ಸಿಪಿಎಸ್‌ಇ ಒಡೆತನದ ಭೂಮಿ: ಹಣಕಾಸು ಸಚಿವಾಲಯದಿಂದ ಹೊಸ ಚಿಂತನೆ
Team Udayavani, Oct 17, 2021, 4:36 PM IST
ನವದೆಹಲಿ: ಹಣಕಾಸು ಸಚಿವಾಲಯವು ಶೀಘ್ರದಲ್ಲೇ ಸಂಪುಟದೊಂದಿಗೆ ಚರ್ಚಿಸಿ ಸಿಪಿಯಸ್‌ಸಿಗೆ ಒಳಪಟ್ಟ ಭೂಮಿಯನ್ನು, ಖಾಸಗೀಕರಣಕ್ಕೆ ಒಳಪಟ್ಟ ಆದಾಯವಿರದ ಆಸ್ತಿಗಳನ್ನು ವಶಕ್ಕೆ ಪಡೆಯಲು ಮತ್ತು ಅವುಗಳನ್ನು ಮೇಲ್ವಿಚಾರಣೆ ಮಾಡಲು ಕಂಪನಿಯೊಂದನ್ನು ಸ್ಥಾಪಿಸಲು ಅನುಮತಿ ಕೇಳುವ ಸಾಧ್ಯತೆಗಳಿವೆ.
ಚಾಲ್ತಿಯಲ್ಲಿಲ್ಲದ ಆಸ್ತಿಗಳನ್ನು ಸರಕಾರಿ ಬೊಕ್ಕಸಕ್ಕೆ ಅದರ ಮೌಲ್ಯವನ್ನು ಪುನಃ ಪಡೆಯಲು ಕಂಪನಿಯ ಉಸ್ತುವಾರಿಯೊಂದಿಗೆ ಹೊಸ ರೂಪದಲ್ಲಿ ವಿಶೇಷ ಉದ್ದೇಶದ ವಾಹನವನ್ನು (ಎಸ್‌ಪಿವಿ) ಸಿದ್ದ ಪಡಿಸಲಾಗುವುದು ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಹೇಳಿದರು.
ಸರಕಾರವು ಹಲವು ವರ್ಷಗಳಿಂದ ಅಸ್ಥಿತ್ವದಲ್ಲಿರುವ ಈ ಹಣಕಾಸು ಮತ್ತು ಆಸ್ತಿ ನಿರ್ವಹಣಾ ಕಂಪನಿಯ ಬಗ್ಗೆ ಹೇಳುತ್ತಿದೆ ಮತ್ತು ಶೀಘ್ರದಲ್ಲಿ ಕ್ಯಾಬಿನೆಟ್ ಅನುಮೋದನೆ ಪಡೆಯಲಿದೆ ಎಂದು ಪಾಂಡೆ ಸ್ಪಷ್ಟಪಡಿಸಿದರು.
ಅವರು ಹೇಳಿರುವಂತೆ ಈ ಭೂಮಿಗಳಲ್ಲಿ ಹೆಚ್ಚಿನ ಭಾಗ ಸರಕಾರಿ ಉಪಯೋಗಕ್ಕೆ ಯೋಗ್ಯವಿಲ್ಲದ ಕಾರಣ ಕ್ಯಾಬಿನೆಟ್ ಅನುಮತಿ ಸಿಕ್ಕ ಬಳಿಕ ಆದಾಯ ಗಳಿಕಾ ಆಸ್ತಿಗಳಾಗಿ (ಮಾನಿಟೈಷೇಶನ್) ಮಾಡಲಾಗುವುದು ಎಂದು ತಿಳಿಸಿದರು.
ಕ್ಯಾಬಿನೆಟ್ ಅನುಮೋದನೆಯ ನಂತರ, ಈಗ ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ಉದ್ಯಮಗಳ ಇಲಾಖೆಗೆ (ಡಿಪಿಇ) ಸ್ವತ್ತುಗಳ ಹಣಗಳಿಕೆಯ ಜವಾಬ್ದಾರಿಯನ್ನು ವಹಿಸಲಾಗುವುದು ಎಂದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಿಪಿಸಿಎಲ್, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಐಡಿಬಿಐ ಬ್ಯಾಂಕ್, ಬಿಇಎಂಎಲ್, ಪವನ್ ಹನ್ಸ್, ನೀಲಾಚಲ್ ಇಸ್ಪಾಟ್ ನಿಗಮ್ ಲಿಮಿಟೆಡ್‌ನ ಕಾರ್ಯತಂತ್ರ ಆಧಾರಿತ ಮಾರಾಟವನ್ನು ಮುಕ್ತಾಯಗೊಳಿಸುವ ಗುರಿಯನ್ನು ಸರಕಾರ ಹೊಂದಿದೆ.
2021-22 ಬಜೆಟ್‌ನಲ್ಲಿ, ಸರಕಾರವು ಪಿಎಸ್‌ಇ (ಸಾರ್ವಜನಿಕ ವಲಯದ ಉದ್ಯಮಗಳು) ಖಾಸಗೀಕರಣ ನೀತಿಯನ್ನು ಘೋಷಿಸಿತ್ತು, ಅದರ ಪ್ರಕಾರ ಎಲ್ಲಾ ಸರಕಾರಿ ಒಡೆತನದ ಆಸ್ತಿ (ಪಿಎಸ್ಯು)ಗಳನ್ನು ಖಾಸಗೀಕರಣ ಗೊಳಿಸಲಾಗುವುದು, ಪರಮಾಣು ಶಕ್ತಿ, ಬಾಹ್ಯಾಕಾಶ ಮತ್ತು ರಕ್ಷಣೆ; ಸಾರಿಗೆ ಮತ್ತು ದೂರಸಂಪರ್ಕ; ವಿದ್ಯುತ್, ಪೆಟ್ರೋಲಿಯಂ, ಕಲ್ಲಿದ್ದಲು ಮತ್ತು ಇತರ ಖನಿಜಗಳು; ಮತ್ತು ಬ್ಯಾಂಕಿಂಗ್, ವಿಮೆ ಖಾಸಗೀಕರಣಕ್ಕೆ ಒಳಪಡಲಿವೆ ಎಂದು ತಿಳಿಸಿದರು.
ಈ ವಲಯಗಳಲ್ಲಿ,ಸರಕಾರವು ಕನಿಷ್ಟ ಸಂಖ್ಯೆಯ ಪಿಎಸ್‌ಯು (ಸರಕಾರಿ ಒಡೆತನ)ಗಳನ್ನು ಮಾತ್ರ ಉಳಿಸಿಕೊಳ್ಳುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.