ಬಾಡಿಗೆ ವಿಚಾರದ ಗಲಾಟೆ: ಇಬ್ಬರು ರೂಮ್ ಮೇಟ್ ಗಳನ್ನು ಕೊಂದು ಆರೋಪಿ ಎಸ್ಕೇಪ್
Team Udayavani, Sep 2, 2020, 8:25 AM IST
ಹೊಸದಿಲ್ಲಿ: ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದ ಮೂವರ ನಡುವೆ ಬಾಡಿಗೆ ವಿಚಾರದಲ್ಲಿ ನಡೆದ ಗಲಾಟೆಯೊಂದು ಜೋಡಿ ಕೊಲೆಯಲ್ಲಿ ಅಂತ್ಯವಾದ ಘಟನೆ ದಿಲ್ಲಿಯ ರಘುವೀರ್ ನಗರದಲ್ಲಿ ನಡೆದಿದೆ.
ಆರೋಪಿಯನ್ನು ಉತ್ತರ ಪ್ರದೇಶದ ಅಮ್ರೋಹ ಗ್ರಾಮದ ಶಾಕಿರ್ ಎಂದು ಗುರುತಿಸಲಾಗಿದೆ. ಕೃತ್ಯದ ನಂತರ ತನ್ನ ಗ್ರಾಮಕ್ಕೆ ಎಸ್ಕೇಪ್ ಆಗಿದ್ದ ಶಾಕಿರ್ ನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ಅಜಂ (45) ಮತ್ತು ಅಮೀರ್ ಹಸನ್ (46) ರಘುವೀರ್ ನಗರದಲ್ಲಿ ಬಾಡಿಗೆ ಕೋಣೆಯೊಂದರಲ್ಲಿ ತಿಂಗಳಿಗೆ ನಾಲ್ಕು ಸಾವಿರ ಬಾಡಿಗೆಯಂತೆ ವಾಸವಿದ್ದರು. ಶಾಕಿರ್ ಕೂಡಾ ಅವರ ಜೊತೆ ವಾಸವಾಗಿದ್ದ ಲಾಕ್ ಡೌನ್ ಸಮಯದಲ್ಲಿ ನಾಲ್ಕು ತಿಂಗಳು ಊರಿಗೆ ತೆರಳಿದ್ದ. 15 ದಿನಗಳ ಹಿಂದೆ ಶಾಕಿರ್ ರೂಮ್ ಗೆ ಮರಳಿದ್ದು, ಆದರೆ ಕಳೆದ ನಾಲ್ಕು ತಿಂಗಳ ಬಾಡಿಗೆ ನೀಡುವಂತೆ ಅಜಂ ಮತ್ತು ಅಮೀರ್ ಪೀಡಿಸಿದ್ದರು.
ಇದರಿಂದ ಕೋಪಗೊಂಡಿದ್ದ ಶಾಕಿರ್ ಆಗಸ್ಟ್ 30ರ ರಾತ್ರಿ ರೂಮ್ ಮೇಟ್ ಗಳು ಇಬ್ಬರು ಮಲಗಿದ್ದ ವೇಳೆ ಚಾಕುವಿನಿಂದ ತಿವಿದು ಕೊಲೆಗೈದಿದ್ದ. ನಂತರ ಚಾಕುವನ್ನು ಅಡಗಿಸಿಟ್ಟು ಪರಾರಿಯಾಗಿದ್ದ. ಪ್ರಕರಣ ಕೈಗೆತ್ತಿಕೊಂಡ ಖಯಾಲ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.