ವಿಜ್ಞಾನ ವಿಸ್ಮಯ: 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣ ಬೆಳವಣಿಗೆ !!
ಪ್ರಕೃತಿಯ ವಿಶಿಷ್ಟ ಕಥೆಗೆ ಸಾಕ್ಷಿಯಾದ ಬಿಹಾರದ ಮಗು; ಏನಿದು ವಿಸ್ಮಯ?
Team Udayavani, May 29, 2022, 2:49 PM IST
ಪಾಟ್ನಾ : ಅಪರೂಪದ ವೈದ್ಯಕೀಯ ಸ್ಥಿತಿಯಲ್ಲಿ, ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣವು ಬೆಳವಣಿಗೆಯಾಗುತ್ತಿರುವುದು ಕಂಡುಬಂದಿದೆ.
ಇತ್ತೀಚೆಗಷ್ಟೇ 40 ದಿನದ ಮಗುವನ್ನು ಮೋತಿಹಾರಿಯ ರಹಮಾನಿಯಾ ವೈದ್ಯಕೀಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ಮಗುವಿನ ಸೊಂಟದ ಬಳಿಯ ಭಾಗವು ಉಬ್ಬಿದೆ ಎಂದು ವೈದ್ಯರಿಗೆ ತಿಳಿಸಲಾಯಿತು. ಹೊಟ್ಟೆ ಉಬ್ಬರದಿಂದಾಗಿ ಮಗುವಿಗೆ ಸರಿಯಾಗಿ ಮೂತ್ರ ವಿಸರ್ಜಿಸಲಾಗುತ್ತಿರಲಿಲ್ಲ. ಉಬ್ಬುವಿಕೆಯ ಹಿಂದಿನ ಕಾರಣವನ್ನು ಕಂಡುಹಿಡಿಯಲು, ವೈದ್ಯರು ಮಗುವನ್ನು ಪರೀಕ್ಷಿಸಿದರು.
ವೈದ್ಯರ ತಂಡವು ಹಲವಾರು ಪರೀಕ್ಷೆಗಳನ್ನು ನಡೆಸಿತು, ಪರೀಕ್ಷೆಯ ಫಲಿತಾಂಶವು ಎಲ್ಲರನ್ನು ಬೆಚ್ಚಿ ಬೀಳಿಸುವಂತೆ ಮಾಡಿತು. ಶಿಶು ಭ್ರೂಣದ ಸಮಸ್ಯೆಯಿಂದ ಬಳಲುತ್ತಿದೆ ಎಂದು ಕಂಡುಕೊಂಡರು. ಮಗು ತಾಯಿಯ ಹೊಟ್ಟೆಯಲ್ಲಿದ್ದಾಗಲೇ ಹೊಟ್ಟೆಯಲ್ಲಿ ಭ್ರೂಣವು ಬೆಳೆದಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿದ ರಹಮಾನಿಯಾ ಮೆಡಿಕಲ್ ಸೆಂಟರ್‌ನ ಡಾ ಒಮರ್ ತಬ್ರೇಜ್, ವೈದ್ಯಕೀಯ ಭಾಷೆಯಲ್ಲಿ ಇದನ್ನು ‘ಫೀಟಸ್ ಇನ್ ಫೆಟು’ ಅಥವಾ ಮಗುವಿನ ಹೊಟ್ಟೆಯಲ್ಲಿ ಭ್ರೂಣದ ಉಪಸ್ಥಿತಿ ಎಂದು ಕರೆಯಲಾಗುತ್ತದೆ. 10 ಲಕ್ಷ ಪ್ರಕರಣಗಳಲ್ಲಿ 5 ರೋಗಿಗಳಲ್ಲಿ ಸಂಭವಿಸುವ ಅಪರೂಪದ ಪ್ರಕರಣ ಇದಾಗಿದೆ ಎಂದರು.
ಮಗುವಿನ ಸ್ಥಿತಿ ಹದಗೆಟ್ಟಾಗ, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಚಿಕಿತ್ಸೆಯ ನಂತರ, ಮಗುವಿನ ಹೊಟ್ಟೆಯಿಂದ ಭ್ರೂಣವನ್ನು ತೆಗೆದುಹಾಕಲಾಗಿದೆ.
ಪ್ರಕೃತಿಯ ವಿಶಿಷ್ಟ ಕಥೆಗೆ ಸಾಕ್ಷಿಯಾದ ಮಗು ಶಸ್ತ್ರಚಿಕಿತ್ಸೆಯ ನಂತರ ಸಂಪೂರ್ಣವಾಗಿ ಚೇತರಿಸಿಕೊಂಡಿದೆ ಎಂದು ಡಾ ಒಮರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.