ಕಾಶ್ಮೀರ ಇತ್ಯರ್ಥಕ್ಕೆ ಅಮೆರಿಕ, ಚೀನ ಮಧ್ಯಸ್ಥಿಕೆ : ಫಾರೂಕ್ ಒಲವು
Team Udayavani, Jul 21, 2017, 4:43 PM IST
ಹೊಸದಿಲ್ಲಿ : ”ಸುದೀರ್ಘ ಕಾಲದಿಂದ ಇತ್ಯರ್ಥವಾಗದೆ ನನೆಗುದಿಗೆ ಬಿದ್ದಿರುವ ಕಾಶ್ಮೀರ ಪ್ರಶ್ನೆಯನ್ನು ಬಗೆಹರಿಸಲು ಅಮೆರಿಕ ಮತ್ತು ಚೀನದಂತಹ ಮೂರನೇ ದೇಶವನ್ನು ಭಾರತ ಮಧ್ಯಸ್ಥಿಕೆಗಾಗಿ ಬಳಸಿಕೊಳ್ಳಬೇಕು” ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
“ಸಿಕ್ಕಿಂ ನ ಡೋಕ್‌ಲಾಂ ಗಡಿಯಲ್ಲಿ ಭಾರತ – ಚೀನ ಇದೀಗ ಎರಡು ತಿಂಗಳಿಂದ ಮುಖಾಮುಖೀಯಾಗಿದ್ದು ಗಂಭೀರ ಉದ್ವಿಗ್ನತೆಗೆ ಹಾಗೂ ಸಂಭಾವ್ಯ ಸಮರಕ್ಕೆ ಕಾರಣವಾಗಿರುವ ಈ ಗಡಿ ಬಿಕ್ಕಟ್ಟನ್ನು ಪರಿಹರಿಸಲು ಭಾರತ ಚೀನದೊಂದಿಗೆ ಮಾತುಕತೆ ನಡೆಸಲು ಸಿದ್ಧವಾಗಿದೆ; ಹಾಗಿರುವಾಗ ಬಹು ದೀರ್ಘಕಾಲದಿಂದ ಇತ್ಯರ್ಥವಾಗದೆ ಉಳಿದಿರುವ ಕಾಶ್ಮೀರ ಪ್ರಶ್ನೆಯನ್ನು ಬಗೆಹರಿಸಲು ಭಾರತ ಪಾಕ್ ಜತೆಗೆ ಯಾಕೆ ಮಾತುಕತೆಗೆ ಮುಂದಾಗಬಾರದು; ಅಥವಾ ಮೂರನೇ ದೇಶದ ಮಧ್ಯಸ್ಥಿಕೆಗಾಗಿ ಭಾರತ ಯಾಕೆ ಚೀನ ಅಥವಾ ಅಮೆರಿಕವನ್ನು ಬಳಸಿಕೊಳ್ಳಬಾರದು” ಎಂದು ಫಾರೂಕ್ ಅಬ್ದುಲ್ಲ ಪ್ರಶ್ನಿಸಿದ್ದಾರೆ.
“ನೀವಿನ್ನು ಎಷ್ಟು ಕಾಲ ಕಾಯಲು ಸಾಧ್ಯ ? ಒಂದಲ್ಲ ಒಂದು ದಿನ ನೀವು ಗೂಳಿಯನ್ನು ಅದರ ಕೊಂಬು ಹಿಡಿದುಕೊಂಡೇ ಎದುರಿಸಬೇಕಾಗುವುದು. ಕಾಶ್ಮೀರ ಪ್ರಶ್ನೆಯನ್ನು ಬಗೆಹರಿಸಲು ಭಾರತ – ಪಾಕಿಸ್ಥಾನ ಮಾತುಕತೆ ನಡೆಸುವುದೊಂದೇ ಪರಿಹಾರ ಮಾರ್ಗ. ಕಾಶ್ಮೀರ ಪ್ರಶ್ನೆಯನ್ನು ಬಗೆಹರಿಸಲು ತಾನು ಮಧ್ಯಸ್ಥಿಕೆಗೆ ಸಿದ್ಧನೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆಯೇ ಹೇಳಿದ್ದಾರೆ; ಈಚೆಗೆ ಚೀನ ಕೂಡ ಇಂತಹ ಕೊಡುಗೆಯನ್ನು ನೀಡಿದೆ. ಇವುಗಳನ್ನು ಭಾರತ ಯಾಕೆ ಬಳಸಿಕೊಳ್ಳಬಾರದು” ಎಂದು ಫಾರೂಕ್ ಪ್ರಶ್ನಿಸಿದ್ದಾರೆ.
ಮುಂದುವರಿದು ಅಬ್ದುಲ್ಲ ಹೀಗೆ ಹೇಳುತ್ತಾರೆ : “ಹಿಂದೆ ಅಟಲ್ ಬಿಹಾರಿ ವಾಜಪೇಯಿ ಹೇಳುತ್ತಿದ್ದರು “ನೀವು ಸ್ನೇಹಿತರನ್ನು ಬದಲಾಯಿಸಬಹುದು; ಆದರೆ ನೆರೆಕರೆಯವರನ್ನು ಅಲ್ಲ’ ಎಂದು. ಆದುದರಿಂದ ನೆರೆಹೊರೆಯವರೊಂದಿಗೆ ಮುಂದೆ ಸಾಗಲು ಸ್ನೇಹವೊಂದೇ ಮಾರ್ಗ; ಇಲ್ಲದಿದ್ದರೆ ನಾವು ಹಿನ್ನಡೆಯನ್ನು ಕಾಣುತ್ತೇವೆ; ನೆರೆಹೊರೆಯವರೇ ನಮಗೆ ಶತ್ರುಗಳಾಗುತ್ತಾರೆ.”
ಅಂದ ಹಾಗೆ ಫಾರೂಕ್ ಅವರ ಈ ಮಾತುಗಳು (3ನೇ ದೇಶದ ಮಧ್ಯಸ್ಥಿಕೆ) ರಾಜಕೀಯ ವಲಯದಲ್ಲಿ ಭಾರೀ ಬಿರುಗಾಳಿಯನ್ನು ಎಬ್ಬಿಸಿದೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು “ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಕೇಂದ್ರ ಸರಕಾರದ ನೀತಿಯಿಂದಾಗಿ ಜಮ್ಮು ಕಾಶ್ಮೀರ ನಾಶವಾಗಿ ಹೋಗಿದೆ ಎಂದು ನಾನು ಬಹಳ ಹಿಂದೆಯೇ ಹೇಳಿದ್ದೆ. ಹಾಗಿದ್ದರೂ ಕಾಶ್ಮೀರ ಸಮಸ್ಯೆ ಬಗೆಹರಿಸಲು 3ನೇ ದೇಶದ ಮಧ್ಯಸ್ಥಿಕೆಯ ಉಪಾಯ ಸರ್ವಥಾ ಸರಿಯಲ್ಲ. ಭಾರತವೆಂದರೆ ಕಾಶ್ಮೀರ, ಕಾಶ್ಮೀರವೆಂದರೆ ಭಾರತ’ ಎಂದು ಹೇಳಿದ್ದಾರೆ.
ಫಾರೂಕ್ ಅವರ 3ನೇ ದೇಶದ ಮಧ್ಯಸ್ಥಿಕೆಯ ಉಪಾಯವನ್ನು ಅವರ ಪುತ್ರ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲ ಬೆಂಬಲಿಸಿದ್ದಾರೆ.
“ನನ್ನ ತಂದೆಯ ಮಾತುಗಳನ್ನು ತಿರುಚಿ ಸಂಪೂರ್ಣವಾಗಿ ವಿಕೃತಗೊಳಿಸಲಾಗಿದೆ. ನನ್ನ ತಂದೆ ಕಾಂಗ್ರೆಸ್ ಸದಸ್ಯರಲ್ಲ; ಹಾಗಾಗಿ ಅವರಿಗೆ ಏನು ಹೇಳುವುದಿದೆಯೋ ಅದನ್ನು ಹೇಳುವ ಸ್ವಾತಂತ್ರ್ಯವಿದೆ; ಮತ್ತು ಅವರದನ್ನು ನಿರ್ಭಯರಾಗಿ ಹೇಳಿದ್ದಾರೆ’ ಎಂದು ಉಮರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: ಆರೋಪಿ, ಅಪರಾಧಿ ಮನೆಯನ್ನು ಏಕಾಏಕಿ ನೆಲಸಮ ಮಾಡುವಂತಿಲ್ಲ: ಸುಪ್ರೀಂ ತೀರ್ಪು
Ayodhya; ಖಲಿಸ್ಥಾನ್ ನಾಯಕನಿಂದ ಬೆದರಿಕೆ: ರಾಮ ಮಂದಿರದ ಭದ್ರತೆ ಇನ್ನಷ್ಟು ಹೆಚ್ಚಳ
By-election: ರಾಹುಲ್ ತೊರೆದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುತ್ತಾರಾ?
Maharashtra: ಕಾಂಗ್ರೆಸ್ ಅಭ್ಯರ್ಥಿ ಕಚೇರಿಗೆ ಹೋಗಿ ಮುಖಂಡರಿಗೆ ಸಿಎಂ ಏಕನಾಥ ಶಿಂಧೆ ತರಾಟೆ!
Sivakasi: 60 ರೂ. ಕದ್ದು ಓಡಿ ಹೋಗಿದ್ದ ಆರೋಪಿ 27 ವರ್ಷ ಬಳಿಕ ಸೆರೆ!
MUST WATCH
ಹೊಸ ಸೇರ್ಪಡೆ
Theft Case: ಕದ್ದ ಚಿನ್ನ ಜ್ಯುವೆಲ್ಲರಿಗೆ ಮಾರುವಾಗ ಸಿಕ್ಕಿಬಿದ್ದ!
Arrested: ಫಾರೆಸ್ಟ್ ಗಾರ್ಡ್ ಹುದ್ದೆ ತೊರೆದು ಕಳ್ಳತನಕ್ಕಿಳಿದವ ಸೆರೆ
Supreme Court: ಆರೋಪಿ, ಅಪರಾಧಿ ಮನೆಯನ್ನು ಏಕಾಏಕಿ ನೆಲಸಮ ಮಾಡುವಂತಿಲ್ಲ: ಸುಪ್ರೀಂ ತೀರ್ಪು
Belagavi: ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸ್ಥಾನಕ್ಕೆ ಢವಳೇಶ್ವರ ದಿಢೀರ್ ರಾಜೀನಾಮೆ
Thefte Case: ಕೆಲಸಕ್ಕಿದ್ದ ಮನೆಯಲ್ಲೇ ರೂ. 12 ಲಕ್ಷ. ಚಿನ್ನ ಕದ್ದಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.