ಆರ್ಥಿಕತೆಗೆ ಕೊಳ್ಳಿ ಇಡಲಿದೆ 2ನೇ ಲಾಕ್ ಡೌನ್!
Team Udayavani, Apr 2, 2021, 7:20 AM IST
ಅಮರಾವತಿಯ ಲಾಕ್ಡೌನ್ ನೋಟ
ಹೊಸದಿಲ್ಲಿ: ದೇಶವು ಕೋವಿಡ್ ಸೋಂಕಿನ ಎರಡನೇ ಅಲೆಯಲ್ಲಿ ಸಿಲುಕಿಕೊಂಡಿರುವ ಈ ಹೊತ್ತಲ್ಲಿ, ಹಲವು ರಾಜ್ಯಗಳು ಮತ್ತೂಮ್ಮೆ ಲಾಕ್ ಡೌನ್ ಹೇರುವುದೋ, ಬೇಡವೋ ಎಂಬ ಗೊಂದಲದಲ್ಲಿವೆ. ಆದರೆ ಈಗೇ ನಾದರೂ ಹೊಸದಾಗಿ ನಿರ್ಬಂಧ ಹೇರಿದರೆ, ಕಳೆದ ವರ್ಷದ ಲಾಕ್ಡೌನ್ ನಿಂದ ಈಗಷ್ಟೇ ಚೇತರಿಸಿಕೊಳ್ಳು ತ್ತಿರುವ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿದಂತಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.
ಲಾಕ್ ಡೌನ್ ತೆರವಿನ ಬಳಿಕ ಒಂದೊಂದಾಗಿ ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಬರುತ್ತಿವೆ. ಸೇವಾ ವಲ ಯವೂ ಸಹಿತ ಬಹುತೇಕ ವಲಯಗಳಲ್ಲಿ ಸಕಾರಾತ್ಮಕ ಪ್ರಗತಿ ಆಗುತ್ತಿವೆ. ಹೀಗಿರುವಾಗ ಮತ್ತೆ ಲಾಕ್ ಡೌನ್ನ ಮೊರೆ ಹೋದರೆ ಈ ಎಲ್ಲ ಪ್ರಗತಿಯೂ ಪತನಗೊಳ್ಳುವುದು ಖಚಿತ ಎಂದು ನೊಮುರಾ ಇಂಡಿಯಾದ ವರದಿ ಹೇಳಿದೆ. ಅಲ್ಲದೆ, ನಿರ್ಬಂಧಗಳು 2 ತಿಂಗಳು ಮುಂದುವರಿದರೂ ದೇಶದ ಜಿಡಿಪಿ ಪ್ರಗತಿ ದರದಲ್ಲಿ ಶೇ.0.17ರಷ್ಟು ಕೊಚ್ಚಿ ಹೋಗಲಿದೆ ಎಂದು ಬಾಕ್ಲೇಸ್ ಇಂಡಿಯಾ ವರದಿಯೂ ಕಳವಳ ವ್ಯಕ್ತಪಡಿಸಿದೆ.
ಒಂದೇ ದಿನ 72 ಸಾವಿರ ಕೇಸ್: ಬುಧವಾರದಿಂದ ಗುರು ವಾರಕ್ಕೆ 24 ಗಂಟೆಗಳಲ್ಲಿ ದೇಶಾದ್ಯಂತ 72,330 ಮಂದಿಗೆ ಸೋಂಕು ದೃಢಪಟ್ಟಿದ್ದು, 459 ಮಂದಿ ಸಾವಿಗೀಡಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 5,84,055 ಸಕ್ರಿಯ ಪ್ರಕರಣ ಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಫ್ರಾನ್ಸ್ನಲ್ಲಿ 3ನೇ ಲಾಕ್ ಡೌನ್: ಫ್ರಾನ್ಸ್ನಲ್ಲಿ ಕೋವಿಡ್ 3ನೇ ಅಲೆ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಮ್ಯಾಕ್ರನ್ ಅವರು 3ನೇ ಬಾರಿಗೆ ದೇಶವ್ಯಾಪಿ ಲಾಕ್ ಡೌನ್ ಘೋಷಿಸಿದ್ದಾರೆ. 3 ವಾರಗಳ ಕಾಲ ಶಾಲೆಗಳನ್ನು ತೆರೆಯದಂತೆ ಸೂಚಿಸಿದ್ದಾರೆ.
ಮುಂಬಯಿ ಲಾಕ್: ಇಂದು ನಿರ್ಧಾರ :
ವಾಣಿಜ್ಯ ನಗರಿಯಲ್ಲಿ ಸೋಂಕು ಹೆಚ್ಚುತ್ತಿರುವ ಕಾರಣ ನಿರ್ಬಂಧಿತ ಲಾಕ್ ಡೌನ್ ಹೇರುವ ಸುಳಿವನ್ನು ಮುಂಬಯಿ ಮೇಯರ್ ಕಿಶೋರಿ ಪಡ್ನೇಕರ್ ನೀಡಿದ್ದಾರೆ. ಈ ಕುರಿತ ಅಧಿಕೃತ ಘೋಷಣೆ ಶುಕ್ರವಾರ ಹೊರಬೀಳುವ ಸಾಧ್ಯತೆಯಿದೆ. ಅಂಗಡಿಗಳು ದಿನ ಬಿಟ್ಟು ದಿನ ತೆರೆಯಲು ಅನುಮತಿ ನೀಡಲಾಗುತ್ತದೆ, ಸ್ಥಳೀಯ ರೈಲುಗಳನ್ನು ಅಗತ್ಯ ಸೇವೆಗಳಿಗೆ ಮಾತ್ರ ಬಳಸಲಾಗುತ್ತದೆ, ಧಾರ್ಮಿಕ ಕೇಂದ್ರಗಳು, ಮಾಲ್, ಥಿಯೇಟರ್ಗಳನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.