಲೆಯ ಬಡಿಬ್ರಾ ಎಂಬ ಗ್ರಾಮದ ನಿವಾಸಿಯಾಗಿರುವ ನಾರಾಯಣ ವರ್ಮಾ ಎಂಬಾತ ತನ್ನ ನಿರ್ಧಾರ ಬಗ್ಗೆ ಪ್ರತಿಕ್ರಿಯೆ ನೀಡಿ “ಜಾಕಿ ಹೆಸರಿನ ನಾಯಿ ವಿಧೇಯತೆಯಿಂದ ಸೇವೆ ಮಾಡಿದೆ. ಹಾಗಾಗಿ ಅರ್ಧ ಆಸ್ತಿಯನ್ನು ಅದಕ್ಕೆ ಬರೆದಿದ್ದೇನೆ. ಯಾವುದೇ ಒತ್ತಡದಿಂದ ಅಲ್ಲ. ಸ್ವಯಂ ನಿರ್ಧಾರಿಂದಲೇ ಈ ರೀತಿ ಮಾಡಿದ್ದೇನೆ’ ಎಂದು ವರ್ಮಾ ಹೇಳಿದ್ದಾನೆ.
ವಿಲ್ ಪ್ರಕಾರ ನಾಯಿ ಹೆಸರಲ್ಲಿ 9 ಎಕರೆ ಜಮೀನು ಇದೆ. ಆತನಿಗೆ ಎರಡು ಮದುವೆಯಾಗಿದ್ದು, ಐವರು ಪುತ್ರಿಯರು ಮತ್ತು ಒಬ್ಬ ಮಗ ಇದ್ದಾನೆ. ಅವರ
ನಡವಳಿಕೆಯಿಂದ ಬೇಸತ್ತು ಇಂಥ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾನೆ. ಜಿಲ್ಲೆಯಲ್ಲಿ ಈಗ ವರ್ಮಾ ಹೆಸರು ಮತ್ತು ನಿರ್ಧಾರವನ್ನು ಎಲ್ಲರೂ ಚರ್ಚಿಸುವಂತಾಗಿದೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಅಂಶ ವೈರಲ್ ಆಗಿದೆ.
ಇದನ್ನೂ ಓದಿ:ಮಲ್ಪೆ: ಸ್ಕೂಟರ್- ಇನ್ಸುಲೇಟರ್ ವಾಹನ ಢಿಕ್ಕಿ, ಸ್ಕೂಟರ್ ಸವಾರ ಸಾವು
ಹಡಗಿನಲ್ಲಿರುವ ಭಾರತೀಯರ ರಕ್ಷಣೆಗೆ ಕ್ರಮ
ಚೀನ ಸಮುದ್ರ ವ್ಯಾಪ್ತಿಯಲ್ಲಿ ಎರಡು ಸರಕು ಸಾಗಣೆ ಹಡಗುಗಳಲ್ಲಿ ಇರುವ 39 ಭಾರತದ ನಾವಿಕರನ್ನು ಸ್ವದೇಶಕ್ಕೆ ಕರೆಯಿಸಿಕೊಳ್ಳಲು ಪ್ರಯತ್ನಗಳು ಮುಂದುವರಿದಿವೆ. ಮಾನವೀಯತೆಯ ನೆಲೆಯಲ್ಲಿ ಅವರನ್ನು ಪಾರು ಮಾಡುವ ಬಗ್ಗೆ ಚೀನ ಸರಕಾರದ ಜತೆಗೆ ನಡೆಸಲಾಗುತ್ತದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
ಕೊರೊನಾ ಸೋಂಕಿನ ಕಾರಣವೊಡ್ಡಿ ಚೀನದ ಅಧಿಕಾರಿಗಳು ಎರಡೂ ಹಡಗುಗಳಿಗೆ ಚೀನ ಪ್ರವೇಶ ನಿಷೇಧಿಸಿದೆ ಎಂದಿದ್ದಾರೆ. ಎರಡು ಹಡಗು ಕಂಪೆನಿಗಳ ಆಡಳಿತ ಮಂಡಳಿಗಳು ಸಿಬಂದಿಯ ಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿವೆ. ಜೂ.13ರಿಂದ ಹೆಬಿ ಪ್ರಾಂತ್ಯದ ಜಿಂಗ್‌ಟಾಂಗ್ ಬಂದರು ಸಮೀಪ ಎರಡು ಹಡಗುಗಳು ಲಂಗರು ಹಾಕಿವೆ. ಜೂ.13ರಿಂದ ಹೆಬಿ ಪ್ರಾಂತ್ಯದ ಜಿಂಗ್‌ಟಾಂಗ್ ಬಂದರು ಸಮೀಪ ಎರಡು ಹಡಗುಗಳು ಲಂಗರು ಹಾಕಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.