ಮುಂಬೈ ಲೋಕಲ್ ಟ್ರೈನ್ ನಲ್ಲಿ ಹೀಗೊಂದು ಜಡೆ ಜಗಳ: ವಿಡಿಯೋ ನೋಡಿ
Team Udayavani, Oct 18, 2022, 10:42 AM IST
ಮುಂಬೈ: ಇಲ್ಲಿ ಲೋಕಲ್ ರೈಲಿನಲ್ಲಿ ಮೂವರು ಮಹಿಳೆಯರ ಜಗಳದಲ್ಲಿ ತೊಡಗಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಮಹಿಳೆಯರ ಕಂಪಾರ್ಟ್‌ಮೆಂಟ್ ನಲ್ಲಿರುವ ಮೂವರು ಜಗಳದಲ್ಲಿ ತೊಡಗಿರುವುದು ವಿಡಿಯೋ ದೃಶ್ಯಗಳಲ್ಲಿದೆ. ಪರಸ್ಪರ ನಿಂದಿಸುವುದು, ಕಪಾಳ ಮೋಕ್ಷ ಮಾಡುವುದು ಮತ್ತು ಕೂದಲನ್ನು ಎಳೆಯುವುದು ಕೂಡಾ ನಡೆದಿದೆ. ಮತ್ತೊಂದೆಡೆ, ಇತರ ಪ್ರಯಾಣಿಕರು ಇವರ ಜಗಳ ನಿಲ್ಲಿಸಲು ಮಧ್ಯಪ್ರವೇಶಿಸಲು ಯತ್ನಿಸಿದರೂ ಅದು ವಿಫಲವಾಯಿತು. “ಆಂಟಿ ಛೋಡೋ ದೋ (ಮೇಡಂ, ಅದು ಬಿಟ್ಟು ಬಿಡಿ),” ಇತರರು ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಒಟ್ಟಿಗೆ ನೆಟ್ಸ್ ನಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿದ ವಿರಾಟ್ – ಬಾಬರ್
ಈ ವಿಡಿಯೋವನ್ನು ಆರಂಭದಲ್ಲಿ ಆರು ದಿನಗಳ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ಷರೀಫೈಜಾನ್ ಸಯದ್ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ಇದೀಗ ಟ್ವಿಟರ್‌ನಲ್ಲಿ “ರೋಡ್ಸ್ ಆಫ್ ಮುಂಬೈ” ಎಂಬ ಖಾತೆಯಲ್ಲಿ ಭಾನುವಾರ ಹಂಚಿಕೊಂಡಿದ್ದಾರೆ. ಟ್ವಿಟ್ಟರ್ ನಲ್ಲಿ ವಿಡಿಯೋ ವೈರಲ್ ಆಗಿದ್ದು, ಇದು 530.4 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಆರು ಸಾವಿರಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ.
Spirit of Mumbai – Part 4pic.twitter.com/CoyXl8TrPq
— Roads of Mumbai ?? (@RoadsOfMumbai) October 16, 2022
ಮುಂಬೈ ಲೋಕಲ್ ರೈಲುಗಳಲ್ಲಿ ಹೊಡೆದಾಟ ಇದೇ ಮೊದಲೇನಲ್ಲ. ಕೆಲವು ದಿನಗಳ ಹಿಂದೆ, ಇದೇ ರೀತಿಯ ಘಟನೆ ನಡೆದಿತ್ತು. ಥಾಣೆ-ಪನ್ವೇಲ್ ಲೋಕಲ್ ರೈಲಿನಲ್ಲಿ ಮಹಿಳೆಯರು ಪರಸ್ಪರ ಘರ್ಷಣೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ವಿವಾದವನ್ನು ಬಗೆಹರಿಸಲು ಮಹಿಳಾ ಪೊಲೀಸ್ ಪೇದೆಯೊಬ್ಬರು ಮಧ್ಯಪ್ರವೇಶಿಸಿದ್ದು, ಆದರೆ ಅವರ ಮೇಲೂ ಹಲ್ಲೆ ಮಾಡಲಾಗಿತ್ತು. ಪೊಲೀಸ್ ಸೇರಿದಂತೆ ಕನಿಷ್ಠ ಮೂವರು ಮಹಿಳೆಯರು ಗಾಯಗೊಂಡಿದ್ದರು. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.