ಮೊದಲ ಅಂಗವಿಕಲ ಮಾಡೆಲ್!
Team Udayavani, Dec 8, 2017, 7:40 AM IST
ಹೊಸದಿಲ್ಲಿ: ಬೆಂಗಳೂರಿನ ಪೋಲಿಯೋ ಸಂತ್ರಸ್ತೆಯಾದ 26 ವರ್ಷದ ತಾಂತ್ರಿಕ ಪದವೀಧರೆ ಮಹಾ ಲಕ್ಷ್ಮೀಮಹದೇವನ್, ಭಾರತದ ಮೊದಲ ಅಂಗವಿಕಲ ರೂಪದರ್ಶಿಯೆಂಬ ಹೆಗ್ಗಳಿಕೆಗೆ ಶೀಘ್ರದಲ್ಲೇ ಪಾತ್ರರಾಗಲಿದ್ದಾರೆ!
ಹೌದು. ಚೆನ್ನೈ ಮೂಲದ ವಸ್ತ್ರ ವಿನ್ಯಾಸ ಕಂಪನಿಯೊಂದಕ್ಕಾಗಿ ಅವರು ಇತ್ತೀಚೆಗೆ 44 ಸೆಕೆಂಡ್ಗಳ ಜಾಹೀರಾತಿನಲ್ಲಿ ಅಭಿನಯಿಸಿದ್ದು, ಶೀಘ್ರವೇ ಅದು ಬಿಡುಗಡೆಯಾಗಲಿದೆ.
ಚಿಕ್ಕಂದಿನಿಂದಲೂ ಮಾಡೆಲಿಂಗ್ ಕನಸು ಕಾಣುತ್ತಿದ್ದ ಮಹಾಲಕ್ಷ್ಮೀ ಅವರು ಪೋಲಿ ಯೋದಿಂದಾಗಿ ಕಾಲುಗಳ ಸ್ವಾಧೀನ ಕಳೆದು ಕೊಂಡು ವ್ಹೀಲ್ ಚೇರ್ ಆಸರೆಗೊಳಗಾದಾಗ ತಮ್ಮ ಮಾಡೆಲಿಂಗ್ ಆಸೆಯನ್ನೇ ಕೈಬಿಟ್ಟಿದ್ದರು. ಆದರೆ, ಅದಾಗಿ ಹತ್ತಾರು ವರ್ಷಗಳ ತರು ವಾಯ ಇತ್ತೀಚೆಗೆ, ಚೆನ್ನೈನ ವಸ್ತ್ರ ವಿನ್ಯಾಸಕಿ ಶಾಲಿನಿ ವಿಕಾಸನ್ ಎಂಬುವರನ್ನು ಭೇಟಿಯಾ ದಾಗ ಅವರ ಕನಸುಗಳಿಗೆ ರೆಕ್ಕೆ ಬಂದವು.
ಶಾಲಿನಿ ಪತಿ ವಿಕಾಸನ್ ರಾಜೇಂದಿರನ್ ಈಕೆಯನ್ನು ತಮ್ಮ ಕಂಪನಿಯ ಜಾಹೀರಾತಿ ನಲ್ಲಿ ಬಳಸಿಕೊಳ್ಳಲು ಧೈರ್ಯ ಮಾಡಿದರು. ಇವರ ಆಶಯಕ್ಕೆ ಕೈ ಜೋಡಿಸಿದ ಸಿನಿಮಾಟೋಗ್ರಾಫರ್ ಜೆರಾಲ್ಡ್ ದಿನೇಶ್ ಹಾಗೂ ಮೇಕಪ್ ತಜ್ಞ ಸುರೇಶ್ ಮೆನನ್ ಉಚಿತವಾಗಿ ತಮ್ಮ ಸೇವೆ ನೀಡಲು ಮುಂದೆ ಬಂದರು. ಹಾಗಾಗಿ, ಸಿದ್ಧವಾಯಿತು 44 ಸೆಕೆಂಡ್ಗಳ ಜಾಹೀರಾತು. ಶೀಘ್ರದಲ್ಲೇ ಇದು ಬಿಡುಗಡೆಯಾಗಲಿದ್ದು ಮಹಾಲಕ್ಷ್ಮೀ ಭಾರತದ ಮೊದಲ ಅಂಗವಿಕಲ ಮಾಡೆಲ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.