ಮಣಿಪುರ ಬಾಂಬ್ ಸ್ಫೋಟ: ಇಬ್ಬರು ಮಹಿಳೆಯರ ಸಹಿತ ಐವರು ಅರೆಸ್ಟ್
Team Udayavani, May 12, 2018, 5:36 PM IST
ಇಂಪಾಲ : ಮಣಿಪುರದ ಇಂಪಾಲ ಪೂರ್ವ ಜಿಲ್ಲೆಯಲ್ಲಿ ಈ ವಾರದ ಆದಿಯಲ್ಲಿ ಕೊಯಿರೇಂಗೀ ಎಂಬಲ್ಲಿನ ಬಿಎಸ್ಎಫ್ ಕ್ಯಾಂಪ್ ಹೊರಗೆ ನಡೆದಿದ್ದ ಭೀಕರ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಇಬ್ಬರು ಮಹಿಳೆಯರ ಸಹಿತ ಒಟ್ಟು ಐವರನ್ನು ಬಂಧಿಸಿರುವುದಾಗಿ ಮಣಿಪುರ ಪೊಲೀಸ್ ದಳದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಮೇ 9ರಂದು ನಡೆದಿದ್ದ ಈ ಬಾಂಬ್ ಸ್ಫೋಟದಲ್ಲಿ ಇಬ್ಬರು ಬಿಎಸ್ಎಫ್ ಯೋಧರು ಮಡಿದು ಮೂವರು ಪೌರರು ಗಾಯಗೊಂಡಿದ್ದರು.
ಬಾಂಬ್ ಸ್ಫೋಟ ನಡೆದ ಕ್ಷಣದಿಂದ ತೀವ್ರ ಕಟ್ಟೆಚ್ಚರ ವಹಿಸಿ ಗುಪ್ತಚರ ಮಾಹಿತಿಯನ್ನು ಆಧರಿಸಿ 24 ತಾಸುಗಳ ಒಳಗೆ ಐವರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಸಫಲರಾದರು ಎಂದು ಮಣಿಪುರ ಪೊಲೀಸ್ ಮಹಾ ನಿರ್ದೇಶಕರು ಇಂದಿಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಬಂಧಿತ ಐವರಲ್ಲಿ ಓರ್ವನು ನಿಷೇಧಿತ ಕಾಂಗ್ಲಿಪಾಕ್ ರೆವಲ್ಯೂಷನರಿ ಪಕ್ಷದ ಸಕ್ರಿಯ ಸದಸ್ಯನಾಗಿದ್ದಾನೆ ಎಂದವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.