ಅಮರನಾಥದತ್ತ ಮೊದಲ ತಂಡ
Team Udayavani, Jul 1, 2019, 5:24 AM IST
ಅಮರನಾಥ ಯಾತ್ರಿಕರ ಮೊದಲ ತಂಡಕ್ಕೆ ಭದ್ರತೆ ಒದಗಿಸುತ್ತಿರುವ ಭದ್ರತಾ ಸಿಬಂದಿ
ಶ್ರೀನಗರ/ಜಮ್ಮು, : ಪ್ರಸಕ್ತ ವರ್ಷದ ಅಮರನಾಥ ಯಾತ್ರೆಗೆ ಸೋಮವಾರ ವಿಧ್ಯುಕ್ತ ಚಾಲನೆ ಸಿಗಲಿದ್ದು, 2,234 ಯಾತ್ರಿಕರ ಮೊದಲ ತಂಡ ರವಿವಾರ ಬಿಗಿ ಭದ್ರತೆಯೊಂದಿಗೆ ಜಮ್ಮು ತಲುಪಿದೆ.
46 ದಿನಗಳ ಕಾಲ ನಡೆಯುವ ಈ ಯಾತ್ರೆಯೆಂದು ಈಗಾಗಲೇ ದೇಶಾ ದ್ಯಂತದ ಸುಮಾರು 1.5 ಲಕ್ಷ ಯಾತ್ರಿಕರು ನೋಂದಾಯಿಸಿ ಕೊಂಡಿದ್ದಾರೆ. ಜಮ್ಮು – ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್‌ಗಾಮ್ ಟ್ರ್ಯಾಕ್(36 ಕಿ.ಮೀ.) ಮತ್ತು ಗಂದೇರ್‌ಬಾಲ್ ಜಿಲ್ಲೆಯ ಬಲ್ತಾಲ್(14 ಕಿ.ಮೀ.) ಮಾರ್ಗದಲ್ಲಿ ಯಾತ್ರೆ ಸಾಗಲಿದೆ.ರವಿವಾರ ಮೂವರು ಮೋಟಾರು ಬೈಕುಗಳು ಸೇರಿದಂತೆ 93 ವಾಹನಗಳಲ್ಲಿ ಯಾತ್ರಿಕರು ಜಮ್ಮುವಿನ ಭಗವತಿನಗರ ಬೇಸ್‌ಕ್ಯಾಂಕ್‌ನಿಂದ ಯಾತ್ರೆಗೆ ಹೊರಟಿದ್ದಾರೆ. ಉಗ್ರರ ದಾಳಿಯ ಭೀತಿ ಇರುವ ಕಾರಣ ಯಾತ್ರಿಕರಿಗೆ ಬಹುಹಂತದ ಭದ್ರತೆಯನ್ನು ಕಲ್ಪಿಸಲಾಗಿದೆ.
ಭದ್ರತಾ ವ್ಯವಸ್ಥೆಗಳೇನು?
ಯಾತ್ರಿಕರು ಹಾಗೂ ಅವರ ವಾಹನಗಳನ್ನು ಟ್ರ್ಯಾಕ್ ಮಾಡಲು ಉಪಗ್ರಹ ಹಾಗೂ ಚಿಪ್ ಆಧರಿತ ಟ್ರ್ಯಾಕಿಂಗ್ ವ್ಯವಸ್ಥೆ
-ಸಿಆರ್‌ಪಿಎಫ್ ಯೋಧರನ್ನು ಒಳಗೊಂಡ ವಿಶೇಷ ಮೋಟಾರ್‌ಸೈಕಲ್ ಪಡೆ. ಇಲ್ಲಿ ಯೋಧರ ಹೆಲ್ಮೆಟ್‌ಗಳಿಗೆ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ
-ಭದ್ರತಾ ಪಡೆಗಳ 300 ಹೆಚ್ಚುವರಿ ಕಂಪೆನಿಗಳ ನಿಯೋಜನೆ
ಡ್ರೋನ್‌ಗಳು, ಯುಎವಿಗಳು, ಐಪಿ ಆಧರಿತ ಸಿಸಿಟಿವಿ ಕ್ಯಾಮೆರಾ ಸೇರಿದಂತೆ ತಾಂತ್ರಿಕ ನಿಗಾ ವ್ಯವಸ್ಥೆ
ಪ್ರತಿಯೊಂದು ವಾಹನಕ್ಕೂ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಟ್ಯಾಗ್ ಅಳವಡಿಕೆ
-ಪ್ರತಿಯೊಬ್ಬ ಯಾತ್ರಿಕನಿಗೂ ಬಾರ್‌ಕೋಡ್
-ಜಮ್ಮುವಿನಿಂದ ಆರಂಭವಾಗಿ ಅಮರನಾಥ ದೇವಾಲಯದವರೆಗೂ ಬಿಗಿಭದ್ರತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.