ಎಫ್ಬಿ ಜಾಹೀರಾತು ಪಾರದರ್ಶಕ
Team Udayavani, Apr 8, 2018, 7:00 AM IST
ವಾಷಿಂಗ್ಟನ್: ಕೇಂಬ್ರಿಡ್ಜ್ ಅನಾಲಿಟಿಕಾ ಹಗರಣ ಹಾಗೂ ಅಮೆರಿಕ ಸಾರ್ವತ್ರಿಕ ಚುನಾವಣೆಯಲ್ಲಿ ಫೇಸ್‌ಬುಕ್ ಬಳಕೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ, ರಾಜಕೀಯ ಸಂಬಂಧಿ ಜಾಹೀರಾತುಗಳನ್ನು ಇನ್ನಷ್ಟು ಪಾರದರ್ಶಕವನ್ನಾಗಿಸಲು ಫೇಸ್‌ಬುಕ್ ನಿರ್ಧರಿಸಿದೆ. ಜಾಹೀರಾತುದಾರರ ಗುರುತು ಹಾಗೂ ಸ್ಥಳದ ವಿವರ ಖಚಿತವಾದ ಬಳಿಕವೇ ಜಾಹೀರಾತುಗಳನ್ನು ಒಪ್ಪಿಕೊಳ್ಳಲಾಗುತ್ತದೆ ಎಂದು ಹೇಳಿದೆ.
ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿ ಅನಾಮಿಕವಾಗಿ ಜಾಹೀರಾತು ನೀಡುವಂತಿಲ್ಲ. ಇಂತಹ ಜಾಹೀರಾತಿನ ಬಲ ಮೂಲೆಯಲ್ಲಿ ರಾಜಕೀಯ ಜಾಹೀರಾತು ಎಂದು ನಮೂದಿಸಿ, ಅದರ ಪಕ್ಕವೇ ಈ ಜಾಹೀರಾತಿಗೆ ಪಾವತಿದಾರರು ಯಾರು ನಮೂದಿಸಲಾಗುತ್ತದೆ. ದೃಢೀಕರಣ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಮುಂದಿನ ಕೆಲ ತಿಂಗಳುಗಳಲ್ಲಿ ಜಾಹೀರಾತುಗಳ ಮೇಲೆ ಈ ಮಾಹಿತಿಯನ್ನು ಪ್ರದರ್ಶಿಸಲಾಗುತ್ತದೆ. ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪ ತಪ್ಪಿಸಲು ಈ ಕ್ರಮ ಮಹತ್ವದ್ದಾಗಿದೆ ಎಂದು ಫೇಸ್‌ಬುಕ್ ಹೇಳಿದೆ. ಈ ಬದಲಾವಣೆಗಳು 2019ರ ಭಾರತದ ಸಾರ್ವತ್ರಿಕ ಚುನಾವಣೆಗೂ ಮುನ್ನ ಜಾರಿಯಗಲಿವೆ. ರಾಜಕೀಯ ಪ್ರಚಾರ ಪಾರದರ್ಶಕವಾಗಲಿದೆ ಎಂದ ನಿರೀಕ್ಷಿಸಲಾಗಿದೆ.
ಫೇಕ್ ಪೇಜ್‌ಗಳ ವಿರುದ್ಧ ಕ್ರಮ: ನಕಲಿ ಪೇಜ್‌ಗಳ ಹಾವಳಿ ತಪ್ಪಿಸಲು, ದೊಡ್ಡ ಪೇಜ್‌ಗಳ ನಿರ್ವಾಹಕರೂ ಪರಿಶೀಲನೆಗೆ ಒಳಪಡ ಬೇಕು ಎಂದು ಫೇಸ್‌ಬುಕ್ ಸೂಚಿಸಿದೆ. ಇಲ್ಲದಿದ್ದರೆ, ಪೇಜ್‌ನಲ್ಲಿ ಪೋಸ್ಟ್ ಮಾಡಲು ಅವಕಾಶವಿರುವುದಿಲ್ಲ.
ಇನ್ನಷ್ಟು ದತ್ತಾಂಶ ನಿಯಮ ಉಲ್ಲಂಘನೆ?: ಅನಾಲಿಟಿಕಾ ಸಂಸ್ಥೆ ಫೇಸ್‌ಬುಕ್ ದತ್ತಾಂಶವನ್ನು ದುರ್ಬಳಕೆ ಮಾಡಿಕೊಂಡ ಬೆನ್ನಲ್ಲೇ ಇನ್ನೂ ಇತರ ಸಂಸ್ಥೆಗಳು ದತ್ತಾಂಶ ದುರ್ಬಳಕೆ ಮಾಡಿಕೊಂಡಿರಬಹುದು ಎಂದು ಫೇಸ್‌ಬುಕ್ ಸಿಒಒ ಶೆರಿಲ್ ಸ್ಯಾಂಡ್‌ಬರ್ಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
Nagpur: ರಾಹುಲ್ ಕಾರ್ಯಕ್ರಮದಲ್ಲಿ ಖಾಲಿ ಸಂವಿಧಾನ ಪುಸ್ತಕ ಹಂಚಿಕೆ: ಬಿಜೆಪಿ ಆರೋಪ
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
MUST WATCH
ಹೊಸ ಸೇರ್ಪಡೆ
MUDA CASE: ಸಿಎಂ, ಪತ್ನಿಗೆ ಇ.ಡಿ. ನೋಟಿಸ್?
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
Congress Gurantee: ಗೃಹಜ್ಯೋತಿ: 3 ತಿಂಗಳಲ್ಲಿ 85 ಸಾವಿರ ಗ್ರಾಹಕರಿಂದ “ರಿ-ಲಿಂಕ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.