ಅಬ್ಟಾ, ಕಡೆಗೂ ವಿಜಯ ಮಲ್ಯ ವಿಲ್ಲಾ ಹರಾಜು
Team Udayavani, Apr 9, 2017, 3:45 AM IST
ಪಣಜಿ: ಒಂದಲ್ಲ, ಎರಡಲ್ಲ, ಸತತ 4ನೇ ಪ್ರಯತ್ನದಲ್ಲಿ ಕೊನೆಗೂ ಉದ್ಯಮಿ ವಿಜಯ ಮಲ್ಯ ಅವರ ಗೋವಾದ “ಕಿಂಗ್‌ಫಿಶರ್’ ವಿಲ್ಲಾ ಹರಾಜಾಗಿದೆ.
ಮುಂಬೈನ ಕಿಂಗ್‌ಫಿಶರ್ ಸಂಸ್ಥೆಗೆ ಸೇರಿದ ಗೋವಾ ಕಾಂಡೋಲಿಮ್ ಕಡಲತೀರದಲ್ಲಿನ ವೈಭವೋಪೇತ ವಿಲ್ಲಾವನ್ನು ಬಾಲಿವುಡ್ ನಟ, ವಾಣಿಜ್ಯೋದ್ಯಮಿ ಸಚಿನ್ ಜೋಶಿ ಬರೋಬ್ಬರಿ 73 ಕೋಟಿ ರೂಗೆ. ಖರೀದಿಸಿದ್ದಾರೆ. ಈ ಹಿಂದೆ ಮೂರು ಸಲ ಎಸ್‌ಬಿಐ ಇದನ್ನು ಹರಾಜು ಹಾಕಲು ಪ್ರಯತ್ನಿಸಿತ್ತಾದರೂ ಅದು ಫಲಕೊಟ್ಟಿರಲಿಲ್ಲ. ಆದರೆ, ನಾಲ್ಕನೆ ಬಾರಿಗೆ ಇದು ಯಶಸ್ವಿಯಾಗಿ ಮುಕ್ತಾಯವಾಗಿದೆ.
ಸುಮಾರು 9 ಸಾವಿರ ಕೋಟಿ ರೂ. ಸಾಲದ ಸುಸ್ತಿದಾರನಾಗಿರುವ ಕಾರಣಕ್ಕೆ ಮಲ್ಯ ಅವರ ನಿವಾಸವನ್ನು ಬ್ಯಾಂಕ್ ಹರಾಜು ಹಾಕಿದೆ. ಬಿಡ್ಡುದಾರರು ಬಂದಿಲ್ಲ ಎಂಬ ಕಾರಣಕ್ಕಾಗಿ 2 ಬಾರಿ ಇದರ ಮೂಲ ಬೆಲೆಯನ್ನು 85 ಕೋಟಿ ರೂ.ನಿಂದ 81 ಕೋಟಿಗೆ ಇಳಿಸಲಾಗಿತ್ತು. ಈಗ ಜೋಷಿ ಅವರು 73 ಕೋಟಿ ರೂ.ಗೆ ಇದನ್ನು ಖರೀದಿಸಿದ್ದಾರೆ ಎಂಬ ಅಸಲಿ ಸಂಗತಿಯನ್ನು ಎಸ್‌ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಖಚಿತಪಡಿಸಿದ್ದಾರೆ.
ವಿಲ್ಲಾದಲ್ಲಿರುವ ಬೆಲೆಬಾಳುವ ಅಮೂಲ್ಯ ಕಲಾಕೃತಿಗಳನ್ನೂ ಹರಾಜು ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧಿಕರಣದ ಆದೇಶದ ಮೇರೆಗೆ ಬ್ಯಾಂಕ್ ವಿಲ್ಲಾವನ್ನು ಬಹಳ ಕಷ್ಟಪಟ್ಟು ಹರಾಜು ಮಾಡಿದೆ. ಇದೇ ಮಾದರಿಯಲ್ಲಿ ಮುಂಬೈನಲ್ಲಿರುವ ಕಿಂಗ್‌ಫಿಶರ್ ವಿಲ್ಲಾವನ್ನೂ ಹರಾಜು ಹಾಕಬೇಕು ಎಂಬ ಒತ್ತಾಯವೂ ಈಗ ಕೇಳಿಬರುತ್ತಿದೆ. ಈ ಮನೆಯನ್ನು ಮಲ್ಯ ಅವರು ತಮ್ಮ ವ್ಯಾಪಾರ ವಹಿವಾಟುಗಳ ಅನುಕೂಲಕ್ಕಾಗಿ ಬರುವವರಿಗೆ ಹಾಗೂ ಅತಿಥಿಗಳಿಗೆ ಅದ್ಧೂರಿ ಪಾರ್ಟಿ ಕೊಡಲು ಬಳಸುತ್ತಿದ್ದರು.
ವಿಲ್ಲಾದೊಳಗೆ ಏನೇನಿದೆ?
-3 ಎಕರೆ ವ್ಯಾಪಿಸಿರುವ ವಿಲ್ಲಾ
-ಅತ್ಯಾಧುನಿಕ ಈಜುಕೊಳ
-ಡಾನ್ಸ್ ಬಾರ್, ಹೆಲಿಪ್ಯಾಡ್
-ಮೂರು ಬೆಡ್‌ರೂಂ. ವಿಸ್ತಾರವಾದ ಲಿವಿಂಗ್ ರೂಂ, ಸಮುದ್ರಕ್ಕೆ ಎದುರಾಗುವಂತೆ ಮಾಸ್ಟರ್ ಬೆಡ್‌ರೂಂ
-ಅಮೂಲ್ಯ ಕಲಾಕೃತಿಗಳು, ಹೋಂಥಿಯೇಟರ್
ಖರೀದಿಸಿರುವ ನಟ ಯಾರು?
ಹರಾಜಿನಲ್ಲಿ ಖರೀದಿಸಿ ಈಗ ವಿಲ್ಲಾದ ಮಾಲೀಕನಾಗಿರುವ ಸಚಿನ್ ಜೋಷಿ ಬಾಲಿವುಟ್ ನಟನೂ ಹೌದು, ಉದ್ಯಮಿಯೂ ಹೌದು. ಜೆಎಂಜೆ ಗ್ರೂಪ್ ಆಫ್ ಕಂಪನೀಸ್‌ನ ಮುಖ್ಯಸ್ಥರಾಗಿರುವ ಇವರು, ಫಿಟೆ°ಸ್, ಆರೋಗ್ಯ, ರಿಯಲ್ ಎಸ್ಟೇಟ್ ಹಾಗೂ ಹೋಟೆಲ್ ಉದ್ಯಮಗಳನ್ನೂ ನಡೆಸುತ್ತಿದ್ದಾರೆ. ಗೋವಾದ ಬಿಯರ್ ಬ್ರಾಂಡ್ “ಕಿಂಗ್ಸ್’ ಅನ್ನು ಕೂಡ ಸಚಿನ್ ಜೋಷಿ ಖರೀದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.