ರೈತರಿಗೆ ಚೌತಿ ಸಿಹಿ
Team Udayavani, Sep 9, 2021, 7:20 AM IST
ಹೊಸದಿಲ್ಲಿ: ಕರ್ನಾಟಕ ಸಹಿತ ಕಬ್ಬು ಬೆಳೆಯುವ ರೈತರಿಗೆ ಕೇಂದ್ರ ಸರಕಾರ ಬುಧವಾರ ಗೌರಿ-ಗಣೇಶ ಹಬ್ಬದ ಸಿಹಿ ಸುದ್ದಿ ನೀಡಿದೆ.
ಇದರ ಜತೆಗೆ ಗೋಧಿ, ಬಾರ್ಲಿ, ಸಾಸಿವೆಯ ಎಂಎಸ್‌ಪಿ ಹೆಚ್ಚಳಕ್ಕೂ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಸಕ್ಕರೆ ಕಾರ್ಖಾನೆಗಳ ಮೂಲಕ ಕಬ್ಬು ಬೆಳೆಗಾರರಿಗೆ ನೀಡುವ ನ್ಯಾಯ ಮತ್ತು ಪ್ರೋತ್ಸಾಹದಾಯಕ ದರ (ಎಫ್ಆರ್‌ಪಿ)ಯನ್ನು ಪ್ರತಿ ಕ್ವಿಂಟಲ್‌ಗೆ 290 ರೂ.ಗಳಿಂದ 295 ರೂ.ಗೆ ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆರ್ಥಿಕ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ತೀರ್ಮಾನ ಪ್ರಕಟಿಸಲಾಗಿದೆ.
ಸಭೆಯ ಬಳಿಕ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮಾತನಾಡಿ, 2020-21ನೇ ಸಾಲಿನ ಕಬ್ಬಿನ ಬೆಳೆಗೆ ಪ್ರತೀ ಕ್ವಿಂಟಲ್‌ಗೆ 285 ರೂ. ನಿಗದಿ ಮಾಡಲಾಗಿತ್ತು. ಸಿಸಿಇಎ ಸಭೆಯಲ್ಲಿ ಕೈಗೊಂಡ ದರ ಏರಿಕೆ ನಿರ್ಧಾರ ಇದುವರೆಗಿನ ಅತ್ಯಧಿಕ ಹೆಚ್ಚಳವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಕಬ್ಬಿನಿಂದ ಉತ್ಪಾದನೆಯಾ ಗುವ ಸಕ್ಕರೆಯ ಶೇ. 10ನ್ನು ಆಧರಿಸಿ ಈ ದರ ನಿಗದಿ ಮಾಡಲಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಸಕ್ಕರೆಯ ಬೆಲೆ ಹೆಚ್ಚಾಗುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.
ಕಬ್ಬಿನಿಂದ ಸಿಗುವ ಸಕ್ಕರೆಯ ಪ್ರಮಾಣ ಶೇ. 10ಕ್ಕಿಂತ ಹೆಚ್ಚಾಗಿದ್ದಲ್ಲಿ ಪ್ರತಿ ಶೇ. 0.1ರಷ್ಟು ಹೆಚ್ಚುವರಿ ಉತ್ಪಾದನೆಗೆ ಪ್ರತಿ ಕ್ವಿಂಟಲ್ 2.90 ರೂ. ಪ್ರೀಮಿಯಂ ನೀಡಲಾಗುತ್ತದೆ ಎಂದರು ಸಚಿವ ಗೋಯಲ್.
ಇಷ್ಟು ಮಾತ್ರವಲ್ಲದೆ, ಸಕ್ಕರೆ ಉತ್ಪಾದನೆ ಪ್ರಮಾಣ ಶೇ. 9.5ಕ್ಕಿಂತ ಕಡಿಮೆಯಾಗಿದ್ದರೆ ಎಫ್ಆರ್‌ಪಿ ದರ ಪ್ರತೀ ಕ್ವಿಂಟಲ್‌ಗೆ 2.90 ರೂ. ಕಡಿಮೆಯಾಗಲಿದೆ. ಈ ಸಂದರ್ಭದಲ್ಲಿ ಬೆಳೆಗಾರರಿಗೆ ಪ್ರತಿ ಕ್ವಿಂಟಲ್ ಕಬ್ಬಿಗೆ 270.75 ರೂ. ಸಿಗಲಿದೆ. ಕಳೆದ ವರ್ಷ ಅದರ ಮೊತ್ತ 270.75 ರೂ. ಆಗಿತ್ತು ಎಂದು ಹೇಳಿದ್ದಾರೆ. ಕೃಷಿ ವೆಚ್ಚ ಮತ್ತು ಬೆಲೆ ನಿಗದಿ ಆಯೋಗ (ಸಿಎಸಿಪಿ) 2021-22ನೇ ಸಾಲಿನಲ್ಲಿ ಕಬ್ಬಿನ ಉತ್ಪಾದನಾ ವೆಚ್ಚ ಪ್ರತಿ ಕ್ವಿಂಟಲ್‌ಗೆ 155 ರೂ. ಎಂದು ನಿಗದಿ ಮಾಡಿದೆ.
ಬೆಲೆ ಹೆಚ್ಚಳವಿಲ್ಲ :
ಎಫ್ಆರ್‌ಪಿ ದರ ಪರಿಷ್ಕರಣೆ ಕಾರಣಕ್ಕಾಗಿ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಹೆಚ್ಚಳ ಮಾಡುವ ಇರಾದೆ ಸರಕಾರಕ್ಕೆ ಇಲ್ಲ ಎಂದು ಗೋಯಲ್ ಹೇಳಿದ್ದಾರೆ. ಸಕ್ಕರೆ ರಫ್ತು ಮತ್ತು ಇಥೆನಾಲ್ ಉತ್ಪಾದನೆಗೆ ಸರಕಾರ ಅಗತ್ಯ ನೆರವು ನೀಡುತ್ತಿದೆ ಎಂದರು. ಕೇಂದ್ರ ಸರಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಕ್ಕರೆ ಉದ್ದಿಮೆ ವಲಯ “ಸಾಧಾರಣ’ ಎಂದಿದೆ. ಜತೆಗೆ ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆಯನ್ನೂ ಪ್ರಸಕ್ತ ಸಾಲಿಗೆ ಪರಿಷ್ಕರಿಸಬೇಕು ಎಂದು ಆಗ್ರಹಿಸಿದೆ.
ಎಂಎಸ್ಪಿ ಹೆಚ್ಚಳ :
ರೈತರ ಆದಾಯ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಮತ್ತು ಹೆಚ್ಚಿನ ಪ್ರದೇಶದಲ್ಲಿ ರಬಿ (ಚಳಿಗಾಲ) ಬೆಳೆ ಬೆಳೆಯುವಂತೆ ಪ್ರೋತ್ಸಾಹಿ ಸಲು ಗೋಧಿ, ಬಾರ್ಲಿ, ಕಡಲೆ, ಹುರುಳಿ, ಎಣ್ಣೆಬೀಜಗಳು/ಸಾಸಿವೆ, ಕುಸುಂಬೆ (sಚfflಟಡಿಛಿr)ಗಳಿಗೆ ಕ್ರಮವಾಗಿ ಪ್ರತೀ ಕ್ವಿಂಟಲ್‌ಗೆ 40 ರೂ.ಗಳಿಂದ 2,015 ರೂ.ಗಳವರೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಿಸುವ ತೀರ್ಮಾನ ಕೈಗೊಂಡಿದೆ.
ಗೋಧಿಗೆ 40 ರೂ. ಏರಿಸಲಾಗಿದ್ದು, ಹೊಸ ದರ 2,015 ರೂ. ಆಗಲಿದೆ. 2021-22ನೇ ಸಾಲಿನಲ್ಲಿ 43 ಮಿ. ಟನ್ ಗೋಧಿ ಉತ್ಪಾದಿಸ ಲಾಗಿದೆ. ಬಾರ್ಲಿಯ ಬೆಂಬಲ ಬೆಲೆಯನ್ನು ಕ್ವಿಂ.ಗೆ 35 ರೂ. ಹೆಚ್ಚಿಸ ಲಾಗಿದ್ದು, 1,635 ರೂ. ಆಗಿದೆ. ಕಡಲೆಗೆ 130 ರೂ., ಹುರುಳಿಗೆ 400 ರೂ., ಕುಸುಂಬೆಗೆ 114 ರೂ. ಬೆಂಬಲ ಬೆಲೆ ಹೆಚ್ಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಪುಟ ಸಭೆಯ ಬಳಿಕ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಗೇಳಿದ್ದಾರೆ.
ಕೇಂದ್ರ ಸರಕಾರ 2021-22 ಮತ್ತು 2022-23ನೇ ಬೆಳೆ ವರ್ಷಕ್ಕಾಗಿ ಆರು ಬೆಳೆಗಳಿಗೆ ಎಂಎಸ್‌ಪಿ ನೀಡಲು ಸದ್ಯಕ್ಕೆ ಒಪ್ಪಿದೆ. ಅಡುಗೆ ಎಣ್ಣೆ ವಿಶೇಷವಾಗಿ ತಾಳೆ ಎಣ್ಣೆಯ ಆಮದು ತಗ್ಗಿಸಿ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಕೇಂದ್ರ ಸರಕಾರ ರಾಷ್ಟ್ರೀಯ ಅಡುಗೆ ಎಣ್ಣೆ ಯೋಜನೆ-ತಾಳೆ (ಎನ್‌ಎಂಇಒ-ಒಪಿ)ಗೆ ಕೇಂದ್ರ ಅನುಮೋದನೆ ನೀಡಿದ್ದು, 11,040 ಕೋಟಿ ರೂ. ಮೊತ್ತ ಮೀಸಲಾಗಿ ಇರಿಸಿದೆ.
ಜವುಳಿ ಕ್ಷೇತ್ರಕ್ಕೆ 10,683 ಕೋಟಿ ರೂ. ಪಿಎಲ್‌ಐ :
ಜವುಳಿ ಕ್ಷೇತ್ರಕ್ಕಾಗಿ ಕೇಂದ್ರ ಸಂಪುಟ 10,683 ಕೋಟಿ ರೂ.ಗಳನ್ನು ಉತ್ಪಾದನೆ ಆಧಾರಿತ ಸಹಾಯಧನ (ಪಿಎಲ್‌ಐ) ನೀಡಲು ಒಪ್ಪಿದೆ. ದೇಶೀಯ ವಾಗಿ ಜವುಳಿ ಕ್ಷೇತ್ರದಲ್ಲಿ ಉತ್ಪಾದನೆ ಮತ್ತು ರಫ್ತು ಹೆಚ್ಚಿಸುವಲ್ಲಿ ಈ ನಿರ್ಧಾರ ನೆರವಿಗೆ ಬರಲಿದೆ. ಇದ ರಿಂದಾಗಿ 7.5 ಲಕ್ಷ ಉದ್ಯೋಗಗಳು ಸೃಷ್ಟಿಯಾಗ ಲಿವೆ ಎಂದು ನಿರೀಕ್ಷಿಸಲಾಗಿದೆ ಎಂದು ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಮಾನವ ಕೈಗಳಿಂದ ಉತ್ಪಾದನೆ (ಎಂಎಂಎಫ್)ಗೊಂಡ ಬಟ್ಟೆಗಳು ಮತ್ತು ಇತರ 10 ವಿಭಾಗಗಳಿಗೆ ಪಿಎಲ್‌ಐ ಸಿಗಲಿದೆ. ಜವುಳಿ ಕ್ಷೇತ್ರಕ್ಕೆ ಬಜೆಟ್‌ನಲ್ಲಿ 10, 683 ಕೋಟಿ ರೂ. ಮೀಸಲಾಗಿ ಇರಿಸಲಾಗಿದೆ ಎಂದರು. ಇತ್ತೀಚೆಗಷ್ಟೇ 13 ಕ್ಷೇತ್ರಗಳಿಗೆ 1.97 ಲಕ್ಷ ಕೋಟಿ ರೂ. ಮೌಲ್ಯದ ಪಿಎಲ್‌ಐ ಅನ್ನು ಕೇಂದ್ರ ಸರಕಾರ ಪ್ರಕಟಿಸಿತ್ತು.
ಬೆಳೆ ಎಷ್ಟಿತ್ತು? ಎಷ್ಟಾಯ್ತು?
(ರೂ.ಗಳಲ್ಲಿ)
ಗೋಧಿ 1,975 2,015
ಬಾರ್ಲಿ 1,600 1,635
ಕಡಲೆ 5,100 5,230
ಹುರುಳಿ 5,100 5,500
ಎಣ್ಣೆ ಬೀಜ 4,650 5,050
ಸಾಸಿವೆ 4,650 5,050
ಕುಸುಂಬೆ 5,327 5,441
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.