ಬ್ಲೂವೇಲ್ ಗೇಮ್‌ಗೆ ದೇಶದಲ್ಲಿ 4ನೇ ಬಲಿ
Team Udayavani, Sep 1, 2017, 6:00 AM IST
ಮದುರೆ: ಮಕ್ಕಳು, ವಿದ್ಯಾರ್ಥಿಗಳನ್ನು ಬಲಿತೆಗೆದುಕೊಳ್ಳುತ್ತಿರುವ ಅಪಾಯಕಾರಿ ಆನ್‌ಲೈನ್ ಆಟ ಬ್ಲೂವೇಲ್ ಚಾಲೆಂಜ್ ಇದೀಗ ತಮಿಳುನಾಡಿನಲ್ಲೂ ಜೀವ ಬಲಿ ಪಡೆದಿದೆ.
19ರ ಹರೆಯದ ಬಿಕಾಂ ವಿದ್ಯಾರ್ಥಿ ವಿಘ್ನೇಶ್ ನೇಣಿಗೆ ಶರಣಾಗಿದ್ದಾನೆ. ಈ ಮೂಲಕ ಆಗಸ್ಟ್ ತಿಂಗಳೊಂದರಲ್ಲೇ ದೇಶದಲ್ಲಿ ಬ್ಲೂವೇಲ್‌ಗೆ ನಾಲ್ವರು ಪ್ರಾಣ ಕಳೆದುಕೊಂಡಂತಾಗಿದೆ. ಆಘಾತಕಾರಿ ವಿಚಾರವೆಂದರೆ, ತಮಿಳುನಾಡಿನಲ್ಲಿ ಇನ್ನೂ 75 ಮಂದಿ ವಿದ್ಯಾರ್ಥಿಗಳು ಈ ಸಾವಿನ ಆಟವನ್ನು ಆಡುತ್ತಿದ್ದಾರೆ ಎಂದು ಸ್ವತಃ ಪೊಲೀಸರೇ ಬಹಿರಂಗಪಡಿಸಿದ್ದಾರೆ.
ಒಳಹೋದರೆ, ಹೊರಬರಲಾಗದು: ನೇಣಿಗೆ ಕುತ್ತಿಗೆ ಒಡ್ಡುವ ಮೊದಲು ವಿಘ್ನೇಶ್ ಪತ್ರವೊಂದನ್ನು ಬರೆದಿಟ್ಟಿದ್ದು, ಈ ಡೆಡ್ಲಿ ಗೇಮ್‌ನ ಆತಂಕವನ್ನು ಇನ್ನಷ್ಟು ಹೆಚ್ಚಿಸುವಂತಿದೆ. “ಬ್ಲೂವೇಲ್- ಇದು ಆಟವಲ್ಲ, ಅಪಾಯ. ಒಮ್ಮೆ ನೀವು ಇದರೊಳಗೆ ಪ್ರವೇಶಿಸಿದರೆ, ಮತ್ತೆ ಹೊರಬರಲು ಸಾಧ್ಯವೇ ಇಲ್ಲ,’ ಎಂದು ವಿಘ್ನೇಶ್ ಬರೆದಿದ್ದಾನೆ. ಜತೆಗೆ, ಅವನ ಎಡಗೈ ಮೇಲೆ ಬ್ಲೂವೇಲ್‌ನ ಚಿತ್ರವನ್ನೂ ಕೆತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಸ್ಟರ್‌ಮೈಂಡ್ ಯುವತಿ ಬಂಧನ: ಬ್ಲೂವೇಲ್ ಆಟದ ಮಾಸ್ಟರ್‌ಮೈಂಡ್ , 17ರ ಯುವತಿಯನ್ನು ರಷ್ಯಾ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈಕೆ ಹಲವು ಬ್ಲೂವೇಲ್ ಆಟಗಳ ಗುಂಪುಗಳನ್ನು ನಿಯಂತ್ರಿಸುತ್ತಿದ್ದಳು ಹಾಗೂ ಯಾರು ತನ್ನ ಸೂಚನೆಯಂತೆ ನಡೆದುಕೊಳ್ಳುವುದಿಲ್ಲವೋ, ಅವರನ್ನು ಕೊಲ್ಲುವ ಅಥವಾ ಅವರ ಕುಟುಂಬ ಸದಸ್ಯರನ್ನು ಹತ್ಯೆಗೈಯ್ಯುವ ಬೆದರಿಕೆ ಹಾಕುತ್ತಿದ್ದಳು. ಆರಂಭದಲ್ಲಿ ಈಕೆಯೂ ಬ್ಲೂವೇಲ್ ಆಡಿದ್ದು, ಅಂತಿಮ ಟಾಸ್ಕ್ ಪೂರ್ಣಗೊಳಿಸಿರಲಿಲ್ಲ. ಹೀಗಾಗಿ, ತಾನೇ “ಅಡ್ಮಿನ್’ ಆಗಿ, ವಿಶ್ವಾದ್ಯಂತ ಹಲವರನ್ನು ಬಲಿತೆಗೆದುಕೊಳ್ಳಲು ಆರಂಭಿಸಿದಳು. ಆಕೆ, ಸಂತ್ರಸ್ತರಲ್ಲಿ ತನ್ನನ್ನು ತಾನು ಹುಡುಗ ಎಂದು ಪರಿಚಯಿಸಿಕೊಳ್ಳುತ್ತಿದ್ದಳು ಎಂದಿದ್ದಾರೆ ಪೊಲೀಸರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.