ತೈಲ ದರ ಏರಿಕೆ ಭೀತಿ: ಷೇರುಪೇಟೆ ಪತನ
Team Udayavani, Sep 18, 2019, 5:08 AM IST
ಮುಂಬೈ: ಸೌದಿ ಅರೇಬಿಯಾದಲ್ಲಿನ ಬೆಳವಣಿಗೆಯಿಂದ ತೈಲ ದರ ಏರಿಕೆ ಭೀತಿ ಷೇರುಪೇಟೆ ಹೂಡಿಕೆದಾರರಲ್ಲಿ ತಲ್ಲಣ ಸೃಷ್ಟಿಸಿದೆ. ಆರ್ಥಿಕ ಬಿಕ್ಕಟ್ಟಿನ ಆತಂಕದಲ್ಲಿದ್ದ ಹೂಡಿಕೆದಾರರಿಗೆ ಈಗ ಜಾಗತಿಕ ಸ್ಥಿತಿಯೂ ಗಾಯದ ಮೇಲೆ ಬರೆ ಎಳೆದಿದೆ. ಪರಿಣಾಮ, ಅವರು ಷೇರುಗಳ ಮಾರಾಟದಲ್ಲಿ ತೊಡಗಿದ ಕಾರಣ ಮಂಗಳವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 642 ಅಂಕ ಕುಸಿತ ದಾಖಲಿಸಿ, 36,481ರಲ್ಲಿ ವಹಿವಾಟು ಅಂತ್ಯಗೊಳಿಸಿತು. ವಹಿವಾಟಿನ ಒಂದು ಹಂತದಲ್ಲಿ ಸೆನ್ಸೆಕ್ಸ್ 704 ಅಂಕ ಏರಿಕೆ ದಾಖಲಿಸಿದ್ದೂ ಕಂಡುಬಂತು. ನಂತರದಲ್ಲಿ ಈ ಏರಿಕೆಯಿಂದ ಕೆಳಗಿಳಿದ ಷೇರುಪೇಟೆ, ವಹಿವಾಟು ಮುಗಿಯುವ ಹೊತ್ತಿಗೆ 642 ಅಂಕ ಏರಿಕೆಯಲ್ಲಿ ಕೊನೆಗೊಂಡಿತು. ನಿಫ್ಟಿ ಕೂಡ 185 ಅಂಕ ಹೆಚ್ಚಳವಾಗಿ, 10,817ಕ್ಕೆ ಅಂತ್ಯಗೊಂಡಿತು.
ರೂಪಾಯಿ ಮೌಲ್ಯ ಇಳಿಕೆ: ಮತ್ತೂಂದೆಡೆ, ಡಾಲರ್ ಎದುರು ರೂಪಾಯಿ ಮೌಲ್ಯ ಮಂಗಳವಾರ 18 ಪೈಸೆ ಇಳಿಕೆಯಾಗಿ, 71.78 ರೂ.ಗೆ ತಲುಪಿತು. ಒಂದು ಹಂತದಲ್ಲಿ ರೂಪಾಯಿ ಮೌಲ್ಯ 71.98ರ ದಾಖಲೆ ನಿರ್ಮಿಸಿದ್ದು, ನಂತರದಲ್ಲಿ ಮೌಲ್ಯ ಹೆಚ್ಚಿಸಿಕೊಂಡು, 71.78ಕ್ಕೆ ತಲುಪಿತು. ಇದೇ ವೇಳೆ, ನವದೆಹಲಿ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಮಂಗಳವಾರ 150 ರೂ. ಇಳಿಕೆಯಾಗಿ 10ಗ್ರಾಂಗೆ 38,905 ಆಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.