ಅಪನಗದೀಕರಣದ ಬಳಿಕ ದೊಡ್ಡ ಚುನಾವಣೆ; ವೆಚ್ಚಕ್ಕೆ ಮಿತಿ,ನಿರ್ಬಂಧಗಳು
Team Udayavani, Jan 4, 2017, 2:31 PM IST
ಹೊಸದಿಲ್ಲಿ: ನೋಟು ಅಪನಗದೀಕರಣದ ಬಳಿಕ ಇದೇ ಮೊದಲ ಬಾರಿಗೆ ದೇಶ ದೊಡ್ಡ ಮಟ್ಟದ ಚುನಾವಣೆಗಳನ್ನು ಎದುರುನೋಡುತ್ತಿದೆ. ಪಂಚರಾಜ್ಯಗಳ ವಿಧಾನಸಭಾ ಮತದಾನಕ್ಕೆ ಚುನಾವಣಾ ಆಯೋಗ ಬುಧವಾರ ದಿನಾಂಕಗಳನ್ನು ಪ್ರಕಟಿಸಿದ್ದು ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಹದ್ದಿನ ಕಣ್ಣು ಇಡಲು ಮುಂದಾಗಿದೆ.ಇದಕ್ಕಾಗಿ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ.
ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ ಸುದ್ದಿಗೋಷ್ಠಿ ನಡೆಸಿ ಚುನಾವಣೆಗಳ ದಿನಾಂಕಗಳನ್ನು ಪ್ರಕಟಿಸಿದ್ದು,ಅಭ್ಯರ್ಥಿಗಳಿಗೆ ಕೆಲ ನಿರ್ಬಂಧಗಳನ್ನು ವಿಧಿಸಿದ್ದಾರೆ. ಉತ್ತರಪ್ರದೇಶ,ಪಂಜಾಬ್ ಮತ್ತು ಗೋವಾದಲ್ಲಿ ಪ್ರತಿ ಅಭ್ಯರ್ಥಿಗೆ ಚುನಾವಣಾ ವೆಚ್ಚದ ಗರಿಷ್ಠ ಮಿತಿ 28 ಲಕ್ಷ ರೂಪಾಯಿ ಇಡಲಾಗಿದ್ದು, ಗೋವಾ ಮತ್ತು ಮಣಿಪುರದಲ್ಲಿ 20 ಲಕ್ಷ ರೂಪಾಯಿ ಇಡಲಾಗಿದೆ.
ಚುನಾವಣೆಗೆ ಸ್ಪಧಿಸುವ ಎಲ್ಲಾ ಅಭ್ಯರ್ಥಿಗಳು ಹೊಸದಾಗಿ ಬ್ಯಾಂಕ್ ಖಾತೆ ತೆರೆಯಲು ಷರತ್ತು ವಿಧಿಸಲಾಗಿದ್ದು, 20,000 ದಾಟುವ ಎಲ್ಲಾ ವ್ಯವಹಾರವನ್ನು ಚೆಕ್ ಮೂಲಕವೇ ಮಾಡಲು ನಿರ್ಬಂಧ ವಿಧಿಸಲಾಗಿದೆ. ಅಲ್ಲದೆ ಎಲ್ಲಾ ದೇಣಿಗೆಗಳನ್ನು ಚೆಕ್ ಮೂಲಕ ಪಡೆಯಲು ಅವಕಾಶ ನೀಡಿದೆ.
ಫೆಬ್ರವರಿ 4 ರಿಂದ ಮಾರ್ಚ್ 8 ರ ವೆರೆಗೆ ಚುನಾವಣೆಗಳು ನಡೆಯಲಿದ್ದು ಮಾರ್ಚ್ 11 ರಂದು ಎಲ್ಲಾ ರಾಜ್ಯಗಳ ಫಲಿತಾಂಶ ಒಟ್ಟಿಗೆ ಪ್ರಕಟವಾಗಲಿದೆ. ಇಂದಿನಿಂದಲೇ ಐದೂ ರಾಜ್ಯಗಳಲ್ಲಿ ನೀತಿ ಸಂಹಿತೆ ಜಾರಿಯಾಗಿದೆ.
403 ವಿಧಾನಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶ ದಲ್ಲಿ 7 ಹಂತಗಳಲ್ಲಿ, 60 ವಿಧಾನಸಭಾ ಕ್ಷೇತ್ರಗಳಿರುವ ಮಣಿಪುರ ದಲ್ಲಿ 2 ಹಂತದಲ್ಲಿ, 117 ವಿಧಾನಸಭಾ ಕ್ಷೇತ್ರಗಳಿರುವ ಪಂಜಾಬ್, 70 ವಿಧಾನಸಭಾ ಕ್ಷೇತ್ರಗಳಿರುವ ಉತ್ತರಾಖಂಡ ಮತ್ತು 40 ವಿಧಾನಸಭಾ ಕ್ಷೇತ್ರಗಳಿರುವ ಗೋವಾ ವಿಧಾನಸಭೆಗೆ 1 ಹಂತದಲ್ಲಿ ಮತದಾನ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.