ಹಾರಾಟ ನಿಷೇಧ ಪಟ್ಟಿಗೆ ಮೊದಲ ಸೇರ್ಪಡೆ
Team Udayavani, May 21, 2018, 9:53 AM IST
ವಿಮಾನಗಳಲ್ಲಿ ವಿನಾ ಕಾರಣ ರಂಪ, ರಾದ್ಧಾಂತ ಮಾಡುವವರನ್ನು “ಹಾರಾಟ ನಿಷೇಧಕ್ಕೆ ಒಳಪಡುವವರ ಪಟ್ಟಿ’ (ನೋ ಪ್ಲೆ„ ಲಿಸ್ಟ್)ಸೇರಿಸುವ ನಿಯಮ ಜಾರಿಯಾಗಿ 8 ತಿಂಗಳು ಕಳೆದಿವೆ. ಇದೇ ಮೊದಲ ಬಾರಿಗೆ ಮುಂಬೈನ ಬಿರ್ಜು ಕಿಶೋರ್ ಸಲ್ಲಾ ಎಂಬವರು ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ 2017ರ ಮಾ.23ರಂದು ಏರ್ ಇಂಡಿಯಾ ಸಿಬಂದಿಗೆ ಥಳಿಸಿದ ಪ್ರಕರಣದ ಬಳಿಕ ಈ ಬಗ್ಗೆ ನಿಯಮ ರೂಪುಗೊಂಡವು.
ಏನಿದು ಘಟನೆ
– 2017 ಅ.30ರಂದು ಮುಂಬಯಿಯ ಬಿರ್ಜು ಕಿಶೋರ್ ಸಲ್ಲಾ ಮುಂಬಯಿ -ದಿಲ್ಲಿ ವಿಮಾನ ಹೈಜಾಕ್ ಆಗಲಿದೆ ಎಂದು ನೋಟ್ ಅಂಟಿಸಿದ್ದರು.
– ಅದರಲ್ಲಿ ವಿಮಾನವನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ತೆಗೆದು ಕೊಂಡು ಹೋಗಬೇಕೆಂದು ಸೂಚಿಸಲಾಗಿತ್ತು.
– ಅಹಮದಾಬಾದ್‌ನಲ್ಲಿ ಇಳಿದ ಜೆಟ್ ಏರ್‌ವೆàಸ್ ವಿಮಾನ. ಅಲ್ಲಿ ಸಲ್ಲಾ ವಶಕ್ಕೆ.
– ಸಲ್ಲಾಗೆ 2017ರ ನವೆಂಬರ್‌ನಿಂದ ಐದು ವರ್ಷದ ಹಾರಾಟ ನಿಷೇಧ.
ಅಪರಾಧಗಳೇನು?
– ಆಂಗಿಕ ಭಾವಗಳ ಪ್ರದರ್ಶನಕ್ಕೆ ಮೂರು ತಿಂಗಳ ವರೆಗೆ ನಿಷೇಧ. ಇದು ಮೊದಲ ಹಂತ
– ಎರಡನೇ ಹಂತದಲ್ಲಿ ಲೈಂಗಿಕ ಕಿರುಕುಳ, ತಳ್ಳುವುದು. ಇದಕ್ಕೆ 6 ತಿಂಗಳ ನಿಷೇಧ
– ಸಲ್ಲಾಗೆ ಅತ್ಯಂತ ಹೆಚ್ಚಿನ (ಮೂರನೇ ಹಂತ)ದ ಶಿಕ್ಷೆ ವಿಧಿಸಲಾಗಿದೆ. ಅದರಲ್ಲಿ 2 ವರ್ಷಗಳಿಂದ ಜೀವಿತಾವಧಿ ವರೆಗೆ ನಿಷೇಧ.
– ಜೀವ ಬೆದರಿಕೆ, ವಿಮಾನ ಹಾರಾಟಕ್ಕೆ ತೊಂದರೆ, ಹಲ್ಲೆ, ಕಾಕ್‌ಪಿಟ್ ಪ್ರವೇಶಕ್ಕೆ ಯತ್ನ 3ನೇ ಹಂತದಲ್ಲಿ ಬರುತ್ತದೆ.
ಪರಿಣಾವೇನು?
– ಹಾರಾಟ ನಿಷೇಧ ಪಟ್ಟಿಯಲ್ಲಿರುವ ವ್ಯಕ್ತಿಗೆ ನಿಗದಿತ ಸಂಸ್ಥೆಯ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಮಾನ ಸೇವೆ ಪಡೆಯಲು ಸಾಧ್ಯವಿಲ್ಲ.
– ಇತರ ವಿಮಾನ ಸಂಸ್ಥೆಗಳು ಈ ನಿಯಮ ಅನುಸರಿಸಬೇಕೆಂದೇನೂ ಇಲ್ಲ.
ನಿಷೇಧ ಹೇಗೆ ನಿರ್ಧರಿಸಲಾಗುತ್ತದೆ?
– ವಿಮಾನದ ಕಮಾಂಡರ್ ವಿಮಾನಯಾನ ಸಂಸ್ಥೆಗೆ ಘಟನೆಯ ಬಗ್ಗೆ ವರದಿ ಮಾಡಬೇಕು.
– ನಿವೃತ್ತ ಜಡ್ಜ್ ನೇತೃತ್ವದಲ್ಲಿ ತನಿಖೆಗೆ ಸಮಿತಿ ನೇಮಕ ಮಾಡಬೇಕು.
– 30 ದಿನಗಳಲ್ಲಿ ಅದು ವ್ಯಕ್ತಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬೇಕು.
– ಈ ಅವಧಿಯಲ್ಲಿ ಆರೋಪಕ್ಕೆ ಗುರಿಯಾದ ವ್ಯಕ್ತಿಗೆ ನಿಗದಿತ ವಾಯುಯಾನ ಸಂಸ್ಥೆಯ ವಿಮಾನ ಹಾರಾಟಕ್ಕೆ ನಿಷೇಧ ಇರುತ್ತದೆ
– 30 ದಿನಗಳಲ್ಲಿ ನಿಷೇಧ ನಿರ್ಧಾರವಾಗದೇ ಇದ್ದರೆ ವಿಮಾನ ಪ್ರಯಾಣಕ್ಕೆ ಅಡ್ಡಿ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.