ರೈತರ ಪ್ರತಿಭಟನೆ ಅನಿರ್ದಿಷ್ಟಾವದಿಯವರೆಗೆ ನಡೆಯಲಿದೆ : ಟಿಕಾಯತ್
ಕೃಷಿ ಕಾಯ್ದೆಗಳನ್ನು ರದ್ದುಗೊಳಿಸದಿದ್ದಲ್ಲಿ ಪರ್ಯಾಯವಾಗಿ ಏನು ಮಾಡುತ್ತಾರೆ..? : ಟಿಕಾಯತ್ ಪ್ರಶ್ನೆ
Team Udayavani, Feb 12, 2021, 2:35 PM IST
ಘಾಜಿಯಾಬಾದ್ : ರೈತರ ಪ್ರತಿಭಟನೆ ಅನಿರ್ದಿಷ್ಟಾವದಿಯವರೆಗೆ ನಡೆಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ನ ವಕ್ತಾರ ರಾಕೇಶ್ ಟಿಕಾಯತ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
“ರೈತರ ಪ್ರತಿಭಟನೆ ಎಲ್ಲಿಯತನಕ ನಡೆಯಲಿದೆ ಎನ್ನುವುದರ ಬಗ್ಗೆ ಯೋಜನೆಗಳಿಲ್ಲ. ಕಾಯ್ದೆಯನ್ನು ಹಿಂಪಡೆಯುವ ತನಕ ರೈತರು ಹಿಂದಿರುಗುವುದಿಲ್ಲ. ಅನಿರ್ದಿಷ್ಟಾವದಿವರೆಗೆ ರೈತರ ಪ್ರತಿಭಟನೆ ನಡೆಯಲಿದೆ. ಅಕ್ಟೋಬರ್ ತನಕ ರೈತರ ಪ್ರತಿಭಟನೆ ಮುಂದುವರಿಯಬಹುದು” ಎಂದು ಅವರು ಶುಕ್ರವಾರ(ಫೆ.12) ಘಾಜಿಯಾಬಾದ್ ನಲ್ಲಿ ಎಎನ್ಐ ಸುದ್ದಿ ಸಂಸ್ಥಗೆ ಪ್ರತಿಕ್ರಿಯಿಸಿದ್ದಾರೆ.
ಓದಿ : ನನ್ನ ಹೆಸರಲ್ಲಿ ಬೇಡ, ರಾಜ್ಯದ ಜನರ ಹೆಸರಲ್ಲಿ ಪೂಜೆ ಮಾಡಿ ಎಂದ ಸಿದ್ದರಾಮಯ್ಯ
ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ಗುರ್ನಾಮ್ ಸಿಂಗ್, “ರೈತರ ಪ್ರತಿಭಟನೆ ಅಕ್ಡೋಬರ್ ತನಕ ನಡೆಯಲಿದೆ” ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಟಿಕಾಯತ್ ಈ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಪ್ರತಿ ಅಕ್ಟೋಬರ್ 2ರಂದು ಘಾಜಿಪುರ ಗಡಿಯಲ್ಲಿ ರೈತರು ಪ್ರತಿಭಟನೆ ಮಾಡುತ್ತಾರೆ. 2018ರಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಗುಂಡುಗಳನ್ನು ಹಾರಿಸಲಾಯಿತು. ಪ್ರತಿ ವರ್ಷ ಘಾಜಿಪುರ ಗಡಿಯಲ್ಲಿ ಕಾರ್ಯಕ್ರಮವನ್ನು ಮಾಡುತ್ತೇವೆ. ಈ ವರ್ಷವೂ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ಇನ್ನು, ಸಂಸತ್ತಿನಲ್ಲಿ ಕೃಷಿ ಕಾನೂನಿನ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿರುವುದು ಒಳ್ಳೆಯ ಸಂಗತಿ ಎಂದಿದ್ದಾರೆ.
ಇಷ್ಟರ ಮಟ್ಟಿಗೆ ಇಡೀ ದೇಶದಾದ್ಯಂತ ರೈತರು ಪ್ರತಿಭಟಿಸುತ್ತಿರುವುದಕ್ಕೆ ಬಲವಾದ ಕಾರಣವಿದೆ. ಒಂದು ವೇಳೆ ಕೃಷಿ ಕಾನೂನುಗಳನ್ನು ರೈತರು ಅಂಗೀಕರಿಸದಿದ್ದರೇ, ಆ ಕಾಯ್ದೆಗಳನ್ನು ರದ್ದುಗೊಳಿಸದಿದ್ದಲ್ಲಿ ಪರ್ಯಾಯವಾಗಿ ಏನು ಮಾಡುತ್ತಾರೆ..? ಎಂದು ಟಿಕಾಯತ್ ಪ್ರಶ್ನಿಸಿದ್ದಾರೆ.
ಓದಿ : ಟ್ರಂಪ್, ಮೆಲನಿಯಾ ನಡುವೆ ಬಿರುಕು..!? ಎಲ್ಲಾ ಸಾಮಾಜಿಕ ಜಾಲತಾಣಗಳು ಡಿಲೀಟ್..!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.