ನಿಖರ ಮುನ್ಸೂಚನೆಗೆ ಡೋಪ್ಲರ್ ರಾಡಾರ್
Team Udayavani, May 14, 2018, 8:30 AM IST
ಕಳೆದೊಂದು ತಿಂಗಳಿಂದ ದೇಶದ ವಿವಿಧ ಭಾಗಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆ, ಧೂಳು ಬಿರುಗಾಳಿಯು ಜನಜೀವನ ಅಸ್ತವ್ಯಸ್ತಗೊಳಿಸಿದ್ದು ಗೊತ್ತೇ ಇದೆ. ಈ ಹಿನ್ನೆಲೆಯಲ್ಲಿ ಹವಾಮಾನದ ನಿಖರ ಮುನ್ಸೂಚನೆ ನೀಡುವಂಥ 30 ಡೋಪ್ಲರ್ ರಾಡಾರ್‌ಗಳನ್ನು ಮುಂದಿನ 2-3 ವರ್ಷಗಳಲ್ಲೇ ದೇಶಾದ್ಯಂತ ಅಳವಡಿಸಲು ಹವಾಮಾನ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಏನಿದು ಡೋಪ್ಲರ್ ರಾಡಾರ್?
ಸಾಮಾನ್ಯ ಮಳೆ, ಗುಡುಗಿನಿಂದ ಕೂಡಿದ ಮಳೆ, ಧೂಳು ಬಿರುಗಾಳಿ, ಆಲಿಕಲ್ಲುಮಳೆ ಹಾಗೂ ಗಾಳಿಯ ಕುರಿತು ನಿಖರ ಮುನ್ಸೂಚನೆಯನ್ನು ನೀಡುವಂಥ ವ್ಯವಸ್ಥೆಯಿದು.
ಯಾವ ರಾಜ್ಯಗಳಲ್ಲಿ ಹೆಚ್ಚು?
ಉತ್ತರಾಖಂಡ, ಹಿಮಾಚಲಪ್ರದೇಶ, ಜಮ್ಮು-ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಬಿರುಗಾಳಿ, ಮಳೆ, ಹಿಮ ವರ್ಷದ ಪ್ರಮಾಣ ಹೆಚ್ಚಿರುವ ಕಾರಣ ಈ ರಾಜ್ಯಗಳತ್ತ ಹೆಚ್ಚು ಗಮನಹರಿಸಲಾಗಿದೆ. ಇಲ್ಲಿ ಅಧಿಕ ಪ್ರಮಾಣದಲ್ಲಿ ರಾಡಾರ್ ಅಳವಡಿಸಲಾಗುತ್ತದೆ. 2013ರಲ್ಲಿ ಉತ್ತರಾಖಂಡದಲ್ಲಿ ನಡೆದ ಮೇಘಸ್ಫೋಟಕ್ಕೆ ಸಾವಿರಾರು ಮಂದಿ ಬಲಿಯಾಗಿದ್ದರು. ಜತೆಗೆ, ಇತ್ತೀಚೆಗೆ ಉತ್ತರಪ್ರದೇಶ, ರಾಜಸ್ಥಾನದಲ್ಲಿ 120 ಮಂದಿಯನ್ನು ಧೂಳು ಬಿರುಗಾಳಿ ಬಲಿತೆಗೆದುಕೊಂಡಿತ್ತು. ಈ ಸಂದರ್ಭದಲ್ಲಿ ಜೈಪುರದಲ್ಲಿದ್ದ ರಾಡಾರ್ ದುರಸ್ತಿಗೀಡಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ.
– ಡೋಪ್ಲರ್ ರಾಡಾರ್ ನ ರೇಡಿಯಸ್ : 250 ಕಿ.ಮೀ.
– 2 – 3 ಗಂಟೆಗಳ ಮುಂಚೆಯೇ ಹವಾಮಾನ ಕುರಿತ ನಿಖರ ಮಾಹಿತಿ ನೀಡುತ್ತದೆ
– 14 ಈಶಾನ್ಯ ರಾಜ್ಯಗಳಲ್ಲಿ ಅಳವಡಿಸಲಾಗುವ ರಾಡಾರ್‌ಗಳು
-2002ರಲ್ಲಿ ಮೊದಲ ಡೋಪ್ಲರ್ ರಾಡಾರ್ ಅಳವಡಿಸಿದ್ದು ಚೆನ್ನೈಯಲ್ಲಿ
– 30 ಮುಂದಿನ 2ರಿಂದ 3 ವರ್ಷಗಳಲ್ಲಿ ಅಳವಡಿಸಲಾಗುವ ರಾಡಾರ್‌ಗಳ ಸಂಖ್ಯೆ
– 27 ಸದ್ಯ ದೇಶಾದ್ಯಂತ ಇರುವ ರಾಡಾರ್‌ಗಳ ಸಂಖ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Promotion: ಕೊಡಗಿನ ಮಧು ಮೊಣ್ಣಪ್ಪ ಸುಬೇದಾರ್ ಮೇಜರ್
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
Ghaati: ಸ್ವೀಟಿ ಅಲ್ಲ ಘಾಟಿ; ಫಸ್ಟ್‌ಲುಕ್‌ನಲ್ಲಿ ಅನುಷ್ಕಾ ಸಿನಿಮಾ
Brahmavara ಬಂಟರ ಯಾನೆ ನಾಡವರ ಸಂಘ: ನಾಳೆ ನೂತನ ಪದಾಧಿಕಾರಿಗಳ ಪದಪ್ರದಾನ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.