ಹೆಂಡತಿ ಕಾಟ ತಾಳಲಾರದೆ ತಿಂಗಳಿಂದ ಮರದ ಮೇಲೇ ವಾಸ!
Team Udayavani, Aug 27, 2022, 7:40 AM IST
ಲಕ್ನೋ: ಹೆಂಡತಿಯ ಕಾಟ ತಾಳಲಾರದೆಯೇ ಪತಿಯು ಕಳೆದೊಂದು ತಿಂಗಳಿನಿಂದ ತಾಳೆ ಮರದ ಮೇಲೇ ಜೀವನ ನಡೆಸುತ್ತಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮವಾ ಜಿಲ್ಲೆಯಲ್ಲಿ ನಡೆದಿದೆ.
ರಾಮ್ ಪರ್ವೇಶ್(42) ಹೆಸರಿನ ವ್ಯಕ್ತಿ ಕಳೆದ ಆರು ತಿಂಗಳುಗಳಿಂದ ಪತ್ನಿಯೊಂದಿಗೆ ಜಗಳವಾಡುತ್ತಿದ್ದಾನಂತೆ. ಪತ್ನಿ ರಾಮ್ಗೆ ಥಳಿಸಿದ್ದಾಳಂತೆ ಕೂಡ. ಅದೇ ಕಾರಣಕ್ಕೆ ಬೇಸತ್ತಿರುವ ಆತ ಊರಿನ ತಾಳೆ ಮರ ಹತ್ತಿ ಕುಳಿತಿದ್ದಾನೆ. ಹಲವು ದಿನಗಳಿಂದ ಅಲ್ಲಿಯೇ ಜೀವನ ನಡೆಸುತ್ತಿದ್ದಾನೆ.
ಮನೆಯವರು ಪ್ರತಿದಿನ ಊಟವನ್ನು ಹಗ್ಗಕ್ಕೆ ಕಟ್ಟಿಕೊಡುತ್ತಿದ್ದು, ಅದನ್ನು ಮೇಲೆಳೆದುಕೊಂಡು ಆತ ಊಟ ಮಾಡುತ್ತಿದ್ದಾನೆ. ಆದರೆ ಮೇಲೆ ಕುಳಿತ ಆತ ಊರಲ್ಲಿ ಏನಾಗುತ್ತದೆ ಎನ್ನುವುದನ್ನು ನೋಡುತ್ತಾನೆ, ಇದರಿಂದ ನಮಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ರಾಮ್ ಮನವೊಲಿಸಲು ಪೊಲೀಸರೂ ಸೋತಿರುವುದಾಗಿ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.