ಮುಂಬಯಿಯಲ್ಲಿ ವಿಮಾನ ಪತನ: ಐದು ಸಾವು
Team Udayavani, Jun 29, 2018, 6:00 AM IST
ಮುಂಬಯಿ: ಪೈಲಟ್‌ನ ನಿಯಂತ್ರಣ ತಪ್ಪಿದ ಲಘು ವಿಮಾನವೊಂದು ನಿರ್ಮಾಣ ಹಂತದ ಕಟ್ಟಡದ ಮೇಲೆ ಪತನಗೊಂಡು, ಹೊತ್ತಿ ಉರಿದ ಘಟನೆ ಪೂರ್ವ ಮುಂಬೈನ ಘಾಟ್ಕೊಪರ್ ನಗರದಲ್ಲಿ ಗುರುವಾರ ನಡೆದಿದೆ. ಘಟನೆಯಲ್ಲಿ ಇಬ್ಬರು ಪೈಲಟ್‌ಗಳು ಸೇರಿ ಐವರು ಮೃತಪಟ್ಟಿದ್ದಾರೆ. 24 ಗಂಟೆಗಳ ಅಂತರದಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ.
ಪತನಗೊಂಡಿರುವ “ಕಿಂಗ್ ಏರ್ ಸಿ90′ ವಿಮಾನ 12 ಸೀಟುಗಳ ಸಾಮರ್ಥ್ಯದ್ದಾಗಿದ್ದು, ಇಬ್ಬರು ಪೈಲಟ್‌ಗಳು ಹಾಗೂ ಇಬ್ಬರು ನಿರ್ವ ಹಣಾ ಎಂಜಿನಿಯರ್‌ಗಳು ವಿಮಾನದಲ್ಲಿದ್ದರು. ಈ ನಾಲ್ವರೂ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಪತನದ ಬಳಿಕ ವಿಮಾನ ಕಟ್ಟಡದ ಮೇಲಿಂದ ಕೆಳಕ್ಕೆ ಉರುಳಿದ ಪರಿಣಾಮ ಪಾದಚಾರಿಯೊಬ್ಬರು ದುರ್ಮರಣಕ್ಕೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರವಷ್ಟೇ ನಾಸಿಕ್‌ನಲ್ಲಿ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಎಂಜಿನಿಯರ್‌ಗಳು ಪ್ರಯಾಣಿಸುತ್ತಿದ್ದ ಸುಖೋಯ್ ಸು-30ಎಂ ವಿಮಾನ ಪತನಗೊಂಡಿತ್ತು. ಅದೃಷ್ಟವಶಾತ್ ಯಾರಿಗೂ ಏನೂ ಆಗಿರಲಿಲ್ಲ. ಇದರ ಬೆನ್ನಿಗೇ ಮುಂಬೈ ದುರಂತ ಸಂಭವಿಸಿದೆ.
ಯುವೈ ಏವಿಯೇಷನ್‌ಗೆ ಸೇರಿದ್ದು: ಉತ್ತರ ಪ್ರದೇಶ ಸರಕಾರಕ್ಕೆ ಸೇರಿದ್ದ ಈ ವಿಮಾನವನ್ನು ಇತ್ತೀಚೆಗಷ್ಟೇ ಯುವೈ ಏವಿಯೇಷನ್‌ಗೆ ಮಾರಾಟ ಮಾಡಲಾಗಿತ್ತು.
ತನಿಖೆಗೆ ಆದೇಶ: ಪ್ರಾಥಮಿಕ ವರದಿ ಪಡೆದು ಕೊಂಡಿರುವ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು, “ಕೂಡಲೇ ಸಮಗ್ರ ತನಿಖೆ ನಡೆಸಿ ವರದಿ ನೀಡಿ’ ಎಂದು ಡಿಜಿಸಿಎಗೆ ನಿರ್ದೇಶನ ನೀಡಿದ್ದಾರೆ.
ಪೈಲಟ್ ಸಮಯ ಪ್ರಜ್ಞೆಯಿಂದ ಹಲವರ ಜೀವ ಉಳಿದಿದೆ. ತಮ್ಮ ಜೀವದ ಹಂಗು ತೊರೆದು, ಜನನಿಬಿಡ ಪ್ರದೇಶದಲ್ಲಿ ಬೀಳಬಹುದಾದ ವಿಮಾನ ವನ್ನು ನಿರ್ಮಾಣ ಹಂತದ ಕಟ್ಟಡದ ಮೇಲೆ ಬೀಳಿಸಿದ್ದಾರೆ. ಅವರಿಗೊಂದು ಸಲಾಮ್. ಆದರೆ, ದುರದೃಷ್ಟವಶಾತ್ ಐದು ಸಾವು ಸಂಭವಿಸಿದೆ.
ಪ್ರಫುಲ್ ಪಟೇಲ್, ನಾಗರಿಕ ವಿಮಾನಯಾನ ಮಾಜಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ತಪ್ಪುಗಳನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ? ಭಾಗವತ್ ರನ್ನು ಪ್ರಶ್ನಿಸಿದ ಕೇಜ್ರಿವಾಲ್
Sabarimala; ಯಾತ್ರಿಗಳಿಗೆ ಅರಣ್ಯ ಮಾರ್ಗದ ವಿಶೇಷ ಪಾಸ್ ತಾತ್ಕಾಲಿಕ ಸ್ಥಗಿತ
ISRO: ಜನವರಿ ತಿಂಗಳಲ್ಲಿ 100ನೇ ಉಡಾವಣೆ
Covid Vaccine: ಪತ್ನಿ ಕೊಂದಿದ್ದವನ ಪತ್ತೆಗೆ ನೆರವಾದ ಕೋವಿಡ್ ಲಸಿಕೆ!
Telangana: ಮದ್ಯದಂಗಡಿಗೆ ನುಗ್ಗಿ ದೋಚಿದ: ಅಲ್ಲೇ ಕುಡಿದು ಆಸ್ಪತ್ರೆ ಸೇರಿದ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP ತಪ್ಪುಗಳನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ? ಭಾಗವತ್ ರನ್ನು ಪ್ರಶ್ನಿಸಿದ ಕೇಜ್ರಿವಾಲ್
2025ಕ್ಕೆ 25 ಆಪ್ತ ಸಲಹೆಗಳು: ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ…
Bengaluru: ಮಾಜಿ ಕಾರ್ಪೋರೇಟರ್ ರೇಖಾ ಹತ್ಯೆ; 8 ಮಂದಿಗೆ ಜೀವಾವಧಿ ಶಿಕ್ಷೆ
Gold Fraud Case: ಐಶ್ವರ್ಯ ಗೌಡ ದಂಪತಿಗೆ ಹೈಕೋರ್ಟ್‌ನಿಂದ ಜಾಮೀನು
Aishwarya Gowda Case: ಇನ್ನೊಂದು ಚಿನ್ನದಂಗಡಿಗೆ ವಂಚಿಸಿದ್ದ ಐಶ್ವರ್ಯ ಗ್ಯಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.