ಸಮೂಹ ಪ್ರತಿಕಾಯ ಸುಳಿವು

ದೇಶದಲ್ಲಿ ಮೊದಲ ಬಾರಿಗೆ ಪುಣೆಯಲ್ಲಿ ಹರ್ಡ್‌ ಇಮ್ಯುನಿಟಿ ಸೃಷ್ಟಿ

Team Udayavani, Nov 21, 2020, 6:51 AM IST

Vaccine

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: “ಜಗತ್ತನ್ನು ಕಾಡುತ್ತಿರುವ ಕೋವಿಡ್ ವೈರಸ್‌ ಕೊನೆಗಾಣಲು ಇರುವುದು ಎರಡೇ ಎರಡು ದಾರಿ. ಲಸಿಕೆ ಅಭಿವೃದ್ಧಿಪಡಿಸುವ ಮೂಲಕ ಮತ್ತು “ಸಮೂಹ ಪ್ರತಿಕಾಯ’ (ಹರ್ಡ್‌ ಇಮ್ಯುನಿಟಿ) ಎಂಬ ನೈಸರ್ಗಿಕ ಪ್ರಕ್ರಿಯೆಯ ಮೂಲಕ’ ಎಂದು ಹಲವು ತಜ್ಞರು, ವೈದ್ಯಕೀಯ ಸಂಶೋಧಕರು ಈಗಾಗಲೇ ಹೇಳಿದ್ದಾರೆ. ಕಳೆದ 2 ವಾರಗಳಲ್ಲಿ ಲಸಿಕೆ ಅಭಿವೃದ್ಧಿ ವಿಚಾರದಲ್ಲಿ ಸಕಾರಾತ್ಮಕ ಸುದ್ದಿಗಳು ಕೇಳಿಬರುತ್ತಿವೆ. ಇದರ ನಡುವೆಯೇ, ಸಮಾಧಾನ ತರುವಂಥ ಮತ್ತೂಂದು ಬೆಳವಣಿಗೆ ನಡೆದಿದೆ. ಅದೇನೆಂದರೆ, ಇದೇ ಮೊದಲ ಬಾರಿಗೆ ಪುಣೆಯ ಜನರಲ್ಲಿ “ಸಮೂಹ ಪ್ರತಿಕಾಯ’ ಸೃಷ್ಟಿಯಾಗಿರುವ ಸುಳಿ­ವೊಂದು ಅಧ್ಯಯನದಿಂದ ಸಿಕ್ಕಿದೆ.

ಪುಣೆಯ ಪ್ರದೇಶವೊಂದರಲ್ಲಿ ಈ ಹಿಂದೆ ನಡೆಸಿದ ಸೀರೋಸರ್ವೇಯಲ್ಲಿ ಇಲ್ಲಿನ ಶೇ.85ರಷ್ಟು ಮಂದಿಗೆ ಸೋಂಕು ತಗಲಿ ಗುಣಮುಖರಾಗಿರುವ ಮಾಹಿತಿ ಬಹಿರಂಗ­ವಾಗಿತ್ತು. ಈ ಎಲ್ಲ ಶೇ.85 ಮಂದಿಯ ದೇಹದಲ್ಲೂ ಸುರಕ್ಷಿತ ಪ್ರತಿಕಾಯ ಉತ್ಪತ್ತಿಯಾಗಿರುವ ವಿಚಾರ ಈಗ ತಿಳಿದು­ಬಂದಿದ್ದು, ಇಲ್ಲಿನ ಜನರಲ್ಲಿ ಸಾಮೂಹಿಕ ಪ್ರತಿರಕ್ಷೆ ಮೂಡಿರುವ ಸಾಧ್ಯತೆ ದಟ್ಟವಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಪುಣೆಯಲ್ಲಿ 3-4 ವಾರ್ಡ್‌­ ಗಳಿ­ರುವ 5 ಪ್ರದೇಶಗಳಲ್ಲಿ ಸೀರೋ­­­­ಸರ್ವೇಯ ಫಾಲೋ ಅಪ್‌ ಅಧ್ಯಯನ ನಡೆಸಲಾ­ಗಿತ್ತು. ದೇಶ­ದಲ್ಲಿ ಮೊದಲ ಬಾರಿಗೆ ಜನರ ದೇಹ­ದಲ್ಲಿ ಸುರಕ್ಷಿತ ಪ್ರತಿಕಾಯಗಳು ಸೃಷ್ಟಿ­ಯಾಗಿರುವುದು ಪತ್ತೆಯಾ­ಗಿದ್ದು, ಭರವಸೆ ಮೂಡಿಸಿದೆ. ಅಲ್ಲದೆ, ಲೋಹಿಯಾನಗರ ಎಂಬಲ್ಲಿ ಕೆಲವು ತಿಂಗಳಿಂದ ಸೋಂಕಿ­ತರ ಸಂಖ್ಯೆ ಏಕಾಏಕಿ ಇಳಿ­ಮುಖ­ವಾಗಿರುವುದು ಕೂಡ ಜನ­ರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುವುದಕ್ಕೆ ಸಾಕ್ಷಿ ಎಂದೂ ವರದಿ ತಿಳಿಸಿದೆ.

6 ತಿಂಗಳು ಸೇಫ್: ಒಂದು ಬಾರಿ ಕೊರೊನಾ ಸೋಂಕು ತಗಲಿದರೆ, ಅದೇ ವ್ಯಕ್ತಿಗೆ ಕನಿಷ್ಠ 6 ತಿಂಗಳ ಕಾಲ ಸೋಂಕು ತಗುಲುವುದಿಲ್ಲ ಎಂದು ಆಕ್ಸ್‌ಫ‌ರ್ಡ್‌ ವಿವಿಯ ಸಂಶೋಧಕರು ಹೇಳಿದ್ದಾರೆ. ಈಗಾಗಲೇ ಸೋಂಕು ತಗಲಿರುವ 5 ಕೋಟಿಗೂ ಅಧಿಕ ಮಂದಿಗೆ ಇದೊಂದು ಸಮಾಧಾನ ತರುವ ವಿಚಾರ.

ಡೋಸ್‌ಗೆ 600 ರೂ.
ಖಾಸಗಿ ಮಾರುಕಟ್ಟೆಯಲ್ಲಿ ಸೀರಂ ಇನ್‌ಸ್ಟಿಟ್ಯೂಟ್‌ ಸಂಸ್ಥೆಯು ಕೊವಿಶೀಲ್ಡ್‌ ಲಸಿಕೆಯನ್ನು ಒಂದು ಡೋಸ್‌ಗೆ 500ರಿಂದ 600 ರೂ.ಗಳಿಗೆ ಮಾರಾಟ ಮಾಡುವ ಸಾಧ್ಯತೆಯಿದೆ ಎಂದು ಸಂಸ್ಥೆಯ ಸಿಇಒ ಅಡಾರ್‌ ಪೂನಾವಾಲ ಹೇಳಿದ್ದಾರೆ.

ರೋಗಲಕ್ಷಣಕ್ಕೂ ಮುನ್ನವೇ ಮಾಹಿತಿ ನೀಡುವ ವಾಚ್‌!
ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ನಿಮ್ಮ ದೇಹಕ್ಕೆ ಸೋಂಕು ತಗಲಿದೆಯೇ ಎಂಬುದನ್ನು ಈ ಸ್ಮಾರ್ಟ್‌ವಾಚ್‌ ಪತ್ತೆಹಚ್ಚಬಲ್ಲದು. ಹೌದು, ಅಮೆರಿಕದ ಸ್ಟಾನ್‌ಫೋರ್ಡ್‌ ಯುನಿವರ್ಸಿಟಿ ಸ್ಕೂಲ್‌ ಆಫ್ ಮೆಡಿಸಿನ್‌ನ ಸಂಶೋಧಕರು ಇಂಥದ್ದೊಂದು ವಾಚ್‌ ಅಭಿವೃದ್ಧಿಪಡಿಸಿದ್ದಾರೆ. 5,300 ಮಂದಿಯ ಮೇಲೆ ಪ್ರಯೋಗವನ್ನೂ ನಡೆಸಲಾಗಿದ್ದು, ಈ ಪೈಕಿ 32 ಮಂದಿಗೆ ಸೋಂಕು ತಗಲಿರುವುದನ್ನು ಸ್ಮಾರ್ಟ್‌ ವಾಚ್‌ ಪತ್ತೆಹಚ್ಚಿದೆ. ಸೋಂಕು ದೃಢಪಡುವ 9 ದಿನಗಳ ಮುಂಚಿತವಾಗಿಯೇ ಈ ವಾಚ್‌ ಸೋಂಕಿನ ಮಾಹಿತಿ ನೀಡಿದೆ. ಎದೆಬಡಿತ, ದೇಹದ ಉಷ್ಣತೆ, ನಿದ್ರೆ ಮತ್ತಿತರ ಅಂಶಗಳನ್ನು ಪರಿಗಣಿಸಿ ಇದು ಮಾಹಿತಿ ಒದಗಿಸುತ್ತದೆ.

ಏನಿದು ಸಮೂಹ ಪ್ರತಿಕಾಯ?
ಜನಸಂಖ್ಯೆಯ ಬಹುಪಾಲು ಮಂದಿಯ ದೇಹದಲ್ಲಿ ಸೋಂಕಿನ ವಿರುದ್ಧ ಪ್ರತಿಕಾಯ ಸೃಷ್ಟಿಯಾಗಿ, ಸೋಂಕು ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆದು, ಇಡೀ ಸಮುದಾಯವೇ ಸಂರಕ್ಷಣೆಗೆ ಒಳಗಾಗುವ ಪ್ರಕ್ರಿಯೆಯನ್ನು “ಹರ್ಡ್‌ ಇಮ್ಯುನಿಟಿ'(ಸಮೂಹ ಪ್ರತಿಕಾಯ)
ಎಂದು ಕರೆಯುತ್ತಾರೆ. ಅಂದರೆ, ಶೇ.80ರಷ್ಟು ಮಂದಿಯಲ್ಲಿ ಪ್ರತಿಕಾಯ ಸೃಷ್ಟಿಯಾಗಿ, ಅವರಲ್ಲಿ ರೋಗ ನಿರೋಧಕ ಶಕ್ತಿ ಬೆಳೆದಿರುತ್ತದೆ. ಅಂಥ ಸಂದರ್ಭದಲ್ಲಿ, ಸೋಂಕಿತರೊಂದಿಗೆ ಸಂಪರ್ಕ ಹೊಂದಿದರೂ ಅವರಿಗೆ ಸೋಂಕು ತಗಲುವುದಿಲ್ಲ. ಸಾಮಾನ್ಯವಾಗಿ ಸಮೂಹ ಪ್ರತಿಕಾಯ ಸಾಧಿಸಬೇಕೆಂದರೆ, ಜನಸಂಖ್ಯೆಯ ಶೇ.50ರಿಂದ 90ರಷ್ಟು ಮಂದಿಯಲ್ಲಿ ಪ್ರತಿಕಾಯ ಸೃಷ್ಟಿಯಾಗಬೇಕಾದ್ದು ಅಗತ್ಯ.

ಇಲ್ಲಿ ಇಡೀ ಗ್ರಾಮವೇ ಪಾಸಿಟಿವ್‌!
ಹಿಮಾಚಲಪ್ರದೇಶದ ಲಹೌಲ್‌ ಕಣಿವೆ ಪ್ರದೇಶದ ಒಂದಿಡೀ ಊರಿಗೆ ಊರೇ ಕೊರೊನಾ ಪಾಸಿಟಿವ್‌ ಆಗಿದೆ. 52 ವರ್ಷದ ವ್ಯಕ್ತಿಯೊಬ್ಬ ರನ್ನು ಹೊರತುಪಡಿಸಿ ಊರಲ್ಲಿರುವ ಎಲ್ಲರಿಗೂ ಸೋಂಕು ದೃಢಪಟ್ಟಿದೆ. ಥೋರಂಗ್‌ ಎಂಬ ಹಳ್ಳಿಯಲ್ಲಿ ಇತ್ತೀಚೆಗೆ ಧಾರ್ಮಿಕ ಕಾರ್ಯಕ್ರಮ­ವೊಂದು ನಡೆದಿತ್ತು. ಅಲ್ಲಿನ ಎಲ್ಲರೂ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಇಲ್ಲಿಂದಲೇ ಸೋಂಕು ಎಲ್ಲರಿಗೂ ಹರಡಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊರೊನಾ ಸ್ಥಿತಿಗತಿ
ಅಮೆರಿಕ
ಒಂದೇ ದಿನ 2 ಸಾವಿರ ಮಂದಿಯ ಬಲಿಪಡೆದಿದೆ. 24 ಗಂಟೆಗಳಲ್ಲಿ 1.87 ಲಕ್ಷ ಮಂದಿಗೆ ಕೊರೊನಾ ದೃಢಪಟ್ಟಿದೆ. ಇನ್ನಷ್ಟು ನಿರ್ಬಂಧ, ಕರ್ಫ್ಯೂ ವಿಧಿಸುವ ಕುರಿತು ವಿವಿಧ ಪ್ರಾಂತ್ಯಗಳ ಗವರ್ನರ್‌ಗಳು ಚಿಂತನೆ ಆರಂಭಿಸಿದ್ದಾರೆ.

ಹಾಂಕಾಂಗ್‌
ಮತ್ತೆ ಸೋಂಕು ಪರಿಸ್ಥಿತಿ ಗಂಭೀರವಾಗಿದೆ ಎಂದು ತಜ್ಞರು ಎಚ್ಚರಿಸಿದ ಹಿನ್ನೆಲೆಯಲ್ಲಿ 2 ವಾರಗಳ ಕಾಲ ಶಾಲೆಗಳಿಗೆ ರಜೆ ಘೋಷಿಸ­ ಲಾಗಿದೆ. ಅನಗತ್ಯವಾಗಿ ಗುಂಪುಗೂಡ­ದಂತೆ ಜನರಿಗೆ ಎಚ್ಚರಿಸಲಾಗಿದೆ.

ಆಸ್ಟ್ರೇಲಿಯಾ
“ಕ್ಲಿಷ್ಟಕರ ನಿರ್ಬಂಧ’ ಹೇರಿದ್ದ ದ.ಆಸ್ಟ್ರೇಲಿಯಾ ಶುಕ್ರವಾರ ನಿರ್ಬಂಧ ವಾಪಸ್‌ ಪಡೆದಿದೆ. ಪಿಜ್ಜಾ ಡೆಲಿವರಿ ಬಾಯ್‌ ತನ್ನ ಸಂಪರ್ಕಿತರ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದು ಬಹಿರಂಗ ವಾದ ಕಾರಣ ನಿರ್ಬಂಧ ರದ್ದುಪಡಿಸಲಾಗಿದೆ

ಟರ್ಕಿ
ದಿನಕಳೆದಂತೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟರ್ಕಿಗೆ ವಿಸಿಟ್‌ ವೀಸಾ ವಿತರಣೆಯನ್ನು ರದ್ದುಗೊಳಿಸಿ ಯುಎಇ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಪಾಕಿಸ್ಥಾನ
ಸೋಂಕಿನ ಎರಡನೆ ಅಲೆ ಆರಂಭವಾಗಿದೆ. ಒಂದೇ ದಿನ 2738 ಮಂದಿಗೆ ಸೋಂಕು ತಗಲಿದೆ. ಜು.11ರ ಬಳಿಕ ಇಷ್ಟೊಂದು ಪ್ರಕರಣ ಪತ್ತೆಯಾಗಿದ್ದು ಇದೇ
ಮೊದಲು.

ಟಾಪ್ ನ್ಯೂಸ್

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

5

Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ;‌ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.