ಚಿಕ್ಕಪ್ಪನ ಮೂಲಕ ತನ್ನ 3 ಮಕ್ಕಳ ಹತ್ಯೆ ಮಾಡಿಸಿದ ಪಾಪಿ ತಂದೆ
Team Udayavani, Nov 22, 2017, 12:04 PM IST
ಚಂಡೀಗಢ : ಪಾಪಿ ತಂದೆಯೋರ್ವ ತನ್ನ ಮೂವರು ಮುದ್ದು ಮುದ್ದಾದ ಮಕ್ಕಳನ್ನು ಅವರ ಚಿಕ್ಕಪ್ಪನ ಮೂಲಕ ಅತ್ಯಂತ ಸನಿಹದಿಂದ ಗುಂಡಿಟ್ಟು ಸಾಯಿಸಿ ಬಳಿಕ ಅವರ ಶವಗಳನ್ನು ಪಂಚಕುಲದ ಮೋರ್ನಿ ಅರಣ್ಯದಲ್ಲಿ ಬಿಸುಟ ಅತ್ಯಮಾನುಷ ಘಟನೆ ವರದಿಯಾಗಿದೆ.
ಚಿಕ್ಕಪ್ಪನಿಂದ ಕೊಲೆಗೀಡಾದ ಮೂವರು ಮಕ್ಕಳನ್ನು ಸಮೀರ್ 11, ಸಿಮ್ರಾನ್ 8 ಮತ್ತು ಸಮರ್ 3 ಎಂದು ಗುರುತಿಸಲಾಗಿದೆ.
ತನಗೆ ವಿವಾಹವೇತರ ಸಂಬಂಧವಿದ್ದು ತಾನು ಮರು ಮದುವೆಯಾಗುವುದಕ್ಕೆ ಈ ಮಕ್ಕಳು ತನಗೆ ಒಂದು ಅಡಚಣೆ ಎಂದು ಬಗೆದು ಅವರನ್ನು ನಿರ್ದಯವಾಗಿ ಕೊಲ್ಲಿಸಿದ ಮಕ್ಕಳ ತಂದೆ ಸೋನು ಮಲಿಕ್, ಆತನ ಸೋದರ ಸಂಬಂಧಿಯಾದ ಜಗದೀಪ್ ಮಲಿಕ್ (26) ಪೊಲೀಸರು ಕೊಲೆ ಕೃತ್ಯಕ್ಕೆ ಸಂಬಂಧಿಸಿ ಬಂಧಿಸಿದ್ದಾರೆ. ಸೋನುಗೆ ಕೈತಾಲ್‌ನಲ್ಲಿ ಒಂದು ಫೋಟೋ ಸ್ಟುಡಿಯೋ ಇದೆ.
ಸೋನು ಕುಟುಂಬ ಕುರುಕ್ಷೇತ್ರ ಜಿಲ್ಲಯ ಸಾರ್ಸಾ ಗ್ರಾಮದ ಪೆಹೋವಾ ಬ್ಲಾಕ್‌ನಲ್ಲಿ ವಾಸಿಸಿಕೊಂಡಿದೆ. ಮೂವರು ಮಕ್ಕಳ ಈ ಹತ್ಯಾ ಕೃತ್ಯವು ಭಾನುವಾರ ನಡೆದಿದ್ದು ಮಂಗಳವಾರ ಬೆಳಗ್ಗೆಯಷ್ಟೇ ಇದರ ಮಾಹಿತಿ ಪಡೆದ ಪೊಲೀಸರು ಮಕ್ಕಳ ಶವಗಳನ್ನು ಅರಣ್ಯದಲ್ಲಿ ಶೋಧಿಸಿ ವಶಕ್ಕೆ ತೆಗೆದುಕೊಂಡರು.
ಮಕ್ಕಳ ಹತ್ಯೆಗೈದದ್ದು ತಾನು ಹೌದು ಎಂದು ಜಗದೀಪ್ ಒಪ್ಪಿಕೊಂಡಿದ್ದು ಈ ಕೃತ್ಯವನ್ನು ತಾನು ಸೋನು ಆಣತಿಯಂತೆ ಎಸಗಿದ್ದೇನೆ ಎಂದು ಒಪ್ಪಿಕೊಂಡಿರುವುದಾಗಿ ಕುರುಕ್ಷೇತ್ರ ಪೊಲೀಸ್ ಸುಪರಿಂಟೆಂಡೆಂಟ್ ಅಭಿಷೇಕ್ ಗಗ್‌ರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…