ಫಾಸ್ಟಾಗ್ ಕಡ್ಡಾಯಕ್ಕೆ 2 ದಿನಗಳು ಮಾತ್ರ ಬಾಕಿ ; ತಪ್ಪಿದಲ್ಲಿ ದುಪ್ಪಟ್ಟು ಶುಲ್ಕದ ಬರೆ
Team Udayavani, Dec 13, 2019, 8:44 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಹೆದ್ದಾರಿಯಲ್ಲಿ ಸುಲಭ ಟೋಲ್ ಪಾವತಿ ವ್ಯವಸ್ಥೆಗಾಗಿ ಪರಿಚಯಿಸಲಾಗಿದ್ದ ಫಾಸ್ಟಾಗ್ ವ್ಯವಸ್ಥೆ ಬಹುತೇಕ ಕಡೆಗಳಲ್ಲಿ ಜಾರಿಗೆ ಬಂದಿದೆ. ಡಿಸೆಂಬರ್ 15ರಂದು ಇದು ಕಡ್ಡಾಯವಾಗಲಿದೆ. ಕರ್ನಾಟಕದ 36 ಟೋಲ್ ಪ್ಲಾಜಾಗಳನ್ನು ಒಳಗೊಂಡಂತೆ ಒಟ್ಟು 593 ಟೋಲ್ ಗಳಲ್ಲಿ ಫಾಸ್ಟಾಗ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ಹಿಂದೆ ಡಿಸೆಂಬರ್ 1ರಂದು ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಕಡೆಯ ದಿನ ಎಂದು ನಿರ್ಧರಿಸಲಾಗಿತ್ತು.
ಆದರೆ ಸಾಕಷ್ಟು ಸಂಖ್ಯೆಯಲ್ಲಿ ಫಾಸ್ಟಾಗ್‌ಗಳು ಲಭ್ಯವಾಗದೇ ಇದ್ದ ಕಾರಣ ಡಿ. 15ರವರೆಗೆ ಗಡುವನ್ನು ವಿಸ್ತರಿಸಲಾಗಿತ್ತು. ಡಿ. 15ರ ಬಳಿಕ ಫಾಸ್ಟ್‌ಟ್ಯಾಗ್‌ಇಲ್ಲದ ವಾಹನಗಳು ಟೋಲ್ ಪ್ಲಾಜಾಗಳಲ್ಲಿ ನಿಗದಿತ ದರಕ್ಕಿಂತ ದುಪ್ಪಟ್ಟು ರಸ್ತೆ ಶುಲ್ಕವನ್ನು ದಂಡದ ರೂಪದಲ್ಲಿ ತೆರಬೇಕಾಗುತ್ತದೆ. ಈ ದಿನಾಂಕವನ್ನು ಇನ್ನು ವಿಸ್ತರಿಸುವುದು ಅನುಮಾನ.
ಹೇಗೆ ಕಾರ್ಯನಿರ್ವಹಿಸುತ್ತದೆ
ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫೀಕೇಶನ್ (ಆರ್‌ಎಫ್ಐಡಿ) ಎನ್ನುವ ತಂತ್ರಜ್ಞಾನ ಸಹಾಯದೊಂದಿಗೆ ಕಾರ್ಯನಿರ್ವಹಿಸುವ ಪುಟ್ಟ ಸ್ಟಿಕ್ಕರ್‌ಗಳನ್ನು 4 ಚಕ್ರ ಅಥವಾ ಅದಕ್ಕೂ ಮೀರಿದ ಯಾವುದೇ ವಾಹನಗಳ ಮುಂಭಾಗದ ಗಾಜಿನ ಬಳಿ ಅಳವಡಿಸಲಾಗುತ್ತದೆ.
ಟೋಲ್ ಪ್ಲಾಜಾದಲ್ಲಿರುವ ಫಾಸ್ಟಾಗ್‌ಲೇನ್ ಮೂಲಕ ಹಾದು ಹೋದಾಗ ಸ್ವಯಂಚಾಲಿತವಾಗಿ ಆಗಿ ಸ್ಕ್ಯಾನ್ ಆಗುತ್ತದೆ. ಇದೇ ವೇಳೆ ಫಾಸ್ಟಾಗ್ ಖಾತೆಯಿಂದ ಶುಲ್ಕ ಸಂದಾಯವಾಗುತ್ತದೆ. ಇದರ ನೋಟಿಫಿಕೇಶನ್ ಮೊಬೈಲ್‌ಗಳಿಗೆ ಎಸ್‌ಎಂಎಸ್ ಮೂಲಕ ಬರುತ್ತದೆ. ಈ ವ್ಯವಸ್ಥೆಯಲ್ಲಿ ವಾಹನಗಳು ಸಾಲಲ್ಲಿ ನಿಂತು, ಹಣ ಸಂದಾಯ ಮಾಡಿ, ರಶೀದಿ ಪಡೆಯುವ ಅಗತ್ಯ ಇಲ್ಲ.
ಹೊಸ ನಿಯಮ ಏನು?
ದೇಶದ ಎಲ್ಲಾ ಟೋಲ್‌ಗಳಲ್ಲಿ ಫಾಸ್ಟಾಗ್ ಲೇನ್‌ಗಳನ್ನು ಅಳವಡಿಸಲಾಗುತ್ತದೆ. ಅದರ ಮೂಲಕವೇ ವಾಹನಗಳು ಸಂಚರಿಸಬೇಕಾಗಿದ್ದು, ಟೋಲ್ ವೆಚ್ಚವನ್ನು ಫಾಸ್ಟಾಗ್ ಮೂಲಕ ಪಾವತಿಸಬೇಕಾಗುತ್ತದೆ. ಒಂದು ವೇಳೆ ಫಾಸ್ಟಾಗ್ ವ್ಯವಸ್ಥೆ ಅಳವಡಿಸದೇ ಇದ್ದ ವಾಹನವಾದರೆ ಟೋಲ್ ಮೊತ್ತದ ದುಪ್ಪಟ್ಟು ಹಣ ಪಾವತಿಸಬೇಕಾಗುತ್ತದೆ. ಟೋಲ್‌ನ ಒಂದು ಕಡೆ ಮಾತ್ರ ಫಾಸ್ಟಾಗ್ ಮತ್ತು ಇತರ ಪಾವತಿ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತದೆ. ಇಲ್ಲಿ ಫಾಸ್ಟಾಗ್ ಇಲ್ಲದ ವಾಹನಗಳು ಸರತಿ ಸಾಲಿನಲ್ಲಿ ಕಾಯಬೇಕಾಗಿ ಬರುತ್ತದೆ. ಉಳಿದ ಎಲ್ಲಾ ಲೇನ್ ಗಳಲ್ಲಿ (ಪಥ) ಫಾಸ್ಟಾಗ್‌ಗಳು ಮಾತ್ರ ಇರಲಿವೆ.
ಏನು ಲಾಭ?
ಈ ಫಾಸ್ಟಾಗ್ ವ್ಯವಸ್ಥೆಯ ಮೂಲ ಉದ್ದೇಶವೇ ಟೋಲ್‌ಗಳಲ್ಲಿ ಕ್ಯಾಶ್‌ಲೆಸ್ ಪೇಮೆಂಟ್ ಅನ್ನು ಉತ್ತೇಜಿಸುವುದು. ವಾಹನ ದಟ್ಟನೆಯನ್ನು ಕಡಿತಗೊಳಿಸುವುದು ಇದರ ಮತ್ತೂಂದು ಉದ್ದೇಶವಾಗಿದೆ. ಸರಕಾರ ಫಾಸ್ಟಾಗ್ ವಾಹನಗಳಿಗೆ ಶೇ. 2.5 ರಿಯಾಯಿತಿಯನ್ನು ನೀಡುತ್ತದೆ.
ಫಾಸ್ಟಾಗ್ ಎಂಬುದಕ್ಕೆ ನೀವು ರಿಚಾರ್ಜ್ ಮಾಡಿಸಿಕೊಳ್ಳುವ ಅಗತ್ಯ ಇಲ್ಲ. ಏಕೆಂದರೆ ಇದು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವುದರಿಂದ ನಿಮ್ಮ ಖಾತೆಯಿಂದಲೇ ಹಣ ಸಂದಾಯವಾಗುತ್ತದೆ. ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಕಾಯ್ದುಕೊಂಡರೆ ಸಾಕು.
ಆದರೆ ನೀವು ನಿಮ್ಮ ಫಾಸ್ಟಾಗ್ ಅನ್ನು ಎನ್‌ಎಚ್‌ಐನ ವ್ಯಾಲೆಟ್‌ಗೆ ಲಿಂಕ್ ಮಾಡಿದ್ದರೆ ನೀವು ಆ ವ್ಯಾಲೆಟ್ ಅನ್ನು ಇತರ ಪೇಮೆಂಟ್ ವ್ಯವಸ್ಥೆಯ ಮೂಲಕ ರೀಚಾರ್ಜ್ ಮಾಡಿಸಿಕೊಳ್ಳಬೇಕು. ಪ್ರತಿಯೊಂದು ವ್ಯವಹಾರ ಹಾಗೂ ಬ್ಯಾಲೆನ್ಸ್ ಕಡಿಮೆಯಾದಾಗ ಗ್ರಾಹಕರಿಗೆ ಮೊಬೈಲ್ ಎಸ್‌ಎಂಎಸ್ ಸಂದೇಶ ರವಾನೆಯಾಗಲಿದೆ.
ಫಾಸ್ಟಾಗ್ ಕಡ್ಡಾಯದ ಗಡುವು ವಿಸ್ತರಣೆಯಾಗಿದ್ದು, ಜನರು ಟೋಲ್ ಕೇಂದ್ರಗಳಲ್ಲಿ ಕೊಂಡುಕೊಳ್ಳುತ್ತಿದ್ದಾರೆ. ಇದೀಗ ಡಿಸೆಂಬರ್ 15ರ ಗಡುವು ದಾಟಿದ ಬಳಿಕ ಯಾವುದೇ ರಿಯಾಯಿತಿಗಳು ಇರುವುದಿಲ್ಲ, ಮಾತ್ರವಲ್ಲದೇ ದುಪ್ಪಟ್ಟು ದಂಡವನ್ನು ಪಾವತಿಸಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.