ಆಟೋ ವಲಯ -ಬಿಸ್ಕೆಟ್ ಕಂಪನಿಗಳಿಗೆ ನಿರಾಸೆ?
ಜಿಎಸ್‌ಟಿ ರಿಯಾಯಿತಿ ಕಡಿತ ಅಸಂಭವ
Team Udayavani, Sep 18, 2019, 7:00 PM IST
ಹೊಸದಿಲ್ಲಿ: ಶುಕ್ರವಾರ ದಿಲ್ಲಿಯಲ್ಲಿ ಸರಕು ಮತ್ತು ಸೇವಾ ತೆರಿಗೆ ಸಮಿತಿ (ಜಿಎಸ್‌ಟಿ ಕೌನ್ಸಿಲ್) ಸಭೆ ನಡೆಯಲಿದ್ದು, ಕೆಲವು ವಲಯಗಳಿಗೆ ಜಿಎಸ್‌ಟಿ ದರ ಕಡಿತವಾಗಬಹುದೆನ್ನುವ ನಿರೀಕ್ಷೆ ಕಮರಿದೆ.
ಆಟೋ ಮತ್ತು ಬಿಸ್ಕೆಟ್ ತಯಾರಿಕೆ ವಲಯ ಕಳೆದ ಕೆಲವು ತಿಂಗಳಿಂದ ತೀವ್ರವಾಗಿ ಕುಸಿದಿದ್ದು, ಈ ಹಿನ್ನೆಲೆಯಲ್ಲಿ ಜಿಎಸ್‌ಟಿ ರಿಯಾಯಿತಿ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು.
ಜಿಎಸ್‌ಟಿ ತೆರಿಗೆ ದರ ಇಳಿಸುವ ಬಗ್ಗೆ ಫಿಟ್‌ಮೆಂಟ್ ಸಮಿತಿ ಶಿಫಾರಸು ಸಲ್ಲಿಸಬೇಕಿದ್ದು, ದರ ಇಳಿಸುವ ಬಗ್ಗೆ ಅದು ಯಾವುದೇ ಪ್ರಸ್ತಾವನೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ದರ ಕಡಿತ ಕ್ಷೀಣಗೊಂಡಿದೆ. ಸದ್ಯ ಆಟೋ ಮಾರುಕಟ್ಟೆ ಹಾಗೂ ಬ್ಯಾಂಕ್‌ಗಳ ವಲಯದಲ್ಲಿ ಆಗುತ್ತಿರುವ ಬದಲಾವಣೆಗಳ ಕಾರಣವನ್ನು ಮುಂದಿಟ್ಟುಕೊಂಡು ಫಿಟ್‌ಮೆಂಟ್ ಸಮಿತಿ ಯಾವುದೇ ಬದಲಾವಣೆಗೆ ಸೂಚಿಸಿಲ್ಲ.
ಸಮಿತಿ ವರದಿ ಹೇಳಿದ್ದೇನು?
ಆಟೋ ವಲಯದಲ್ಲಿ ಫಿಟ್‌ಮೆಂಟ್ ಸಮಿತಿ ಕೆಲವೊಂದು ಅಂಶಗಳನ್ನು ಮನಗಂಡಿದೆ. ಅದರ ಪ್ರಕಾರ ಈಗಿನ ಹಿನ್ನಡೆಗೆ ಬ್ಯಾಂಕ್ ಹೊರತಾದ ಸಾಲಗಾರರು ಕಾರಣ, ಅಲ್ಲದೇ ಆಟೋ ಕೈಗಾರಿಕೆಗಳ ಹಿನ್ನೆಡೆ, ಬೇಡಿಕೆ ಪೂರೈಕೆ ನಡುವಿನ ಅಸಮತೋಲನ, ಬಿಎಸ್4 ಮತ್ತು ಬಿಎಸ್6 ಎಂಜಿನ್ ವಾಹನಗಳ ಮಾರಾಟದಲ್ಲಿ ಆದ ಬದಲಾವಣೆ, ಹಣದ ಚಲಾವಣೆ ಕುಂಠಿತಗೊಂಡಿದ್ದರಿಂದಲೂ ಹೀಗಾಗಿದೆ ಎಂದು ಹೇಳಿದೆ. ಅಲ್ಲದೇ ಒಂದು ವೇಳೆ ಈಗ ಜಿಎಸ್‌ಟಿ ದರ ಕಡಿತ ಮಾಡಿದರೆ ಅದರ ಪರಿಣಾಮ ಬೇರೆಯ ವಲಯಗಳ ಮೇಲೂ ಆಗಬಹುದು. ಅಲ್ಲದೇ ಇತರ ವಲಯದವರೂ ದರ ಕಡಿತಕ್ಕೆ ಆಗ್ರಹಿಸಬಹುದು ಎಂದು ಹೇಳಿದೆ.
ಬಿಸ್ಕೆಟ್‌ಯೂ ಆಸೆ ನಿರಾಸೆ?
ಬಿಸ್ಕೆಟ್ ಸೇರಿದಂತೆ ಬೇಕರಿ ತಿನ್ನಿಸುಗಳು, ತರಕಾರಿಗಳು, ಮಿನರಲ್ ವಾಟರ್ ಬಾಟಲಿಗಳು, ಹಾಗೂ ಸಿದ್ಧ ಆಹಾರ ಪ್ಯಾಕೆಟ್‌ಗಳ ಮೇಲಿನ ದರದ ಮೇಲಿನ ಶುಲ್ಕವನ್ನು ಕಡಿತಗೊಳಿಸಲು ಪಾಲೇಜಿ, ಬ್ರಿಟಾನಿಯಾ ಕಂಪನಿಗಳು ಕೇಳಿಕೊಂಡಿದ್ದವು. ಆದರೆ ಅವರ ಆಸೆಯೂ ನಿರಾಸೆಗೊಂಡಿದ್ದು, ಪ್ಯಾನಲ್ ಸದಸ್ಯರು ಸದ್ಯ ದರದಲ್ಲಿ ಯಾವುದೇ ಕಡಿತ ಮಾಡುವುದಿಲ್ಲ ಎಂದಿದ್ದಾರೆ. ಬಿಸ್ಕೆಟ್‌ಗೆ ವಿವಿಧ ಸ್ಲಾéಬ್‌ಗಳಲ್ಲಿ ದರಗಳನ್ನು ವಿಧಿಸುವುದರಿಂದ ತೆರಿಗೆ ತಪ್ಪಿಸಲು ಕಾರಣವಾಗಬಹುದು ಎಂದು ಅದು ಅಭಿಪ್ರಾಯ ಪಟ್ಟಿದೆ. ಸದ್ಯ ಕಡಿಮೆ ದರದ ಬಿಸ್ಕೆಟ್‌ಗಳ ಮೇಲೆ ಶೇ.18ರಷ್ಟು (100 ಕೆ.ಜಿ.) ಜಿಎಸ್‌ಟಿ ಇದ್ದು ಇದನ್ನು ಶೇ.5ರಷ್ಟಕ್ಕೆ ಇಳಿಸಬೇಕೆನ್ನುವ ಬೇಡಿಕೆ ಕಂಪೆನಿಗಳದ್ದಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.