ಭಾರತದ ಜಿಡಿಪಿ ನಿರೀಕ್ಷೆ ಶೇ. 7.8ಕ್ಕೆ ಏರಿಸಿದ ಫಿಚ್
Team Udayavani, Sep 22, 2018, 6:00 AM IST
ಹೊಸದಿಲ್ಲಿ: ಭಾರತದ ಜಿಡಿಪಿ ನಿರೀಕ್ಷೆಯನ್ನು ಫಿಚ್ ರೇಟಿಂಗ್ಸ್ ಪ್ರಸ್ತುತ ವಿತ್ತ ವರ್ಷದಲ್ಲಿ ಶೇ.7.4 ರಿಂದ ಶೇ.7.8ಕ್ಕೆ ಏರಿಸಿದೆ. ತನ್ನ ಜಾಗತಿಕ ಆರ್ಥಿಕ ಮುನ್ಸೂಚನೆ ವರದಿಯಲ್ಲಿ ಈ ಅಂಶವನ್ನು ದಾಖಲಿಸಿರುವ ಫಿಚ್ ರೇಟಿಂಗ್ಸ್, ತೈಲ ಬೆಲೆ ಏರಿಕೆ, ಬ್ಯಾಂಕ್ಗಳ ಆರ್ಥಿಕ ಸಂಕಷ್ಟದ ಬಗ್ಗೆ ಎಚ್ಚರಿಕೆಯನ್ನೂ ನೀಡಿದೆ. ಏಪ್ರಿಲ್-ಜೂನ್ ತ್ತೈಮಾಸಿಕದಲ್ಲಿ ನಿರೀಕ್ಷೆಗಿಂತ ಉತ್ತಮ ವಿತ್ತ ಪ್ರಗತಿ ದಾಖಲಾಗಿರುವುದರಿಂದ ಜಿಡಿಪಿ ನಿರೀಕ್ಷೆಯನ್ನು ನಾವು ಏರಿಸಿದ್ದೇವೆ ಎಂದು ವರದಿ ಮಾಡಿದೆ. ಏಪ್ರಿಲ್-ಜೂನ್ ತ್ತೈಮಾಸಿಕದಲ್ಲಿ ದೇಶದ ಜಿಡಿಪಿ ಶೇ. 8.2ರ ದರದಲ್ಲಿತ್ತು. ಇದು ಫಿಚ್ ನಿರೀಕ್ಷೆ ಮಾಡಿದ ಶೇ. 7.7ಕ್ಕಿಂತ ಹೆಚ್ಚಾಗಿತ್ತು.
ಅಲ್ಲದೆ, ಕರೆನ್ಸಿ ಮೌಲ್ಯ ಇಳಿಕೆ ಹೆಚ್ಚುತ್ತಿದ್ದರೂ ಬ್ಯಾಂಕ್ಗಳು ಸ್ಥಿರವಾಗಿವೆ. ಆದರೆ ಬಡ್ಡಿ ದರ ಏರಿಕೆಯಾಗುತ್ತಿರುವುದು ಗಮನಿಸಬೇಕಾದ ಸಂಗತಿ. ಜಿಎಸ್ಟಿ ನಂತರದಲ್ಲಿ ವಹಿವಾಟು ಪ್ರಗತಿ ಕಂಡಿರುವುದರಿಂದ ಈ ಸುಧಾರಣೆ ಕಂಡುಬಂದಿದೆ ಎಂದು ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.