Farmers’ Protest; ಪಂಜಾಬ್- ಹರಿಯಾಣದಲ್ಲಿ ರೈತರ ಪ್ರತಿಭಟನೆ: ಪೊಲೀಸರಿಂದ ಕಟ್ಟೆಚ್ಚರ
Team Udayavani, Aug 22, 2023, 12:35 PM IST
ಚಂಡೀಗಢ: ಪ್ರವಾಹದಿಂದ ಉಂಟಾದ ನಷ್ಟಕ್ಕೆ ಪರಿಹಾರ ನೀಡುವಂತೆ 16 ರೈತ ಸಂಘಟನೆಗಳು ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಪಂಜಾಬ್, ಹರಿಯಾಣ ಮತ್ತು ಚಂಡೀಗಢದ ಅಂತಾರಾಜ್ಯ ಗಡಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂಡೀಗಢದಲ್ಲಿ, ರೈತರು ಪ್ರವೇಶಿಸದಂತೆ ತಡೆಯಲು ಎಲ್ಲಾ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಹರ್ಯಾಣ- ಪಂಜಾಬ್ ಗಡಿಯ ಅಂಬಾಲದ ಶಂಭು ಪ್ರದೇಶದಲ್ಲೂ ಭಾರೀ ಬಿಗು ಭದ್ರತೆ ಒದಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಜಾಬ್ ನ ರಾಜಪುರದಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದ್ದು, ಗಲಭೆ ನಿಗ್ರಹ ವಾಹನಗಳು ಮತ್ತು ಸಿಸಿಟಿವಿ ವಾಹನವನ್ನು ಸಹ ನಿಯೋಜಿಸಲಾಗಿದೆ.
ಪ್ರವಾಹದಿಂದ ಉಂಟಾದ ನಷ್ಟಕ್ಕೆ ಪರಿಹಾರ ಒದಗಿಸಬೇಕೆಂದ ಆಗ್ರಹಿಸಿ ರೈತ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದೆ. ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ, ಭಾರ್ತಿ ಕಿಸಾನ್ ಯೂನಿಯನ್ (ಕಾರಂತಿ ಕಾರಿ), ಭಾರ್ತಿ ಕಿಸಾನ್ ಯೂನಿಯನ್ (ಏಕ್ತಾ ಆಜಾದ್), ಆಜಾದ್ ಕಿಸಾನ್ ಕಮಿಟಿ, ದೌಬಾ, ಭಾರ್ತಿ ಕಿಸಾನ್ ಯೂನಿಯನ್ (ಬೆಹ್ರಾಂಕೆ) ಮತ್ತು ಭೂಮಿ ಬಚಾವೊ ಮೊಹಿಮ್ ಸೇರಿ 16 ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.
ಇದನ್ನೂ ಓದಿ:Asia Cup Squad; ‘ಈ ತಂಡದಲ್ಲಿ ಸಮಸ್ಯೆಯಿದೆ…’: ವಿಶ್ವಕಪ್ ವಿಜೇತ ಆಟಗಾರನ ಕಳವಳ
ಪಂಜಾಬ್ ಸೇರಿದಂತೆ ಉತ್ತರ ಭಾರತದಲ್ಲಿ ಪ್ರವಾಹದಿಂದ ಉಂಟಾದ ಹಾನಿಗೆ ಕೇಂದ್ರ ಸರ್ಕಾರವು 50,000 ಕೋಟಿ ರೂಪಾಯಿ ಪ್ಯಾಕೇಜ್ ನೀಡಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ. ಬೆಳೆ ನಷ್ಟಕ್ಕೆ ಎಕರೆಗೆ 50 ಸಾವಿರ, ಹಾನಿಗೀಡಾದ ಮನೆಗೆ 5 ಲಕ್ಷ ಹಾಗೂ ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.