ನಿತೀಶ್ ಕಾರ್ಯಕ್ರಮ ತಪ್ಪಿಸಿಕೊಂಡ ತೇಜಸ್ವಿ: ಘಟಬಂಧನ ಬಿರುಕು ತೀವ್ರ
Team Udayavani, Jul 15, 2017, 4:19 PM IST
ಪಟ್ನಾ : ಬಿಹಾರದ ಮಹಾಘಟಬಂಧನದಲ್ಲಿನ ಬಿಕ್ಕಟ್ಟು ಶಮನವಾಗುವ ಲಕ್ಷಣವೇ ತೋರಿ ಬರುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದ ಭ್ರಷ್ಟಾಚಾರ ಕಳಂಕಿತ ಲಾಲು ಪುತ್ರ, ಉಪ ಮುಖ್ಯಮಂತಿ ತೇಜಸ್ವಿ ಯಾದವ್ ಆ ಕಾರ್ಯಕ್ರಮವನ್ನು ತಪ್ಪಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಆಯೋಜಿಸಿದ್ದ ವಿಶ್ವ ಯುವ ಕೌಶಲ ದಿವಸ ಸಮಾರಂಭದ ವೇದಿಕೆಯಲ್ಲಿ ತೇಜಸ್ವಿ ಯಾದವ್ ಅವರಿಗೆ ಆಸನವನ್ನು ಇಡಲಾಗಿತ್ತು; ಅದರ ಮುಂದೆ ಅವರ ನೇಮ್ ಪ್ಲೇಟ್ ಕೂಡ ಇಡಲಾಗಿತ್ತು. ಆದರೆ ತೇಜಸ್ವಿ ಕಾರ್ಯಕ್ರಮಕ್ಕೆ ಬಾರದಿದ್ದಾಗ ನೇಮ್ ಪ್ಲೇಟ್ ಮುಚ್ಚಲಾಯಿತು; ಬಳಿಕ ಆಸನ ಸಹಿತವಾಗಿ ಆ ನೇಮ್ ಪ್ಲೇಟನ್ನು ತೆಗೆಯಲಾಯಿತು.
‘ಭ್ರಷ್ಟಾಚಾರ ಕಳಂಕಿತರಾಗಿರುವ ಲಾಲು ಪುತ್ರ, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಕಳಂಕದಿಂದ ಮುಕ್ತರಾಗಿ ಬರುವ ತನಕ ಅಧಿಕಾರ ಬಿಟ್ಟುಕೊಡುವುದೇ ಲೇಸು; ಹಿಂದೆ ನಿತೀಶ್ ಕುಮಾರ್ ಹಾಗೆಯೇ ಮಾಡಿದ್ದಾರೆ’ ಎಂದು ಜೆಡಿಯು ವಕ್ತಾರ ಕೆ ಸಿ ತ್ಯಾಗಿ ಹೇಳಿರುವುದು ಲಾಲು ಗೆ ಪಥ್ಯವಾಗಿಲ್ಲ.
“ತೇಜಸ್ವಿ ರಾಜೀನಾಮೆ ಕೊಡುವುದಿಲ್ಲ; ಅಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಲಾಲು ಖಡಕ್ ಉತ್ತರ ನೀಡಿದ್ದಾರೆ. ಹಾಗಿದ್ದರೂ ಬಿಹಾರದ ಮಹಾ ಘಟಬಂಧನಕ್ಕೆ ಯಾವುದೇ ಧಕ್ಕೆ ಇಲ್ಲ ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.