ರಾಂಚಿಯ ಯೋಗ ಶಿಕ್ಷಕಿ ವಿರುದ್ಧ ಫತ್ವಾ,ಜೀವ ಬೆದರಿಕೆ
Team Udayavani, Nov 8, 2017, 2:37 PM IST
ರಾಂಚಿ : ಜಾರ್ಖಂಡ್‌ನ ಪ್ರಸಿದ್ಧ ಯೋಗ ಪಟು, ಶಿಕ್ಷಕಿ ರಾಫಿಯಾ ನಾಝ್ ಅವರಿಗೆ ಸ್ವಧರ್ಮೀಯರೇ ಜೀವ ಬೆದರಿಕೆ ಒಡ್ಡಿ ಫತ್ವಾ ಹೊರಡಿಸಿದ್ದಾರೆ.ಯೋಗ ಇಸ್ಲಾಂಗೆ ವಿರುದ್ಧವಾದುದ್ದು ನೀನು ತರಬೇತಿ ನೀಡುವುದನ್ನು ಮುಂದುವರಿಸಿದರೆ ಹತ್ಯೆಗೈಯುವುದಾಗಿ ಬೆದರಿಕೆ ಒಡ್ಡಲಾಗಿದೆ.
ವರದಿಯಾದಂತೆ, ಈ ವಿಚಾರವನ್ನು ಮುಖ್ಯಮಂತ್ರಿ ರಘುಬರ್ ದಾಸ್ ಅವರ ಸಂಸದೀಯ ಕಾರ್ಯದರ್ಶಿ ಸಂಜಯ್ ಕುಮಾರ್ ಅವರ ಗಮನಕ್ಕೆ ತರಲಾಗಿದ್ದು, ಇದೀಗ ನಾಝ್ಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಓರ್ವ ಮಹಿಳಾ ಮತ್ತು ಓರ್ವ ಪುರುಷ ಸಿಬಂದಿ ಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ರಾಫಿನಾ ಅವರು ಕೆಲ ದಿನಗಳ ಹಿಂದೆ ಯೋಗ ಗುರು ಬಾಬಾ ರಾಮ್ ದೇವ್ ಅವರೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡು ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರು.
ಕೇವಲ ಯೋಗ ತರಬೇತಿಯಿಂದ ಪಡೆದ ಸಂಬಳದಿಂದ ರಾಫಿಯಾ ಅವರು ಕುಟುಂಬ ನಿರ್ವಹಿಸುತ್ತಿದ್ದು ಬೆದರಿಕೆಯ ನಡುವೆಯೂ ಯೋಗ ತರಬೇತಿ ನೀಡುವುದನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.
‘ನನಗೆ ಎರಡೂ ಕಡೆಯಿಂದ ಬೆದರಿಕೆ ಇದ್ದು ಕೆಲವರು ಯೋಗ ತರಬೇತಿ ಮಾಡದಂತೆ ಬೆದರಿಕೆ ಹಾಕಿದರೆ, ಇನ್ನು ಕೆಲವರು ಹೆಸರು ಬದಲಾಯಿಸಲು ಹೇಳಿದ್ದಾರೆ. ನನ್ನ ಜೀವನದ ಕೊನೆಯವರೆಗೆ ಯೋಗ ಮಾಡುತ್ತೇನೆ’ ಎಂದು ವಿಶ್ವಾಸದ ನುಡಿಗಳನ್ನಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.