![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Feb 13, 2019, 5:35 AM IST
ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯ ಪಶ್ಚಿಮ್ ಪುರಿ ಪ್ರದೇಶದಲ್ಲಿನ ಕೊಳೆಗೇರಿಯಲ್ಲಿ ಇಂದು ಬುಧವಾರ ನಸುಕಿನ ವೇಳೆ ಭಾರೀ ಬೆಂಕಿ ಕಾಣಿಸಿಕೊಂಡು ಸುಮಾರು 200 ಗುಡಿಸಲುಗಳು ಸುಟ್ಟು ಭಸ್ಮವಾದವು.
ಬೆಂಕಿ ದುರಂತದ ಸುದ್ದಿ ತಿಳಿದೊಡನೆಯೇ ಕನಿಷ್ಠ 25 ಅಗ್ನಿ ಶಾಮಕಗಳು ಸ್ಥಳಕ್ಕೆ ಧಾವಿಸಿ ಬಂದು ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ಕೈಗೊಂಡವು. ಆದರೆ ನೋಡನೋಡುತ್ತಲೇ 200 ಗುಡಿಸಲುಗಳು ಸುಟ್ಟು ಕರಕಲಾದವು.
ಬೆಂಕಿ ದುರಂತದಲ್ಲಿ ಓರ್ವ ಮಹಿಳೆಗೆ ಗಾಯವಾಗಿದ್ದು ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಯಾವುದೇ ಜೀವಹಾನಿ ಆಗಿರುವ ವರದಿ ಈ ವರೆಗೆ ಇಲ್ಲ.
ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆಯಾದರೂ ಬೆಂಕಿಯನ್ನು ಪೂರ್ತಿಯಾಗಿ ನಂದಿಸುವ ಕೆಲಸ ಈಗಲೂ ಸಾಗುತ್ತಿದೆ ಎಂದು ಅಗ್ನಿ ಶಾಮಕ ಮೂಲಗಳು ತಿಳಿಸಿವೆ.
ಒಂದು ದಿನದ ಹಿಂದಷ್ಟೇ ದಿಲ್ಲಿಯ ಕರೋಲ್‌ಬಾಗ್ ಪ್ರದೇಶದಲ್ಲಿ ಹೊಟೇಲ್ ಒಂದರಲ್ಲಿ ಸಂಭವಿಸಿದ್ದ ಭೀಕರ ಅಗ್ನಿ ದುರಂತಕ್ಕೆ ಒಂದು ಮಗು ಸಹಿತ 17 ಮಂದಿ ಬಲಿಯಾಗಿದದ್ದರು.
You seem to have an Ad Blocker on.
To continue reading, please turn it off or whitelist Udayavani.