ಹಣಕಾಸು ಹಂಚಿಕೆ ಕಾರ್ಯತಂತ್ರ ಕುರಿತು ಚರ್ಚೆ
Team Udayavani, Dec 5, 2017, 7:44 AM IST
ನವದೆಹಲಿ: ನೂತನವಾಗಿ ರಚನೆಯಾಗಿರುವ 15ನೇ ಹಣಕಾಸು ಆಯೋಗದ ಮೊದಲ ಸಭೆ ಸೋಮವಾರ ನಡೆಯಿತು. ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅನೂಪ್ ಸಿಂಗ್, “”ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಹಣಕಾಸು ಹಂಚಿಕೆ ಕುರಿತಂತೆ ರಾಜ್ಯಗಳೊಂದಿಗೆ ವ್ಯವಹರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ರಾಷ್ಟ್ರಪತಿಯಿಂದ ರವಾನಿಸಲ್ಪಟ್ಟಿರುವ ಉಲ್ಲೇಖೀತ ನಿಯಮಗಳ ಪ್ರಸ್ತಾವನೆ ಕುರಿತಂತೆಯೂ ಇಲ್ಲಿ ಚರ್ಚಿಸಲಾಯಿತು” ಎಂದು ತಿಳಿಸಿದರು.
ಸರ್ಕಾರದ ಆದಾಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಹಂಚಿಕೆಯಾಗಬೇಕಿರುವ ಬಗ್ಗೆ ಕರಡು ಪ್ರತಿ ರೂಪಿಸುವುದು ಆಯೋಗದ ಮೊದಲ ಕಾರ್ಯವಾಗಿದ್ದು, ಈ ಕುರಿತಂತೆ ಸೋಮವಾರ ಸುದೀರ್ಘ ಚರ್ಚೆ ನಡೆಸಲಾಯಿತು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಯೋಜನಾ ಆಯೋಗದ ಮಾಜಿ ಸದಸ್ಯ ಎನ್.ಕೆ. ಸಿಂಗ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಹಾಗೂ ಆಯೋಗದ ಇತರ ಸದಸ್ಯರಾದ ಅನೂಪ್ ಸಿಂಗ್, ಅಶೋಕ್ ಲಾಹಿರಿ ಹಾಗೂ ರಮೇಶ್ ಚಾಂದ್ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.