ಉದ್ಧವ್ ಠಾಕ್ರೆ ಮತ್ತು ನಾರಾಯಣ್ ರಾಣೆ ನಡುವೆ ಮಾತಿನ ಚಕಾಮಕಿ
ಚಿಪಿ ವಿಮಾನ ನಿಲ್ದಾಣ ಲೋಕಾರ್ಪಣೆ
Team Udayavani, Oct 9, 2021, 10:00 PM IST
ಸಿಂಧುದುರ್ಗ: ಜಿಲ್ಲೆಯ ಮಹತ್ವಾಕಾಂಕ್ಷೆಯ ಯೋಜನೆಯಾದ ಚಿಪಿ ವಿಮಾನ ನಿಲ್ದಾಣದ ಲೋಕಾರ್ಪಣೆ ಶನಿವಾರ ಸಿಎಂ ಉದ್ಧವ್ ಠಾಕ್ರೆ ಮತ್ತು ಕೇಂದ್ರ ಸಚಿವ ನಾರಾಯಣ್ ರಾಣೆ ಅವರ ಸಮ್ಮುಖದಲ್ಲಿ ನಡೆಯಿತು. ಈ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಕೇಂದ್ರ ಸಚಿವ ನಾರಾಯಣ್ ರಾಣೆ ನಡುವೆ ಮಾತಿನ ಚಕಮಕಿ ನಡೆಯಿತು.
ಹಲವು ದಿನಗಳ ನಂತರ, ಇಬ್ಬರು ಅನುಭವಿಗಳು ಇಂದು ಒಂದೇ ವೇದಿಕೆಯನ್ನು ಹಂಚಿಕೊಂಡಿರುವುದು ಕಂಡು ಬಂದಿದ್ದರಿಂದ ಇಬ್ಬರೂ ಏನು ಹೇಳಲು ಹೊರಟಿದ್ದಾರೆ ಎಂಬುದರ ಮೇಲೆ ಎಲ್ಲರ ದೃಷ್ಟಿಯೂ ಇತ್ತು. ಅಂತಿಮವಾಗಿ, ನಾರಾಯಣ್ ರಾಣೆ ಅವರ ಭಾಷಣದ ನಂತರ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ತಮ್ಮ ಭಾಷಣದ ಮೂಲಕ ನಾರಾಯಣ್ ರಾಣೆ ಅವರ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದರು.
ಈ ಸಮಯದಲ್ಲಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾತನಾಡಿ, ಈ ಹಿಂದೆ ಹೇಳಲಾದ ಅಭಿವೃದ್ಧಿ ಕಥೆಗಳನ್ನು ನಾನು ಪುನರಾವರ್ತಿಸುವುದಿಲ್ಲ. ಆದರೆ ನಾನು ವೈಮಾನಿಕ ಛಾಯಾಗ್ರಹಣ ಮಾಡುತ್ತಿದ್ದಾಗ, ಛತ್ರಪತಿ ಶಿವಾಜಿ ಮಹಾರಾಜರ ಕೋಟೆಯನ್ನು ಗಮನವಿಸಿದೆ. ಸಿಂಧುದುರ್ಗ ಕೋಟೆಯನ್ನು ಛತ್ರಪತಿ ಶಿವಾಜಿ ಮಹಾರಾಜರು ನಿರ್ಮಿಸಿದ್ದಾ ರೆ ಎಂಬುದು ನನ್ನ ತಿಳುವಳಿಕೆ. ನಾನು ಅದನ್ನು ನಿರ್ಮಿಸಿದೆ ಎಂದು ಯಾರು ಹೇಳುವಂತಿಲ್ಲ ಎಂದು ಪರೋಕ್ಷವಾಗಿ ನಾರಾಯಣ ರಾಣೆ ಅವರನ್ನು ಲೇವಡಿ ಮಾಡಿದರು.
ಇಂದಿನ ಕ್ಷಣವನ್ನು ನಾವು ಸಂತೋಷದ ವ್ಯಕ್ತಪಡಿಸುತ್ತಾ, ಕೇಂದ್ರ ಸಚಿವ ಜ್ಯೋತಿರಾದಿತ್ಯಜಿ, ನಾನು ನಿಮ್ಮನ್ನು ವಿಶೇಷವಾಗಿ ಅಭಿನಂದಿಸುತ್ತೇನೆ. ಏಕೆಂದರೆ ಇಷ್ಟು ದಿನ ಮರಾಠಿ ಮಣ್ಣಿಂದ ದೂರವಿದ್ದ ನಂತರವೂ ನೀವು ಮರಾಠಿ ಮಣ್ಣಿನ ಸಂಸ್ಕಾರವನ್ನು ಮರೆತಿಲ್ಲ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಇದು ನನಗೆ ಅತ್ಯಂತ ಸಂತೋಷದ ದಿನ. ಏಕೆಂದರೆ, ಶಿವಸೇನೆ ಮತ್ತು ಕೊಂಕಣರ ನಡುವಿನ ಸಂಬಂಧದ ಬಗ್ಗೆ ನಾನು ನಿಮಗೆ ಹೇಳಲು ಬಯಸುವುದಿಲ್ಲ. ಈ ಸಿಂಧುದುರ್ಗದಲ್ಲಿ ಕೊಂಕಣ ಜನರ ಮುಂದೆ ತಲೆಬಾಗುವ ಶಿವಸೇನೆ ಮುಖ್ಯಸ್ಥ ಎಲ್ಲಿಯೂ ತಲೆಬಾಗುವುದಿಲ್ಲ ಎಂದು ಈಗಾಗಲೇ ಅನೇಕ ಬಾರಿ ಹೇಳಿದ್ದೇನೆ.
ಇದನ್ನೂ ಓದಿ:ಮುಂದಿನ ಚಿತ್ರ ಘೋಷಿಸಿದ ಆಯುಷ್ಮಾನ್ ಖುರಾನಾ
ಹಾಗೆಯೇ, ಯಾರು ಏನು ಮಾಡಿದ್ದಾರೆ, ಯಾರು ಏನು ಮಾಡಬೇಕು ಎಂಬುದು ಅವರ ಪ್ರಶ್ನೆ. ನಾನು ಆ ವಿಷಯದ ಬಗ್ಗೆ ಸಾಕಷ್ಟು ಮಾತನಾಡಬಹುದು, ಆದರೆ ಇಂದು ಒಂದು ಮಹತ್ವದ ದಿನ. ನಮ್ಮ ಕೊಂಕಣ ಮಹಾರಾಷ್ಟ್ರದ ಮಹಿಮೆ. ನಾವು ಅದನ್ನು ಇಂದು ಜಗತ್ತಿಗೆ ಕೊಂಡೊಯ್ಯುತ್ತಿದ್ದೇವೆ. ಜಗತ್ತಿನಲ್ಲಿ ಅನೇಕ ಪ್ರವಾಸಿಗರಿಗೆ ಕೊಂಕಣದ ಸಂಸ್ಕೃತಿಯನ್ನು ತಿಳಿಸುವುದರ ಜತೆಗೆ ಅವರನ್ನು ಬರ ಮಾಡಿಕೊಳ್ಳಲು ವಿಮಾನ ನಿಲ್ದಾಣ ಸೌಲಭ್ಯ ದೊಡ್ಡ ಭಾಗವಾಗಿದೆ. ಇಂದು ವಿಮಾನ ನಿಲ್ದಾಣ ಉದ್ಘಾಟನೆ ಮತ್ತು ಆ ವಿಮಾನ ನಿಲ್ದಾಣವನ್ನು ಇಂದು ಉದ್ಘಾಟಿಸಲಾಗಿದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ಬಗ್ಗೆ ಆದಿತ್ಯ ಠಾಕ್ರೆ ಹೇಳಿಕೆ ನೀಡಿದ್ದಾರೆ. ಆದರೆ ಅಭಿವೃದ್ಧಿಯ ಬಗ್ಗೆ ಪಠಣದಿಂದ ಮಾತನಾಡುವುದು ಬೇರೆ ಮತ್ತು ಮನದಾಳದಿಂದ ಮಾಡಿದ ಕಾರ್ಯದ ಬಗ್ಗೆ ಮಾತನಾಡುವುದು ಇನ್ನೂ ವಿಭಿನ್ನವಾಗಿದೆ ಎಂದು ಮುಖ್ಯಮಂತ್ರಿಯವರು ತಮ್ಮ ಭಾಷಣದಲ್ಲಿ ಹೇಳಿದರು.
ನಾರಾಯಣ್ ರಾಣೆ ಸರಕಾರದ ವಿರುದ್ಧ ಟೀಕೆ
ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ ಆದರೆ, ಬರುವವರಿಗೆ ನೀರಿನ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವವರು ಯಾರು?, ಬಂದವರು ವಿಮಾನ ನಿಲ್ದಾಣದ ಹೊರಗಿನ ರಸ್ತೆಯ ಹೊಂಡಗಳನ್ನು ನೋಡಬೇಕಾ? ಎಂದು ನಾರಾಯಣ್ ರಾಣೆ ರಾಜ್ಯ ಸರಕಾರದ ಮೇಲೆ ಟೀಕೆ ವ್ಯಕ್ತಪಡಿಸಿದ್ದಾರೆ.
ಪ್ರವಾಸೋದ್ಯಮದ ವಿಷಯ ಬಂದಾಗ, ನಮ್ಮ ಗಮನಕ್ಕೆ ಸಹಜವಾಗಿ ಬರುವ ರಾಜ್ಯ ಎಂದರೆ ನೆರೆಯ ಗೋವಾ. ಇದರರ್ಥ ನಾವು ಗೋವಾ ವಿರುದ್ಧ ಎನ್ನುವ ಅರ್ಥವಲ್ಲ. ಆದರೆ ಸಿಂಧುದುರ್ಗದಲ್ಲಿ ನಮ್ಮ ಏಳಿಗೆ ಏನು? ನಮ್ಮಲ್ಲಿ ವೈಭವ, ಶ್ರೀಮಂತಿಕೆ ಇದ್ದರೂ ಅಭಿವೃದ್ಧಿಯ ಕಾರ್ಯವು ಮಾತ್ರ ಶೂನ್ಯದತ್ತ ಸಾಗುತ್ತಿದೆ. ಇಂದು ಸಿಂಧುದುರ್ಗದ ರಸ್ತೆಗಳು ಹೊಂಡದಿಂದ ತುಂಬಿದೆ, ಸೌಲಭ್ಯಗಳಿಲ್ಲ ಎಂದು ನಾರಾಯಣ ರಾಣೆ ಹೇಳಿದ್ದಾರೆ.
ನಾವು ಕೊಂಕಣ ಕ್ಯಾಲಿಫೋರ್ನಿಯಾವನ್ನು ಮಾಡುತ್ತೇವೆ ಎಂದು ಈ ಹಿಂದೆ ಅನೇಕರು ಹೇಳಿದ್ದರು. ಆದರೆ ಶಿವಸೇನೆ ಮುಖ್ಯಸ್ಥರು ಕ್ಯಾಲಿಫೋರ್ನಿಯಾ ಹೆಮ್ಮೆ ಪಡುವಂತೆ ನಾನು ಕೊಂಕಣವನ್ನು ನಿರ್ಮಿಸುತ್ತೇನೆ ಎಂದು ಹೇಳಿದ್ದರು. ಇಂದು ನಾವು ಪ್ರವಾಸೋದ್ಯಮಕ್ಕೆ ಉದ್ಯಮದ ಸ್ಥಾನಮಾನವನ್ನು ನೀಡಿದ್ದೇವೆ ಎಂದು ಪರಿಸರ ಸಚಿವ ಆದಿತ್ಯ ಠಾಕ್ರೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.