ಅಸ್ಸಾಂನ ಗಾಯಕಿ ಅಫ್ರೀನ್ ವಿರುದ್ಧ ಫತ್ವಾ
Team Udayavani, Mar 16, 2017, 3:50 AM IST
ಹೊಸದಿಲ್ಲಿ: ಇಂಡಿಯನ್ ಐಡಲ್ ಜೂನಿಯರ್-2015 ಟಿವಿ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಆಗಿ ದೇಶದ ಜನರ ಮನಗೆದ್ದ ಗಾಯಕಿ ನಹೀದ್ ಅಫ್ರೀನ್ (16) ವಿರುದ್ಧ ಅಸ್ಸಾಂನ 42 ಮಂದಿ ಮುಸ್ಲಿಂ ಧರ್ಮಗುರುಗಳು ಫತ್ವಾ ಹೊರಡಿಸಿದ್ದಾರೆ. ಮಾ. 25ರಂದು ಮಸೀದಿಯೊಂದರ ಆವರಣದಲ್ಲಿ ಅಫ್ರೀನ್‌ಳ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ಯಾರೂ ಪಾಲ್ಗೊಳ್ಳದಂತೆ ಮೌಲ್ವಿಗಳು ಸೂಚಿಸಿದ್ದಾರೆ. ಜತೆಗೆ, ಸಾರ್ವಜನಿಕವಾಗಿ ಕಾರ್ಯಕ್ರಮ ನೀಡದಂತೆ ಅಫ್ರೀನ್‌ಗೆ ಸೂಚಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಾಲಕಿ, ಫತ್ವಾ ಹೊರಡಿಸಿದ ವಿಚಾರ ತಿಳಿದಾಗ ಹೃದಯ ಒಡೆದಂತಾಯಿತು. ಆದರೆ, ಗಾಯನವು ನನಗೆ ಭಗವಂತ ಕೊಟ್ಟ ವರ. ಅದನ್ನು ಸದ್ಬಳಕೆ ಮಾಡದಿದ್ದರೆ ದೇವರನ್ನೇ ನಿರ್ಲಕ್ಷ್ಯ ಮಾಡಿದಂತೆ. ಹಾಗಾಗಿ, ನಾನು ಹಾಡುವುದನ್ನು ಮುಂದುವರಿಸುತ್ತೇನೆ ಎಂದಿದ್ದಾಳೆ. ಘಟನೆ ಹಿನ್ನೆಲೆ ಅಫ್ರೀನ್‌ಗೆ ಕರೆ ಮಾಡಿರುವ ಅಸ್ಸಾಂ ಸಿಎಂ ಸರ್ಬಾನಂದ ಸೊನೊವಾಲ್, ಆಕೆಗೆ ಭದ್ರತೆ ಸಹಿತ ಎಲ್ಲ ರೀತಿಯ ನೆರವು ನೀಡುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EX PM: ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ-ಸೇನಾ ಗೌರವದೊಂದಿಗೆ ಡಾ.ಸಿಂಗ್ ಅಂತ್ಯಕ್ರಿಯೆ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.